rtgh
Headlines

ಸ್ವಂತ ಉದ್ಯಮ ಶುರು ಮಾಡಲು ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ!

svanidhi scheme
Share

ಹಲೋ ಸ್ನೇಹಿತರೇ, ನಮ್ಮ ಕೇಂದ್ರ ಸರ್ಕಾರವು ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಜನರು ಸ್ವಾವಲಂಬಿಯಾಗಿ, ಅರ್ಥಿಕವಾಗಿ ಸದೃಢವಾಗಿರಲು ಹಲವು ಯೋಜನೆಗಳು ಜಾರಿಗೆ ಬಂದಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಹಲವು ಜನ ಕೆಲಸ ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ಎದುರಾಯಿತು, ಆ ಕಾರಣಕ್ಕೆ ಪಿಎಂ ಮೋದಿ ಅವರು ಸ್ವ ನಿಧಿ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ಸಾಲ ಕೊಡುವುದಕ್ಕೆ ಶುರು ಮಾಡಿದರು.

svanidhi scheme

Contents

ಸ್ವ ನಿಧಿ ಯೋಜನೆ:

ಸ್ವಾನಿಧಿ ಯೋಜನೆಯನ್ನು ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಈಗಾಗಲೇ 63 ಸಾವಿರಕ್ಕಿಂತ ಹೆಚ್ಚು ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ.

ಹಾಗೆಯೇ 11 ಸಾವಿರ ಕೋಟಿ ರೂಪಾಯಿಗಳನ್ನು ಈ ಯೋಜನೆಯ ಫಲಾನುಭವಿಗಳಿಗಾಗಿ ಮೀಸಲು ಇಡಲಾಗಿದೆ. ಹಾಗಾಗಿ ದೇಶದ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹದು. ಈ ಸಾಲ ನೀಡುವುದಕ್ಕೆ ಯಾವುದೇ ಸೆಕ್ಯೂರಿಟಿ ಕೇಳುವುದಿಲ್ಲ.

ಸ್ವ ನಿಧಿ ಯೋಜನೆಯ ಬಗ್ಗೆ ಮಾಹಿತಿ

ಹಲವಾರು ಜನರಿಗೆ ಸ್ವಂತ ಕೆಲಸ ಮಾಡಬೇಕು, ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಕನಸು ಕಂಡು, ಬಂಡವಾಳಕ್ಕೆ ಹಣ ಇಲ್ಲದೇ ಕಷ್ಟಪಡುತ್ತಿರುತ್ತಾರೆ. ಅಂಥವರು ಸ್ವ ನಿಧಿ ಯೋಜನೆಯ ಮೂಲಕ ಸಾಲ ಪಡೆದು, ನಿಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು. ಹಾಗೆಯೇ ಸಣ್ಣ ವ್ಯಾಪಾರ ನಡೆಸುತ್ತಿರುವವರು ಈ ಯೋಜನೆಯ ಮೂಲಕ ಸಹಾಯ ಪಡೆದು ದೊಡ್ಡ ಮಟ್ಟದಲ್ಲಿ ಶುರು ಮಾಡಬಹುದು. 10 ರಿಂದ 50 ಸಾವಿರ ವರೆಗೂ ಸಾಲ ಸಿಗುತ್ತದೆ.

ಇದನ್ನೂ ಸಹ ಓದಿ : ಇಳಿಕೆಯಾದ ಈರುಳ್ಳಿ ಬೆಲೆ! ಗ್ರಾಹಕರ ಮೊಗದಲ್ಲಿ ಸಂತಸ

ಎಷ್ಟು ಸಾಲ ಸಿಗುತ್ತದೆ?

ಪಿಎಂ ಸ್ವ ನಿಧಿ ಯೋಜನೆಯ ಮೂಲಕ ಸಾಲ ಪಡೆಯುವುದಾದರೆ, ಮೊದಲ ಬಾರಿಗೆ 10 ಸಾವಿರ ರೂಪಾಯಿ ಸಾಲ ಸಿಗುತ್ತದೆ. ಈ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಎರಡನೇ ಹಂತದಲ್ಲಿ 20 ಸಾವಿರ ಸಾಲ ಸಿಗುತ್ತದೆ. ಇದನ್ನು ಕೂಡ ಸರಿಯಾಗಿ ಪಾವತಿಸಿದರೆ 50 ಸಾವಿರ ಸಾಲ ಸಿಗುತ್ತದೆ. ಇಷ್ಟು ಮೊತ್ತವನ್ನು ಸರಿಯಾಗಿ ಪಾವತಿ ಮಾಡಿದರೆ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆಯಬಹುದು.

ಇನ್ನು ಯೋಜನೆಗೆ ಬಡ್ಡಿದರ ಎಷ್ಟು ಎಂದು ನೋಡುವುದಾದರೆ, 7% ಬಡ್ಡಿದರ ಇರಲಿದೆ. ಆದರೆ ಸಾಲದ ಅವಧಿ ಮುಗಿಯುವುದಕ್ಕಿಂತ ಮೊದಲೇ ಸಾಲ ಮರುಪಾವತಿ ಮಾಡಿಬಿಟ್ಟರೆ, ಬಡ್ಡಿ ಮೊತ್ತಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಇದರ ಅರ್ಥ ನೀವು ಬಡ್ಡಿ ಕಟ್ಟುವ ಅವಶ್ಯಕತೆಯೇ ಇರುವುದಿಲ್ಲ. ಹಾಗೆಯೇ 10 ಸಾವಿರ ರೂಪಾಯಿಯವರೆಗಿನ ಬಡ್ಡಿಗೆ ಸಹಾಯಧನ ಕೂಡ ಸಿಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಒಂದು ವೇಳೆ ನೀವು ಸ್ವ ನಿಧಿ ಯೋಜನೆಯ ಮೂಲಕ ಸಾಲ ಪಡೆಯಲು ಬಯಸಿದರೆ, ಮೊದಲಿಗೆ ನೀವು ಹತ್ತಿರದ ಸರ್ಕಾರಿ ಬ್ಯಾಂಕ್‌ಗೆ ಹೋಗಿ, ಈ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಪಡೆದು ಅದನ್ನು ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ. ನೀವು ನೀಡಿರುವ ಮಾಹಿತಿ ಎಲ್ಲವೂ ಸರಿ ಇದ್ದರೆ, ನಿಮಗೆ ಸಾಲ ಮಂಜೂರಾಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು https://pmsvanidih.mohua.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಇತರೆ ವಿಷಯಗಳು:

ರೈತರಿಗೆ ಸಿಗಲಿದೆ 2 ಲಕ್ಷ ಸಬ್ಸಿಡಿ ಸಾಲ! ಈ ರೀತಿ ಅಪ್ಲೈ ಮಾಡಿ

ರೈತರಿಗೆ ಸಿಹಿಸುದ್ದಿ: ನಾಳೆ ಕಿಸಾನ್ 17ನೇ ಕಂತಿನ ಹಣ ಖಾತೆಗೆ!

ಇಂದು ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’! ಏರಿಕೆಯಾಗಲಿದೆಯಾ ಮೂಲ ವೇತನ?


Share

Leave a Reply

Your email address will not be published. Required fields are marked *