rtgh

ಇನ್ಮೇಲೆ ಸರ್ಕಾರಿ ಕೆಲಸ ಪಡೆಯುವ ನಿಯಮ ಬದಲು!

Goverment Job
Share

ಹಲೋ ಸ್ನೇಹಿತರೆ, ಸರ್ಕಾರಿ ಕೆಲಸ ಪಡೆಯಬೇಕೆಂದು ಆಸೆ ಇರುವವರಿಗೆ ಹೊಸ ಸುದ್ದಿ. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎನ್ನುತ್ತಾರೆ. ಅದೇ ರೀತಿ ಸರಕಾರಿ ಉದ್ಯೋಗಿಗಳಿಗೂ ಕೂಡ ಸಮಾಜದಲ್ಲಿ ಒಳ್ಳೆಯ ಗೌರವ, ಅತ್ಯುತ್ತಮ ಸ್ಥಾನ ಇದ್ದು ಸರಕಾರಿ ಕೆಲಸ ಹೊಂದಿರುವವರಿಗೆ ಸರಕಾರದಿಂದ ಅನೇಕ ಸೌಲಭ್ಯ ಕೂಡ ಸಿಗಲಿದೆ. ಸರಕಾರಿ ಕೆಲಸದಲ್ಲಿರುವ ಉದ್ಯೋಗಿ ಕೆಲಸದ ಸಮಯದಲ್ಲಿ ಅಸುನೀಗಿದರೆ ಆತನ ಕುಟುಂಬದಲ್ಲಿ ಅರ್ಹತೆಗೆ ಅನುಗುಣದ ಆಧಾರದ ಮೇಲೆ ಒಬ್ಬರಿಗೆ ಕೆಲಸ ನೀಡಲಾಗುವುದು. ಈಗ ಇದೇ ವಿಚಾರವಾಗಿ ರಾಜ್ಯ ಸರಕಾರವು ಮಹತ್ವದ ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Goverment Job

ಅನುಕಂಪದ ಆಧಾರದ ಮೇಲೆ ನೀಡುವ ನೌಕರಿ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರಕಾರ ಮುಂದಾಗಿದ್ದು 1996 ರಲ್ಲಿಯ ಮಹತ್ವದ ತಿದ್ದುಪಡಿ ಜಾರಿಗೆ ತಂದಿದೆ. ಈ ವಿಚಾರವಾಗಿ ಬಹಳ ಹಿಂದಿನಿಂದಲೂ ಸಾರ್ವಜನಿಕರಿಂದ ವಿವಿಧ ಅಂಶಗಳ ಬೇಡಿಕೆ ಬರುತ್ತಲಿದ್ದು ಅನುಕಂಪದ ಉದ್ಯೋಗ ಸೌಲಭ್ಯವನ್ನು ಕುಟುಂಬದ ಇತರ ಸದಸ್ಯರಿಗೆ ವಿಸ್ತರಿಸುವ ಬಗ್ಗೆ ಅನೇಕ ಬೇಡಿಕೆ ಬರುತ್ತಿದ್ದು 2021ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮೃತ ವ್ಯಕ್ತಿಯ ಹೆಂಡತಿ, ಮಗ, ಅವಿವಾಹಿತ ಮಗಳಿಗೆ ಮಾತ್ರ ನೌಕರಿ ಇರಲಾರದು ಬದಲಿಗೆ ಕುಟುಂಬದ ಇತರ ಸದಸ್ಯರಿಗೂ ಅವಕಾಶ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ?

  • ಅರ್ಜಿ ಸಲ್ಲಿಸುವ ವ್ಯಕ್ತಿಯ ವಯೋಮಿತಿ 55 ದಾಟಿರಬಾರದು.
  • ಸರಕಾರಿ ಉದ್ಯೋಗದಲ್ಲಿರುವ ಮಹಿಳೆ ಅಥವಾ ಪುರುಷ ಸಾವನಪ್ಪಿ ಒಂದು ವರ್ಷದ ಒಳಗೆ ಆ ಕೆಲಸದ ಇಲಾಖೆ ಮುಖ್ಯಸ್ಥರಿಗೆ ಉದ್ಯೋಗವನ್ನು ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಮೃತ ವ್ಯಕ್ತಿಯ ನಂತರ ಉದ್ಯೋಗ ಅಪ್ರಾಪ್ತರಿಗೆ ದೊರಕಬೇಕು ಎಂದಿದ್ದರೆ ಆಗ 2 ವರ್ಷ ನಂತರ 18 ವರ್ಷವಾಗುತ್ತದೆ ಎಂದರೆ ಆಗ ಮೃತ ಪಟ್ಟ 2 ವರ್ಷದ ಒಳಗೆ ಅರ್ಜಿ ಹಾಕಬಹುದು.
  • ಬಳಿಕ 18 ವರ್ಷದ ತರುವಾಯ ಉದ್ಯೋಗ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನು ಓದಿ: ವರ್ಗಾವಣೆಗಾಗಿ ಕಾಯುತ್ತಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!

ಅವಿವಾಹಿತರಾಗಿದ್ದರೆ ಈ ನಿಯಮ ಪಾಲಿಸಿ?

ಸರಕಾರಿ ಉದ್ಯೋಗದಲ್ಲಿರುವವರು ಮಹಿಳೆ ಅಥವಾ ಅವಿವಾಹಿತರಾಗಿದ್ದರೆ ಆ ಸಂದರ್ಭದಲ್ಲಿ ಆತ/ಆಕೆಯ ಸಹೋದರ ಸಹೋದರಿಗೆ ಅದೇ ಉದ್ಯೋಗ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು. ಸಹೋದರ, ಸಹೋದರಿ ಇಬ್ಬರಲ್ಲಿ ಯಾರಿಗೆ ಉದ್ಯೋಗ ನೀಡಬೇಕು ಎಂಬುದನ್ನು ಅವಿವಾಹಿತ ಮೃತ ವ್ಯಕ್ತಿಯ ತಂದೆ ತಾಯಿ ತಿಳಿಸಬೇಕಾಗುತ್ತದೆ. ಒಂದು ವೇಳೆ ತಂದೆ ತಾಯಿಯಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದರೆ ಆಗ ತಾಯಿ ತಿಳಿಸುವ ವ್ಯಕ್ತಿಗೆ ಅನುಕಂಪದ ನೌಕರಿ ದೊರೆಯುತ್ತದೆ. ತಂದೆ ತಾಯಿ ಮೃತರಾಗಿದ್ದಲ್ಲಿ ಪಕ್ಷದಲ್ಲಿ ವಯಸ್ಸಿನ ಆಧಾರದ ಮೇಲೆ ಸಹೋದರ ಅಥವಾ ಸಹೋದರಿಗೆ ಉದ್ಯೋಗ ನೀಡಲಾಗುವುದು.

ಇತರೆ ವಿಷಯಗಳು:

ಟೊಮೆಟೊ ಪ್ರಿಯರಿಗೆ ಶಾಕಿಂಗ್‌ ಸುದ್ದಿ: ದಿಢೀರನೆ ಕೆಜಿಗೆ ₹80 ಏರಿಕೆ!!

ಗೃಹಲಕ್ಷ್ಮಿ ಯೋಜನೆ ಇನ್ನಷ್ಟು ವಿಸ್ತರಣೆ! ಇಂತಹವರ ಖಾತೆಗೂ ಮುಂದಿನ ತಿಂಗಳಿಂದ ಹಣ


Share

Leave a Reply

Your email address will not be published. Required fields are marked *