rtgh
Headlines

ಇಳಿಕೆಯಾದ ಈರುಳ್ಳಿ ಬೆಲೆ! ಗ್ರಾಹಕರ ಮೊಗದಲ್ಲಿ ಸಂತಸ

onion price
Share

ಬೆಂಗಳೂರು: ಮಳೆಯಿಂದಾಗಿ ಏರುಗತಿಯಲ್ಲಿ ಸಾಗಿದ್ದದ ಈರುಳ್ಳಿ ದರದ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಚಿಲ್ಲರೆಯ ಮಾರುಕಟ್ಟೆಯಲ್ಲಿ ಗರಿಷ್ಠ Kgಗೆ 45 ರೂ. ನಂತೆ ಮಾರಾಟ ಆಗುತ್ತಿದೆ.

onion price

ಟೊಮೆಟೊ ಬೆಲೆ ಏರಿಕೆಯಾಗಿದ್ದು, ಇದರೊಂದಿಗೆ ಈರುಳ್ಳಿ ಬೆಲೆ ಕೂಡ ಏರಿಕೆಯ ಹಾದಿಯಲ್ಲಿತ್ತು. 2 ದಿನಗಳಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದೆರಡು ದಿನಗಳಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ.

ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಲ್ ಗೆ 3600 – 3800 ರೂ. ವರೆಗೆ ತಲುಪಿತ್ತು. ಸೋಮವಾರ 3200 -3400 ರೂಪಾಯಿಗೆ ವ್ಯಾಪಾರವಾಗಿದ್ದು, ಉಳಿದಂತೆ ಕ್ವಿಂಟಲ್ ಗೆ ಕನಿಷ್ಠ 1,500 ರೂಪಾಯಿಂದ ಗರಿಷ್ಠ 3200 ರೂಪಾಯಿವರೆಗೆ ಮಾರಾಟವಾಗಿದೆ.

ಯಶವಂತಪುರ, ದಾಸನಪುರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯು ಬಂದಿದೆ. ಹೀಗಾಗಿ ದರವು ಒಂದೆರಡು ದಿನಗಳಲ್ಲಿ ಚಿಲ್ಲರೆಯ ಮಾರುಕಟ್ಟೆಯಲ್ಲಿಯೂ ಸಹ ಕಡಿಮೆಯಾಗಲಿದೆ ಎಂದು ತಿಳಿಸಲಾಗಿದೆ.

ಇನ್ಮೇಲೆ ಸರ್ಕಾರಿ ಕೆಲಸ ಪಡೆಯುವ ನಿಯಮ ಬದಲು!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3000 ಹುದ್ದೆಗಳ ನೇಮಕ! ಅರ್ಜಿ ಸಲ್ಲಿಸಲು ಇಷ್ಟು ದಿನ ಮಾತ್ರ ಬಾಕಿ


Share

Leave a Reply

Your email address will not be published. Required fields are marked *