rtgh
Headlines

ಎಣ್ಣೆ ಪ್ರಿಯರಿಗೆ ಶಾಕ್: ನಾಳೆಯಿಂದ ಮದ್ಯ ಮಾರಾಟ ಬಂದ್!

Liquor Sale Ban
Share

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಆರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ವಿಧಾನ ಪರಿಷತ್ ಚುನಾವಣೆ, ಲೋಕಸಭಾ ಚುನಾವಣಾ ಮತ ಎಣಿಕೆಯ ಹಿನ್ನೆಲೆಯಲ್ಲಿ ಎಣ್ಣೆ ಮಾರಾಟಕ್ಕೆ ನಿರ್ಬಂಧನೆಯನ್ನು ವಿಧಿಸಲಾಗಿದೆ.

Liquor Sale Ban

ಜೂನ್ 1 ರಿಂದ ಜೂನ್ 6ವರೆಗೆ ಎಣ್ಣೆ ಮಾರಾಟವು ಬಂದ್ ಆಗಲಿದೆ. ಜೂನ್ 2 ಹಾಗೂ ಜೂನ್ 4 ಹಾಗೂ ಜೂನ್ 6ರಂದು ಮದ್ಯ ಮಾರಾಟವು ಸಂಪೂರ್ಣವಾಗಿ ಬಂದ್ ಆಗಲಿದೆ. ಜೂ 1 ಹಾಗೂ ಜೂನ್ 3ರಂದು ಎಣ್ಣೆ ಮಾರಾಟವು ಭಾಗಶಃ ಬಂದ್ ಆಗಲಿದೆ.

ರಾಜ್ಯದಲ್ಲಿ ಲೋಕಸಭ ಚುನಾವಣೆಗೆ ಏಪ್ರಿಲ್ 24 ರಿಂದ 26ವರೆಗೆ ಎಣ್ಣೆ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈಗ ಮತ್ತೆ ಎಣ್ಣೆ ಮಾರಾಟಕದ ನಿರ್ಬಂಧಯನ್ನು ವಿಧಿಸಲಾಗಿದ್ದು, ಇದರಿಂದ ವಹಿವಾಟಿನ ಮೇಲೆ ದೊಡ್ಡ ಹೊಡೆತವು ಬೀಳಲಿದೆ ಎಂದು ಬೆಂಗಳೂರಿನ ಮದ್ಯ ಮಾರಾಟಗಾರರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶನಿವಾರ ಸಂಜೆಯಿಂದಲೇ ಮದ್ಯದ ಮಾರಾಟ ನಿಷೇಧ ಆರಂಭವಾಗುವುದರಿಂದ ವೀಕೆಂಡ್ ಕಾರ್ಪರೇಟ್ ಪಾರ್ಟಿಗಳಿಗೆ ಮಧ್ಯ ಪೂರೈಕೆಯು ಸಾಧ್ಯವಿಲ್ಲ. ಹೀಗಾಗಿ ಪ್ರತಿ ದಿನವು 30 ಲಕ್ಷ ರೂಪಾಯಿಗೂ ಅಧಿಕವಾದ ನಷ್ಟ ಆಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌! ಉಚಿತ ಶೂ, ಸಾಕ್ಸ್‌ ವಿತರಣೆಗೆ ಗ್ರೀನ್‌ ಸಿಗ್ನಲ್

‘ಫಸಲ್ ಭೀಮಾ ಯೋಜನೆ’ ನೋಂದಣಿಗೆ ಈ ದಾಖಲೆ ಕಡ್ಡಾಯ!


Share

Leave a Reply

Your email address will not be published. Required fields are marked *