rtgh
Headlines

₹2,000 ಬೆಳೆ ನಷ್ಟ ಪರಿಹಾರ ಹಣ ಬಂದಿಲ್ವಾ? ಹಾಗಿದ್ರೆ ಈ ಕೆಲಸ ಮಾಡಿ ತಕ್ಷಣ ಖಾತೆಗೆ ಬರುತ್ತೆ ದುಡ್ಡು

Parihara payment
Share

ಹಲೋ ಸ್ನೇಹಿತರೇ, 2023-24 ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಮೊದಲನೇ ಕಂತಿನ ಬೆಳೆ ನಷ್ಟ ಪರಿಹಾರ ರೂ 2,000 ಅರ್ಥಿಕ ನೆರವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಹಣವನ್ನು ಪಡೆಯದೇ ಇದ್ದವರು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Parihara payment

ಈಗಾಗಲೇ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ FID ನಂಬರ್ ಪಡೆದಿರುವ ಅರ್ಹ ಫಲಾನುಭವಿಗಳಿಗೆ ಮೊದಲನೇ ಕಂತಿನ ಬೆಳೆ ನಷ್ಟ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ.

ಕೆಲ ಅರ್ಹ ರೈತರಿಗೆ ತಾಂತ್ರಿಕ ಕಾರಣದಿಂದ ಮೊದಲ ಕಂತಿನ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ ಇಂತಹ ಅರ್ಹ ರೈತರುಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿ ಪ್ರಕಟಿಸಿ ಆ ರೈತರಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಕಂದಾಯ ಇಲಾಖೆಯಿಂದ ತಮ್ಮ ಪ್ರಕಟಣೆಯನ್ನು ಹೊರಡಿಸಿತ್ತು.

ಇದರಂತೆ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡ ಬಳಿಕ ಖಾತೆಗೆ ರೂ 2,000 ಬೆಳೆ ನಷ್ಟ ಪರಿಹಾರ ಜಮೆಯಾಗುತ್ತದೆ.

ಬೆಳೆ ನಷ್ಟ ಪರಿಹಾರ ರೂ 2,000 ಬರದೇ ಇರುವವರು ಈ ಕೆಳಗಿನ ದಾಖಲಾತಿಗಳು ಸರಿಯಾಗಿವೇ ಎಂದು ತಿಳಿದುಕೊಳ್ಳಬೇಕು:

1) ನಿಮ್ಮ ಜಮೀನಿನ ದಾಖಲೆ & ನಿಮ್ಮ ಬ್ಯಾಂಕ್ ವಿವರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ FID ನಂಬರ್ ರಚನೆ ಆಗಿದಿಯೇ ಎಂದು ತಿಳಿದುಕೊಳ್ಳಬೇಕು.

2) ನಿಮ್ಮ ಹೆಸರಿನಲ್ಲಿ FID ನಂಬರ್ ರಚನೆಯಾಗಿದ್ದರೆ ಆ ನಂಬರ್ ಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ number ಸೇರ್ಪಡೆ ಆಗಿದೆಯೇ? ಎಂದು ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳುಬಹುದಾಗಿದೆ.

3) ಯಾವುದೇ ಯೋಜನೆಯಡಿಯಲ್ಲಿ ನೇರ ನಗದು ವರ್ಗಾವಣೆ(DBT) ಮೂಲಕ ಹಣ ಪಡೆದುಕೊಳ್ಳಲು ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿರಲೇಬೇಕು ಅಂದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಆದ್ದರಿಂದ ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯೋ? ಇಲ್ಲವೋ? ಎಂಬುದನ್ನು ಚೆಕ್ ಮಾಡಿಕೊಳ್ಳಿ.

4) ನಿಮ್ಮ ಹೆಸರಿನಲ್ಲಿ FID ನಂಬರ್ ಇದ್ರೆ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದ್ದರು ನಿಮಗೆ ರೂ 2,000 ಬೆಳೆ ನಷ್ಟ ಪರಿಹಾರ ಜಮಾ ಆಗದಿದ್ದಲ್ಲಿ ಒಮ್ಮೆ ನಿಮ್ಮ ಹತ್ತಿರದ ಗ್ರಾಮ ಆಡಳಿತ ಅಧಿಕಾರಿ(VA) ಯನ್ನು ಭೇಟಿ ಮಾಡಿ ವಿವರಗಳನ್ನು ತಿಳಿಯಿರಿ.

ಈ ತಾಲ್ಲೂಕಿನ ರೈತರಿಗೆ ಮಾತ್ರ ಸಿಗಲಿದೆ ಬೆಳೆ ನಷ್ಟ ಪರಿಹಾರ:

ರಾಜ್ಯ ಸರ್ಕಾರ ಈ ಹಿಂದೆ ಘೋಷಣೆ ಮಾಡಿರುವ ಬರಪೀಡಿತ ತಾಲ್ಲೂಕಿನ ರೈತರಿಗೆ ಮಾತ್ರ ಬೆಳೆ ನಷ್ಟ ಪರಿಹಾರವನ್ನು ಹಾಕಲಾಗಿದೆ. ಇತರೆ ಭಾಗದ ರೈತರಿಗೆ ಈ ಪರಿಹಾರದ ಹಣವು ಸಿಗಲ್ಲಾ.

ಮೊಬೈಲ್ ನಲ್ಲೇ ಬೆಳೆ ನಷ್ಟ ಪರಿಹಾರದ ಹಣ ಬಂದಿರುವುದನ್ನು ಚೆಕ್ ಮಾಡುವ ವಿಧಾನ:

DBT karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಬೆಳೆ ನಷ್ಟ ಪರಿಹಾರ ರೂ 2,000 ಜಮಾ ಆಗಿರುವ ವಿವರವನ್ನು ರೈತರು ತಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಿಳಿದುಕೊಳ್ಳಬಹುದಾಗಿದೆ.

Step-1: ಈ ಲಿಂಕ್ Download Now ಮೇಲೆ ಕ್ಲಿಕ್ ಮಾಡಿಕೊಳ್ಳಿ DBT karnataka ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ. ಇದಾದ ಬಳಿಕ ನಿಮ್ಮ  ಆಧಾರ್ ಕಾರ್ಡ ನಂಬರ್ & OTP ಅನ್ನು ಹಾಕಿ ಮುಂದುವರೆಯಬೇಕಾಗುತ್ತದೆ. 

Step-2: ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರ 4 ಅಂಕಿಯ password ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಈ page ಬಲ ಬದಿಯಲ್ಲಿ ಕನ್ನಡ/English ಎನ್ನುವ 2 ಆಯ್ಕೆ ಇದ್ದು ಇದರಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

Step-3: ನಂತರ “ಪಾವತಿ ಸ್ಥಿತಿ” button ಮೇಲೆ ಕ್ಲಿಕ್ ಮಾಡಿ “ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಯಾವ ದಿನದಂದು ರೂ 2,000 ಪರಿಹಾರದ ಹಣ ಜಮಾಯಾಗಿದೆ & UTR details, ಬ್ಯಾಂಕ್ ವಿವರ ಗೋಚರವಾಗುತ್ತದೆ.

ಇತರೆ ವಿಷಯಗಳು

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರೆ 40 ಸಾವಿರ ನೇರ ನಿಮ್ಮ ಖಾತೆಗೆ!

ರೈತರ ಸಾಲ ಮನ್ನಾದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ!!


Share

Leave a Reply

Your email address will not be published. Required fields are marked *