rtgh
Headlines

ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಖಡಕ್ ವಾರ್ನಿಂಗ್ ಕೊಟ್ಟ ಸರ್ಕಾರ

raion card new update
Share

ಹಲೋ ಸ್ನೇಹಿತರೇ, ಆಹಾರ ಇಲಾಖೆ ಈಗ ರೇಷನ್ ಕಾರ್ಡ್ ಬಗ್ಗೆ ಹೊಸ ನಿರ್ಧಾರ ತೆಗೆದುಕೊಂಡಿದ್ದು, ನಕಲಿ ರೇಷನ್ ಕಾರ್ಡ್‌ ಗಳನ್ನು ರದ್ದು ಮಾಡಲು ಮುಂದಾಗಿದೆ. ಕೆಲ ಸಮಯದಿಂದ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತ್ತು ಸುಳ್ಳು ದಾಖಲೆ ಸೃಷ್ಟಿಸಿ ಅದರಿಂದ ರೇಷನ್ ಕಾರ್ಡ್ ಪಡೆಯುವ ಜನರು ಹೆಚ್ಚಾಗುತ್ತಿದ್ದಾರೆ.

raion card new update

ಇದನ್ನು ತಡೆಯಲು, ಆಹಾರ ಇಲಾಖೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ರೇಷನ್ ಕಾರ್ಡ್ ಬಳಸಿ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಬಹುದು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ರೇಷನ್ ಕಾರ್ಡ್ ಬೇಕಾಗುತ್ತದೆ.

ಹೆಚ್ಚಿನ ಜನರಿಗೆ ಬಿಪಿಎಲ್ ಕಾರ್ಡ್ ಮೇಲೆ ಆಸಕ್ತಿ

ಸರ್ಕಾರದಿಂದ ಸಿಗುವ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ ಎಲ್ಲಾ ಸೌಕರ್ಯಗಳನ್ನು ಪಡೆಯಬಹುದು ಎನ್ನುವ ಕಾರಣಕ್ಕೆ ಜನರು ಬಿಪಿಎಲ್ ಕಾರ್ಡ್ ಮಾಡಿಸಲು ಹೆಚ್ಚಿನ ಸಂಖೆಯಲ್ಲಿ ಬರುತ್ತಿದ್ದಾರೆ. ಆದರೆ ಅರ್ಹತೆ ಇಲ್ಲದವರ ರೇಷನ್ ಕಾರ್ಡ್ ಗಳನ್ನು ಬಂದ್ ಮಾಡಲು ಸರ್ಕಾರ ಕೂಡ ಕೆಲಸ ಶುರು ಮಾಡಿದೆ.

ಇನ್ನು ಹಲವು ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗೋದು ಯಾವಾಗ ಎಂದು ಕಾಯುತ್ತಿದ್ದಾರೆ. ಅಂಥವರಿಗೆ ಈಗ ಸರ್ಕಾರದಿಂದ ಹೊಸ ಅಪ್ಡೇಟ್ ಸಿಕ್ಕಿದೆ.

ಇದನ್ನೂ ಸಹ ಓದಿ : PF ಖಾತೆದಾರರಿಗೆ ಕಹಿ ಸುದ್ದಿ! ಈ ತಿಂಗಳಿನಿಂದ ನಿಮ್ಮ ಖಾತೆ ಆಗಲಿದೆ ಕ್ಲೋಸ್

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ನಮ್ಮ ರಾಜ್ಯದಲ್ಲಿ 1.03 ಕೋಟಿ BPL ಕಾರ್ಡ್ ಹೊಂದಿರುವ ಕುಟುಂಬಗಳು ಇದೆ. ಹಾಗೆಯೇ 10.83 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳು ಇದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಇರುವ ಮಿತಿಗಿಂತ 10.33 ಲಕ್ಷ ಹೆಚ್ಚಿನ ಜನರ ಬಳಿ BPL ಕಾರ್ಡ್‌ ಗಳಿವೆ. ಆರ್ಹತೆ ಇಲ್ಲದವರು ಕೂಡ BPL ಕಾರ್ಡ್ ಪಡೆದಿದ್ದಾರೆ. ಹಾಗಾಗಿ ಸರ್ಕಾರವು ಅಂಥವರ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ.

ಇಂಥವರ ರೇಷನ್ ಕಾರ್ಡ್ ರದ್ದು

ಆದಾಯ ಜಾಸ್ತಿ ಇರುವವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ, ಹೀಗೆ ಆದಾಯ ಜಾಸ್ತಿ ಇದ್ದರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ಅಂಥವರ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಾಗೆಯೇ ಒಂದು ವೇಳೆ ಮನೆಯಲ್ಲಿ ಯಾರಾದರೂ ಕೂಡ ನಿಧನ ಆಗಿದ್ದರೆ, ಅಂಥವರ ಹೆಸರನ್ನು ತೆಗೆದು ಹಾಕಿಸಿರಬೇಕು, ಆ ಕೆಲಸವನ್ನು ಕೂಡ ಹಲವಾರು ಜನರು ಮಾಡಿಲ್ಲ. ಅವರ ಹೆಸರುಗಳನ್ನು ತೆಗೆದು ಹಾಕಿದರೆ, ಆಗ ಸರ್ಕಾರಕ್ಕೆ ಒಂದಷ್ಟು ಯೂನಿಟ್ ಉಳಿತಾಯ ಆಗುತ್ತದೆ.

ಇನ್ನು ಮತ್ತೊಂದು ಪ್ರಮುಖ ವಿಚಾರ ಏನು ಎಂದರೆ, ನಮ್ಮಲ್ಲಿ 80-83% ಅಷ್ಟು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಜನರು ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದಾರೆ. 3 ತಿಂಗಳಿನಿಂದ ಹಲವಾರು ಜನರು ಪಡಿತರ ಪಡೆದಿಲ್ಲ, ಇನ್ನು 6 ತಿಂಗಳುಗಳಿಂದ ಯಾರೆಲ್ಲಾ ಪಡಿತರ ಪಡೆದಿಲ್ಲವೋ ಅಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಲೋಕಸಭಾ ಎಲೆಕ್ಷನ್ ಇದ್ದ ಕಾರಣ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು, ಆದರೆ ಇನ್ಮುಂದೆ ಈ ಕೆಲಸ ಕೂಡ ಶುರುವಾಗಲಿದೆ ಎಂದು ಸರ್ಕಾರ ತಿಳಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ತಿಳಿಸಲಾಗುತ್ತದೆ.

ಇತರೆ ವಿಷಯಗಳು:

ಪದವಿ ನಂತರದ ಕೋರ್ಸ್‌ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ.!

ಕೊನೆಗೂ 17ನೇ ಕಂತಿನ ಹಣಕ್ಕೆ ದಿನಾಂಕ ಫಿಕ್ಸ್ ಕಾಯುವಿಕೆಗೆ ಅಂತ್ಯ!

ಆವಾಸ್ ಯೋಜನೆಯಡಿ ಬಡವರಿಗೆ 3 ಕೋಟಿ ಮನೆ ನಿರ್ಮಾಣ.! ಮೋದಿ 3.0 ಸಂಪುಟದಲ್ಲಿ ನಿರ್ಧಾರ


Share

Leave a Reply

Your email address will not be published. Required fields are marked *