rtgh
Headlines

ಟೊಮೆಟೊ ಪ್ರಿಯರಿಗೆ ಶಾಕಿಂಗ್‌ ಸುದ್ದಿ: ದಿಢೀರನೆ ಕೆಜಿಗೆ ₹80 ಏರಿಕೆ!!

Tomato Prices
Share

ಬೆಂಗಳೂರು: ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಮತ್ತೊಂದು ಬರೆಯನ್ನು ಎಳೆದಂತೆ ಟೊಮೆಟೊ ದರವು ಭಾರಿ ಏರಿಕೆಯನ್ನು ಕಂಡಿರುವುದು ನುಂಗಲಾರದ ತುತ್ತಾಗಿದೆ.

Tomato Prices

ಮಂಗಳವಾರ Kg ಗೆ ಗರಿಷ್ಠ 80 ರೂ.ನಂತೆ ಟೊಮೆಟೊ ಮಾರಾಟವಾಗಿದೆ. ರೋಗಗಳ ಬಾಧೆ, ಮಳೆಯ ಕಾರಣದಿಂದ ಟೊಮೆಟೊ ಪೂರೈಕೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ. ಶೀಘ್ರದಲ್ಲಿಯೇ ಟೊಮೇಟೊ ದರವು Kg ಗೆ 100-120 ರೂ. ವರೆಗೂ ಏರಿಕೆಯನ್ನು ಕಾಣುವ ಸಾಧ್ಯತೆಯು ಇದೆ.

ಈಗಾಗಲೇ ಹಸಿರು ತರಕಾರಿ, ಸೊಪ್ಪು, ಬೀನ್ಸ್ ಬೆಲೆ ಏರಿಕೆಯಾಗಿದ್ದು, ಟೊಮೆಟೊ ಬೆಲೆ ಸಹ ಏರಿಕೆಯಾಗಿದೆ. ಬೆಂಗಳೂರಿನ ಚಿಲ್ಲರೆ ಅಂಗಡಿಗಳಲ್ಲಿ 4-5 ದಿನಗಳ ಹಿಂದೆಯೆ Kgಗೆ 40 ರೂ. ಇದ್ದ ಟೊಮೇಟೊ ದರವು ಈಗ 80 ರೂ.ಗೆ ಏರಿಕೆಯನ್ನು ಕಂಡಿದೆ.

2 ಮತ್ತು 3ನೇ ದರ್ಜೆಯ ಟೊಮೇಟೊ ಬೆಲೆ Kg 50, 40 ರುಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

8th Pay Commission: ಸರ್ಕಾರಿ ನೌಕರರಿಗೆ ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ

PMFBY ಅಡಿಯಲ್ಲಿ 88,000 ಕ್ಕೂ ಹೆಚ್ಚು ರೈತರ ಖಾತೆಗೆ ಹಣ ಜಮಾ!


Share

Leave a Reply

Your email address will not be published. Required fields are marked *