rtgh

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಆರಂಭ

New Facilities To Govt School
Share

ಹಲೋ ಸ್ನೇಹಿತರೆ, ರಾಜ್ಯದ ಸರ್ಕಾರಿ ಶಾಲೆಗಳಳ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯವನ್ನು ಆರಂಭಿಸಲು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ವರ್ಷದಿಂದಲೇ ಈ ಯೋಜನೆ ಅನುಷ್ಠಾನವಾಗಲಿದ್ದು, ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ರೀತಿಯಲ್ಲಿಯೇ ಪ್ರೌಢಶಾಲೆಗಳಲ್ಲಿಯೂ ವಿಜ್ಞಾನ ಕಲಿಕೆಗೆ ಒತ್ತು ನೀಡಲಾಗುವುದು.

New Facilities To Govt School

ವಿಜ್ಞಾನದಲ್ಲಿ ವಿವಿಧ ಪ್ರಾಯೋಗಿಕ ಪಾಠಗಳು ಆರಂಭವಾಗುವುದರಿಂದ ಅದನ್ನು ಅರ್ಥೈಸಲು ಪ್ರಯೋಗಾಲಯ ಅವಶ್ಯಕತೆ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿಗಳ ವ್ಯವಸ್ಥೆ ಹಾಗೂ ಪ್ರಯೋಗಾಲಯಗಳೂ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ಪ್ರಯೋಗಾಲಯ ಆರಂಭಿಸಲು ಅನುದಾನ ನೀಡಿದೆ.

ಶಿಕ್ಷಣ ಇಲಾಖೆಯಲ್ಲಿ ಅಗತ್ಯ ಶಾಲೆಗಳನ್ನು ಗುರುತಿಸಿಸುವ ಮೂಲಕ ಸೈನ್ಸ್ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯವನ್ನು ಎರಡು ವರ್ಷಗಳ ಪ್ಯಾಕೇಜ್ ನಲ್ಲಿ ನೀಡಲು ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಸೌಲಭ್ಯ ಒದಗಿಸಲು ಅಗತ್ಯ ಅನುಮೋದನೆ ನೀಡಲಿದೆ.

ಇದನ್ನು ಓದಿ: ಸ್ವಂತ ಉದ್ಯಮ ಶುರು ಮಾಡಲು ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ!

ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಆರ್ಥಿಕ ಮತ್ತು ಭೌತಿಕ ಗುರಿ ನಿಗದಿಪಡಿಸಿ ಭರಿಸಲಾದ ವೆಚ್ಚದ ವಿವರವನ್ನು ಪ್ರತಿ ತಿಂಗಳು ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಮ್ ತಂತ್ರಾಂಶದ ಮೂಲಕ ಅಪ್ಡೇಟ್ ಮಾಡಬೇಕಿದೆ.

ರಾಜ್ಯದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 8, 9ನೇ ತರಗತಿಯಲ್ಲಿ ಗಣಿತ, ವಿಜ್ಞಾನ ವಿಷಯ ಕಲಿಕಾ ಸಾಧನೆಯೂ 50%ಗಿಂತ ಕಡಿಮೆ ಇದೆ ಎಂಬುದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.

ಇತರೆ ವಿಷಯಗಳು:

PF ಖಾತೆದಾರರಿಗೆ ಕಹಿ ಸುದ್ದಿ! ಈ ತಿಂಗಳಿನಿಂದ ನಿಮ್ಮ ಖಾತೆ ಆಗಲಿದೆ ಕ್ಲೋಸ್

ಇಂದು ದೇಶದ 9.26 ಕೋಟಿ ರೈತರಿಗೆ ಬಂಪರ್! ಪಿಎಂ ಕಿಸಾನ್‌‌ 17ನೇ ಕಂತಿನ ಹಣ ಬಿಡುಗಡೆ


Share

Leave a Reply

Your email address will not be published. Required fields are marked *