rtgh
Headlines

ಪಿಯುಸಿ ವಿದ್ಯಾರ್ಥಿಗಳಿಗೆ ಪಿಎಂ ಉಷಾ ಸ್ಕಾಲರ್‌ಶಿಪ್‌.! ಅಪ್ಲೇ ಮಾಡಿದವರಿಗೆ ರೂ. 20,000

pm usha scholarship
Share

ಹಲೋ ಸ್ನೇಹಿತರೇ, ನೀವು ಪಿಯುಸಿ ಮುಗಿಸಿ, ಬೇರೆ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದೀರಾ.. ಹಾಗಿದ್ರೆ ಇಲ್ಲಿದೆ ನೋಡಿ ನಿಮಗೆ ಒಂದು ಬೆಸ್ಟ್‌ ವಿದ್ಯಾರ್ಥಿವೇತನ. ಕೇಂದ್ರ ಸರ್ಕಾರದ ಹೈಯರ್ ಎಜುಕೇಷನ್‌ ಮಿನಿಸ್ಟ್ರಿ ನೀಡುವ ಪಿಎಂ ಉಷಾ ಸ್ಕಾಲರ್‌ಶಿಪ್‌ಗೆ ಈಗ ಅರ್ಜಿ ಆಹ್ವಾನಿಸಲಾಗಿದೆ.

pm usha scholarship

12ನೇ ತರಗತಿ / ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ & 3 ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಂ ಉಷಾ ಸ್ಕಾಲರ್‌ಶಿಪ್‌ ಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ಈ ಸ್ಕಾಲರ್‌ಶಿಪ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆದಿದೆ.

ಸ್ಕಾಲರ್‌ಶಿಪ್‌ ಹೆಸರುಪಿಎಂ ಉಷಾ ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನ ಸೌಲಭ್ಯRs.12000-20000.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಆಗಸ್ಟ್‌ 31, 2024
ವೆಬ್‌ ವಿಳಾಸwww.scholarship.gov.in
ಅರ್ಹತೆದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವವರು. ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದವರು.
ವಿದ್ಯಾರ್ಥಿವೇತನ ನೀಡುವ ಸಂಸ್ಥೆಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ

ಪಿಎಂ ಉಷಾ ಹೆಸರಿನಲ್ಲಿ 2024-25 ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈಗ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ಸ್ಕಾಲರ್‌ಶಿಪ್‌ ಪೋರ್ಟಲ್‌ www.scholarship.gov.in ಮೂಲಕ ನ್ಯಾಷನಲ್ ಇ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್‌ನ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್‌ 31, 2024 ರವರೆಗೆ ಅವಕಾಶ ನೀಡಲಾಗಿದೆ.

ಪಿಎಂ ಉಷಾ ಸ್ಕಾಲರ್‌ಶಿಪ್‌ ಸೌಲಭ್ಯಗಳೇನು?

ಪಿಎಂ ಉಷಾ ಸ್ಕಾಲರ್‌ಶಿಪ್‌ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅಯ್ಕೆಯಾದಲ್ಲಿ ಮೊದಲ ವರ್ಷ ತಲಾ 12 ರೂ ಪಡೆಯಲಿದ್ದು, ಮತ್ತು ಕೊನೆಯ ಎರಡು ವರ್ಷ ತಲಾ 20 ಸಾವಿರ ಪಡೆಯಲಿದ್ದಾರೆ.

ಹೆಚ್ಚಿನ ಮಾಹಿತಿ ರೂ.080-23311330.

ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ವೆಬ್‌ ವಿಳಾಸ https://scholarships.gov.in/ ಕ್ಕೆ ಭೇಟಿ ನೀಡಿ.
  • ತೆರೆದ ವೆಬ್‌ಸೈಟ್‌ನಲ್ಲಿ ‘Students’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ.
  • ಈ ವೆಬ್‌ಪೇಜ್‌ನಲ್ಲಿ ‘Apply For Scholarship >> Login’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪುಟ ತೆರೆಯುತ್ತದೆ. ಇಲ್ಲಿ ‘Register’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ನೀಡಲಾದ ಸೂಚನೆಗಳನ್ನು ಓದಿಕೊಂಡು, ಕೇಳಲಾದ ಮಾಹಿತಿಗಳನ್ನು ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್‌
  • ದ್ವಿತೀಯ ಪಿಯುಸಿ ಅಂಕಪಟ್ಟಿ, ಅಂಕಗಳು
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಪದವಿ ವ್ಯಾಸಂಗಕ್ಕೆ ಸೇರಿದ ದಾಖಲೆ, ಮಾಹಿತಿ.
  • ಇಮೇಲ್ ವಿಳಾಸ
  • ಮೊಬೈಲ್‌ ನಂಬರ್.
  • ಭಾವಚಿತ್ರ
  • ಇತರೆ ಮಾಹಿತಿಗಳು, ದಾಖಲೆಗಳು.

ಇತರೆ ವಿಷಯಗಳು

ಪಿಎಂ ಕಿಸಾನ್ ಹಣ ಹೆಚ್ಚಳದ ಬಗ್ಗೆ ಮಹತ್ವದ ತೀರ್ಮಾನ!

ಯುವಕರಿಗೆ ಕೇಂದ್ರದ ಬಂಪರ್ ಸ್ಕೀಮ್!‌ ಪ್ರತಿ ತಿಂಗಳು 5 ಸಾವಿರ ರೂ. ಇಂಟರ್ನ್ ಶಿಪ್ ಸೌಲಭ್ಯ


Share

Leave a Reply

Your email address will not be published. Required fields are marked *