rtgh

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ಉಚಿತ ತರಬೇತಿ: ಸರ್ಕಾರಿ ಉದ್ಯೋಗದ ಆಸಕ್ತಿ ಇದ್ದವರು ಇಲ್ಲಿ ಅಪ್ಲೇ ಮಾಡಿ

free coaching for government jobs
Share

ಹಲೋ ಸ್ನೇಹಿತರೇ, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲಾಗುವುದು ಈ ರೀತಿಯ ಉಚಿತ ತರಬೇತಿಯನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

free coaching for government jobs

ನೀಡುವ UPSC, KAS, SSC, ಗ್ರೂಪ್‌ C & ನ್ಯಾಯಾಂಗ ಸೇವೆ, ಬ್ಯಾಂಕಿಂಗ್, RRB ಕಾಂಪಿಟೇಟಿವ್ ಪರೀಕ್ಷೆ ಪೂರ್ವ ಉಚಿತ ತರಬೇತಿಗೆ ಸಂಬಂಧ, ಇದೀಗ ST, SE ಅಭ್ಯರ್ಥಿಗಳ ಮೊದಲ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿದೆ.

2023-24ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಉಚಿತ ತರಬೇತಿಗೆ ಸಂಬಂಧಿಸಿದಂತೆ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅರ್ಜಿದಾರರ ಮೊದಲ ಸುತ್ತಿನ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ.

ಈ ಸಾಲಿನ UPSC, KAS, ಬ್ಯಾಂಕಿಂಗ್, RRB, SSC, ಗ್ರೂಪ್‌ C & ನ್ಯಾಯಾಂಗ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಮೊದಲ ಸುತ್ತಿನ ಆಯ್ಕೆಪಟ್ಟಿಯನ್ನು ಇದೀಗ ಚೆಕ್‌ ಮಾಡಿಕೊಳ್ಳಿ.

ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://swdservices.karnataka.gov.in/petccoaching/ ಗೆ ಭೇಟಿ ಮಾಡಿ, “ಆಯ್ಕೆಪಟ್ಟಿ 2023-24” ಅಡಿಯಲ್ಲಿ SE ಮತ್ತು ST ಅಭ್ಯರ್ಥಿಗಳ ಪ್ರತ್ಯೇಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆವಾರು ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ

ಸಮಾಜ ಕಲ್ಯಾಣ ಇಲಾಖೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ಉಚಿತ ತರಬೇತಿ ಪಡೆಯುವ ಸಂಬಂಧ, ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ದಿನಾಂಕ 18-04-2024 ಒಳಗಾಗಿ ತಮ್ಮ ಇಚ್ಛೆಯ ಸಂಸ್ಥೆ ಆದ್ಯತೆಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಲಾಗಿನ್‌ ನಲ್ಲಿ ಲಾಗಿನ್‌ ಆಗಬೇಕಾಗಿದೆ.

ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಸ್ಥೆ ಆದ್ಯತೆ ನೀಡುವುದು ಹೇಗೆ?

  • ವೆಬ್‌ ವಿಳಾಸ https://swdservices.karnataka.gov.in/petccoaching/ ಕ್ಕೆ ಭೇಟಿ ನೀಡಿ.
  • ‘ಇನ್‌ಸ್ಟಿಟ್ಯೂಟ್ ಆಯ್ಕೆ ಸಲ್ಲಿಸಲು ಕೊನೆಯ ದಿನಾಂಕ 18-04-2024’ ಎಂದಿರುವಲ್ಲಿ ಕ್ಲಿಕ್ ಮಾಡಿ. ಅದೊಂದು ಲಿಂಕ್ ಆಗಿದ್ದು ಲಾಗಿನ್‌ ಪೇಜ್‌ ತೆರೆಯುತ್ತದೆ.
  • User Id, Password ನೀಡಿ, ಕ್ಯಾಪ್ಚಾ ಕೋಡ್‌ ನೀಡಿ ಲಾಗಿನ್ ಮಾಡಿ.
  • ನಿಮ್ಮ ಆಯ್ಕೆಯ ಕೋಚಿಂಗ್ ಸೆಂಟರ್ ಆಯ್ಕೆ ಮಾಡಿ. ‘Submit’ ಮಾಡಿ.

ಯಾವ ಯಾವ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಎಷ್ಟು ಸ್ಟೈಫಂಡ್‌ ನೀಡಲಾಗುತ್ತದೆ

  • UPSC: ದೆಹಲಿಯಲ್ಲಿ ₹10000
  • ಹೈದರಾಬಾದ್‌ನಲ್ಲಿ ₹8000
  • ಬೆಂಗಳೂರಿನಲ್ಲಿ ₹6000
  • ಇತರೆ ಸ್ಥಳಗಳಾದಲ್ಲಿ ₹5000
  • KAS: ರೂ.5000
  • ಬ್ಯಾಂಕಿಂಗ್: ₹5000
  • ಆರ್‌ಆರ್‌ಬಿ: ₹5000
  • ಎಸ್‌ಎಸ್‌ಸಿ: ₹5000
  • ಗ್ರೂಪ್‌ ಸಿ: ₹5000
  • ನ್ಯಾಯಾಂಗ ಸೇವೆ: ₹5000

ಇತರೆ ವಿಷಯಗಳು

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್! ಯಾರಿಗೆಲ್ಲ ಸಿಗುತ್ತೆ? ಅರ್ಜಿ ಹಾಕೋದು ಹೇಗೆ?

ಕುರಿ-ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 30 ಲಕ್ಷ ಸಾಲ! ಅಪ್ಲೈ ಮಾಡಲು ಹೊಸ ವಿಧಾನ


Share

Leave a Reply

Your email address will not be published. Required fields are marked *