ಬೆಂಗಳೂರು: 2023 -24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ -1ರ ಫಲಿತಾಂಶವನ್ನು ಏಪ್ರಿಲ್ 2ನೇ ವಾರ ಪ್ರಕಟಣೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಾರ್ಚ್ 1 ರಿಂದ 22ರ ವರೆಗೆ ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯು ನಡೆಸಿದ್ದು, ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಮಾರ್ಚ್ 25 ರಿಂದ ಮೌಲ್ಯಮಾಪನ ಕಾರ್ಯವು ಆರಂಭವಾಗಿದ್ದು, ಬಹುತೇಕ ಮೌಲ್ಯಮಾಪನ ಕಾರ್ಯವು ಅಂತಿಮದ ಹಂತಕ್ಕೆ ತಲುಪಿದೆ.
ಇದನ್ನೂ ಸಹ ಓದಿ: 18 ರಿಂದ 59 ವರ್ಷದೊಳಗಿನ ಮಹಿಳೆಯರಿಗೆ ದೊಡ್ಡ ಕೊಡುಗೆ!! ತಿಂಗಳಿಗೆ ಖಾತೆಗೆ ಬರತ್ತೆ ₹1500
ಇನ್ನೊಂದು ವಾರದೊಳಗೆ ಮೌಲ್ಯಮಾಪನದ ಕಾರ್ಯವು ಪೂರ್ಣಗೊಳಿಸಿ ಅಂಕಗಳನ್ನು ಕಂಪ್ಯೂಟರೀಕರಣಗೊಳಿಸಿ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬಹುತೇಕ ಏಪ್ರಿಲ್ 10ರಂದು ಅಥವಾ ಆಸುಪಾಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶವು ಪ್ರಕಟಣೆಯಾಗುವ ಸಾಧ್ಯತೆಯು ಇದೆ.
ಇನ್ನು ಏಪ್ರಿಲ್ 8ರಿಂದ 10ರೊಳಗೆ 5, 8 ಮತ್ತು 9ನೇ ತರಗತಿಯ ಮಕ್ಕಳ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಚೆಕ್ ಮಾಡುವ ನೇರ ಲಿಂಕ್ ಇಲ್ಲಿದೆ
ಇತರೆ ವಿಷಯಗಳು:
ಏಪ್ರಿಲ್ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್! ಮತ್ತಷ್ಟು ಅಗ್ಗವಾಯ್ತು ಸಿಲಿಂಡರ್
ವಾಹನ ಸವಾರರ ಜೇಬಿಗೆ ಕತ್ತರಿ!! ದಿಢೀರನೆ ಏರಿಕೆಯಾದ ಟೋಲ್ ಶುಲ್ಕ!