rtgh
Headlines

ಸ್ವಯಂ ಉದ್ಯೋಗಕ್ಕಾಗಿ ಸಿಗಲಿದೆ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ! ಇಲ್ಲಿಂದ ಬೇಗ ಅಪ್ಲೇ ಮಾಡಿ

self employment loan scheme
Share

ಹಲೋ ಸ್ನೇಹಿತರೇ, ಪ್ರಸ್ತಕ ಸಾಲಿಗೆ ಕೇಂದ್ರ ಪುರಸ್ಕತ ಯೋಜನೆಯಾದ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ-ಸೌಲಭ್ಯಕ್ಕಾಗಿ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂ.24 ರೊಳಗಾಗಿ ಮಹಾನಗರ ಪಾಲಿಕೆ ವಲಯ ಶಾಖೆಗೆ ಸಲ್ಲಿಸಬೇಕು.

self employment loan scheme

Contents

ಯೋಜನೆಗಳು:

ಸ್ವಯಂ ಉದ್ಯೋಗ ಕಾರ್ಯಕ್ರಮ(ವೈಯಕ್ತಿಕ):

ವೈಯಕ್ತಿಕ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2 ಲಕ್ಷದವರೆಗೆ ಸೇವಾ ವಲಯ ಬ್ಯಾಂಕ್‍ಗಳಿಂದ 100 ಅರ್ಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಹಾಗೂ ಸಾಲದ ಮೇಲೆ ಬಡ್ಡಿ ದರ ಶೇ.7ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.

ಅರ್ಹತೆ: ಅಭ್ಯರ್ಥಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು ಅಥವಾ ಅವರ ಮನೆಯಲ್ಲಿ ಯಾರಾದರೂ ಒಬ್ಬರು ಸಂಘದ ಸದಸ್ಯರಾಗಿರಬೇಕು. ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಾಗ 18 ವರ್ಷ ವಯಸ್ಸು ಪೂರೈಸಿರಬೇಕು.

ಸ್ವಯಂ ಉದ್ಯೋಗ ಕಾರ್ಯಕ್ರಮ(ಗುಂಪು):

ಎಸ್‌ಜೆಆರ್‌ಎಸ್‌ವೈ ಯೋಜನೆ ಹಾಗೂ ಡೇ-ನಲ್ಮ್ ಯೋಜನೆಯಡಿ ರಚಿತವಾದ 08 ಗುಂಪುಗಳು ಸ್ವಸಹಾಯ ಉದ್ದಿಮೆ/ಚಟುವಟಿಕೆಗಳನ್ನು ಪ್ರಾರಂಭಿಸಲು ರೂ.10 ಲಕ್ಷಗಳವರೆಗೆ ಸೇವಾ ವಲಯ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುವುದು ಹಾಗೂ ಸಾಲದ ಮೇಲೆ ಬಡ್ಡಿ ದರ ಶೇ.7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.

ಅರ್ಹತೆ: ಗುಂಪಿನ ಎಲ್ಲಾ ಸದಸ್ಯರ ವಯಸ್ಸು 18 ವರ್ಷ ಪೂರೈಸಿರಬೇಕು. ಗುಂಪು ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಸಂಘ ಅಥವಾ ಕನಿಷ್ಟ 5 ಜನ ಸದಸ್ಯರ ಜೆ.ಎಲ್.ಜಿ ಗುಂಪು ಇರಬೇಕು ಹಾಗೂ ಸದರಿ ಸದಸ್ಯರು ಶೇ.70 ರಷ್ಟು ಬಡ ಕುಟುಂಬದವರಾಗಿರಬೇಕು.

ಇದನ್ನೂ ಸಹ ಓದಿ : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7ನೇ ವೇತನ ಆಯೋಗ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ

ಸ್ವಸಹಾಯ ಸಂಘಗಳ ಬ್ಯಾಂಕ್ ಕ್ರೆಡಿಟ್ ಲಿಂಕೇಜ್:

ಎಸ್‌ಜೆಆರ್‌ಎಸ್‌ವೈ ಯೋಜನೆ ಹಾಗೂ ಡೇ-ನಲ್ಮ್ ಯೋಜನೆಯಡಿ ರಚಿತವಾದ 126 ಗುಂಪುಗಳು ಖಾತೆ ಹೊಂದಿರುವ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದು. (ಬ್ಯಾಂಕ್ ಲಿಂಕೇಜ್).

ಅರ್ಹತೆ: ಸ್ವಸಹಾಯ ಗುಂಪುಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಆವರ್ತಕ ನಿಧಿ ಪಡೆದಿರಬೇಕು.

ಸ್ವಸಹಾಯ ಗುಂಪುಗಳ ರಚನೆ ಕಾರ್ಯಕ್ರಮ:

ಬಳ್ಳಾರಿ ವ್ಯಾಪ್ತಿಯಲ್ಲಿ 10 ರಿಂದ 20 ಬಡ ಮಹಿಳೆಯರನ್ನೊಳಗೊಂಡ ಒಟ್ಟು 251 ಸ್ವ-ಸಹಾಯ ಗುಂಪುಗಳನ್ನು ರಚಿಸುವುದು.

ಅರ್ಹತೆ: ಸದಸ್ಯತ್ವ ಬಯಸುವ ಎಲ್ಲರೂ 18 ರಿಂದ 50 ವರ್ಷದೊಳಗಿರಬೇಕು. ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಸದಸ್ಯತ್ವ ಬಯಸುವವರು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿರಬೇಕು (ಶೇ.70ರಷ್ಟು ಬಿಪಿಎಲ್ ಕುಟುಂಬದವರಾಗಿರಬೇಕು).

ಲಗತ್ತಿಸಬೇಕಾದ ದಾಖಲಾತಿಗಳು:

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಆಧಾರ್‍ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಇತ್ತೀಚಿನ ಮೂರು ಭಾವ ಚಿತ್ರಗಳು
  • ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಬೇಕು.

ಸೂಚನೆ:

ಮೇಲ್ಕಂಡ ಯೋಜನೆಯ ಮಾರ್ಗಸೂಚಿಯ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಿಗದಿತ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಅರ್ಜಿಗಳನ್ನು ತಿರಸ್ಕರಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆ ವಲಯ ಕಚೇರಿ – 1ರ (ಹಳೇ ಕಟ್ಟಡದ) ಡೇ-ನಲ್ಮ್ ಶಾಖೆ ಅಥವಾ ದೂ.08392-273479, 278168 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ವಿಷಯಗಳು:

ಬಸ್ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಟಿಕೆಟ್ ದರ ದಿಢೀರನೆ 15% ಹೆಚ್ಚಳ!

ರಾಜ್ಯದ್ಯಂತ 18 ಲಕ್ಷ ರೈತರ ನೋಂದಣಿ! ಕುಸುಮ್‌ ಯೋಜನೆಯಡಿ ಉಚಿತ ಸೌರ ಪಂಪ್‌ಸೆಟ್‌

ಸರ್ಕಾರದಿಂದ ಹೊಸದೊಂದು ಯೋಜನೆ!! ಮಹಿಳೆ ಸಾಲಗಾರರಿಗೆ 1 ಕೋಟಿ


Share

Leave a Reply

Your email address will not be published. Required fields are marked *