rtgh
Headlines

ಇನ್ಮುಂದೆ ಪ್ರತಿ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್! ರಾಜ್ಯ ಸರ್ಕಾರದ ಅಧಿಕೃತ ಆದೇಶ

Sub-Registrar office
Share

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಇನ್ಮುಂದೆ ಪ್ರತಿ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಓಪನ್ ಮಾಡುವಂತೆ ರಾಜ್ಯ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ.

Sub-Registrar office

ಉತ್ತಮವಾದ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 ರಿಂದ ಪ್ರಾರಂಭಿಸುತ್ತಾ ಬೆಂಗಳೂರು ನಗರದ ಜಿಲ್ಲೆಯ 5 ನೋಂದಣಿಯ ಜಿಲ್ಲೆಗಳಲ್ಲಿ ಪ್ರತಿ ಒಂದು ನೋಂದಣಿಯ ಜಿಲ್ಲೆಯಲ್ಲಿ ಒಂದು ಉಪ ನೋಂದಣಿಯ ಕಛೇರಿಯು ಪಾರದರ್ಶಕ ವಾರದ ಸರದಿ ಆಧಾರದ ಮೇಲೆ ಮತ್ತು ಬೆಂಗಳೂರು ಗ್ರಾಮಾಂತರದ ನೋಂದಣಿಯ ಜಿಲ್ಲೆಯ ವ್ಯಾಪ್ತಿಯಲ್ಲಿ ಉಪ ನೋಂದಣಿಯ ಕಛೇರಿಗಳ ಪೈಕಿ ಯಾವುದಾದರೂ ಒಂದು ಉಪ ನೋಂದಣಿ ಕಛೇರಿಯನ್ನು ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರವು ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಆ ವಾರದಲ್ಲಿ ಮಂಗಳವಾರದಂದು ಸದರಿ ಕಛೇರಿಯು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.

ಇದೇ ರೀತಿಯಾಗಿ ಪ್ರಾಯೋಗಿಕವಾಗಿ ಏಪ್ರಿಲ್ಯಿಂದ ರಾಜ್ಯದ ಬೆಂಗಳೂರು ನಗರದ ನೋಂದಣಿಯ ಜಿಲ್ಲೆಗಳು ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿಯ ಜಿಲ್ಲೆಗಳು ಸೇರಿದಂತೆ ರಾಜ್ಯದ ಇತರ ಎಲ್ಲಾ ನೋಂದಣಿಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿಯ ಕಛೇರಿಗಳಲ್ಲಿ ಒಂದು ಉಪ ನೋಂದಣಿಯ ಕಛೇರಿಯನ್ನು ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಸದರಿ ಕಛೇರಿಗಳಿಗೆ ಆ ವಾರದ ಮಂಗಳವಾರದಂದು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.\

ಇದನ್ನೂ ಸಹ ಓದಿ: 513 ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಪಾಸ್‌ ಆದ್ರೆ ಸಾಕು

ನೋಂದಣಿಯ ಜಿಲ್ಲೆಗಳ ಉಪ ನೋಂದಣಿ ಕಛೇರಿಗಳ ಪೈಕಿ ಭಾನುವಾರದಂದು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಉಪ ನೋಂದಣಿಯ ಕಛೇರಿಗಳ ವಿವರಗಳನ್ನು ಈ ಕೂಡಲೇ ನೋಂದಣಿಯ ಮಹಾಪರಿ ವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಸಾರ್ವಜನಿಕರ ಮಾಹಿತಿಗಾಗಿ ಅವರ ಕಛೇರಿಯ ಅಧಿಕೃತವಾದ ಜಾಲತಾಣದಲ್ಲಿ ಹಾಗೂ ಕಾವೇರಿ-2 ಜಾಲತಾಣದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವುದು.

ಅಲ್ಲದೆ ಭಾನುವಾರದಂದು ಕಾರ್ಯನಿರ್ವಹಿಸುವ ಉಪ ನೋಂದಣಿಯ ಕಛೇರಿಗಳಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಿಕೊಳ್ಳಲು ಸಾರ್ವಜನಿಕರ ಅನುಕೂಲಕರ ಸಮಯವನ್ನು ನಿಗದಿಪಡಿಸಿಕೊಳ್ಳಲು ಕಾವೇರಿ-2 ತಂತ್ರಾಂಶದಲ್ಲಿ ಸೂಕ್ತ ಪಾರದರ್ಶಕ್ಕೆ ಅವಕಾಶಗಳನ್ನು ಕಲ್ಪಿಸಲು ನೋಂದಣಿಯ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.

ಎಲ್‌ಐಸಿ ನೌಕರರಿಗೆ ಸಂತಸದ ಸುದ್ದಿ.!! ಅಂತೂ ಹೆಚ್ಚಾಯ್ತು ಶೇ.17ರಷ್ಟು ವೇತನ

ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸಿಎಂ! ತಿಂಗಳ ಸಂಬಳದ ಜೊತೆ ಸಿಗಲಿದೆ 3.75% ಹೆಚ್ಚಿನ ಡಿಎ


Share

Leave a Reply

Your email address will not be published. Required fields are marked *