ಹಲೋ ಸ್ನೇಹಿತರೇ, ನೀವು ದೇಶದ ಯಾವುದೇ ಕಾಲೇಜು, ವಿವಿಗಳಲ್ಲಿ ಪದವಿ & ಸ್ನಾತಕೋತ್ತರ ಪದವಿ ಕೋರ್ಸ್ ಪ್ರಸ್ತುತ ಓದುತ್ತಿದ್ದೀರಾ?. ಹಾಗಿದ್ರೆ ಲೈಫ್ ಗುಡ್ ಸ್ಕಾಲರ್‌ಶಿಪ್‌ಗೆ ತಕ್ಷಣ ಅರ್ಜಿ ಹಾಕಿ. ಪಡೆಯಿರಿ ಒಂದು ವರ್ಷಕ್ಕೆ ರೂ.1 ಲಕ್ಷ ಹಣ, ಈ ಹಣವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಎಲ್‌ಜಿ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ‘Life’s Good’ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಅನ್ನು ಸಿಎಸ್‌ಆರ್ ಉಪಕ್ರಮವಾಗಿ ಜಾರಿಗೆ ತಂದಿದೆ.
ಈ ಸ್ಕಾಲರ್‌ಶಿಪ್ ಗೆ ಪ್ರಸ್ತುತ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಉದ್ದೇಶ ಒಂದು ವರ್ಷಕ್ಕೆ ಮಾತ್ರ ಶೈಕ್ಷಣಿಕ ಕಾರ್ಯಗಳಿಗೆ ಹಣಕಾಸು ನೆರವು ನೀಡುವುದಾಗಿದೆ.
ಸ್ಕಾಲರ್‌ಶಿಪ್ ಹೆಸರು: ಲೈಫ್ ಗುಡ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ 2024
ಸ್ಕಾಲರ್‌ಶಿಪ್ ಸೌಲಭ್ಯ : 1 ವರ್ಷಕ್ಕೆ ರೂ.1,00,000 ಹಣಕಾಸಿನ ನೆರವು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2024
Contents
ಅರ್ಜಿ ಸಲ್ಲಿಸಲು ಅರ್ಹತೆಗಳು
- ವಿದ್ಯಾರ್ಥಿಗಳು ಯಾವುದೇ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದುವವರಾಗಬೇಕು.
- ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ’ಯಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್ ಆಗಿರಬೇಕು.
- ಇತರೆ ವರ್ಷಗಳಲ್ಲಿ ಅಧ್ಯಯನ ಮಾಡುತ್ತಿರುವವರು ಹಿಂದಿನ ವರ್ಷದ ಶಿಕ್ಷಣದಲ್ಲಿ ಕನಿಷ್ಠ ಶೇಕಡ.60 ಅಂಕ ಪಡೆದಿರಬೇಕು.
- ಲೈಫ್ ಗುಡ್ ಸ್ಕಾಲರ್‌ಶಿಪ್ ಅನ್ನು ಸಂಸ್ಥೆ ಕೆಲವು ಆಯ್ದ ಸಂಸ್ಥೆ ಅಥವಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು.
- Buddy4study, LG ಇಲೆಕ್ಟ್ರಾನಿಕ್ಸ್ ನ ಸಿಬ್ಬಂದಿಯ ಮಕ್ಕಳು ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲಾ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ.8 ಲಕ್ಷ ದಾಟಿರಬಾರದು.
- ಅರ್ಜಿಯನ್ನು 4 ಹಂತಗಳಲ್ಲಿ ಸ್ವೀಕಾರ ಮಾಡಲಾಗುವುದು.
- 1ನೇ ಹಂತದ ಸ್ಕಾಲರ್‌ಶಿಪ್‌ಗೆ ಯಾವೆಲ್ಲಾ ಕಾಲೇಜು/ ಸಂಸ್ಥೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಚೆಕ್ ಮಾಡಲು ಕ್ಲಿಕ್ ಮಾಡಿ.
- ಮುಂದಿನ ಹಂತಗಳ ಅರ್ಜಿ ವಿವರಗಳಿಗಾಗಿ ಆಗಾಗ ಭೇಟಿ ನೀಡುತ್ತಿರಿ.
ಅರ್ಜಿ ಸಲ್ಲಿಸಲು ಬೇಕಾದ ವಿವರಗಳು / ದಾಖಲೆಗಳು
- ಆಧಾರ್ ಕಾರ್ಡ್
- 2nd PUC ಅಂಕಪಟ್ಟಿ
- ಪದವಿ, ಪಿಜಿ ಪ್ರವೇಶದ ದಾಖಲೆ
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ
- ಪಾಸ್‌ಪೋರ್ಟ್ ಫೋಟೋ
ಅರ್ಜಿ ಹಾಕುವ ವಿಧಾನ
– ‘ಲೈಫ್ ಗುಡ್ ಸ್ಕಾಲರ್‌ಶಿಪ್ ಪ್ರೋಗ್ರಾಮ್‘ ಲಿಂಕ್ ಕ್ಲಿಕ್ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ.
– ನಂತರ ಸ್ಕ್ರಾಲ್‌ಡೌನ್ ಮಾಡಿ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಇಮೇಲ್, ಜಿಮೇಲ್, ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಲು ಪಾಪಪ್ ವಿಂಡೋ ಓಪನ್ ಆಗುತ್ತದೆ.
– ಮೊದಲು ರಿಜಿಸ್ಟ್ರೇಷನ್ ಪಡೆದು, ನಂತರ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು
ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ಹಣ ಬರುತ್ತೆ!
ಇಂದಿನಿಂದ ಮತ್ತೆ ಗುಡುಗು ಸಹಿತ ಮಳೆ! ಮುಂದಿನ ನಾಲ್ಕು ದಿನಗಳ ಕಾಲ ಎಚ್ಚರ