rtgh

ಇಂದು ಮಧ್ಯಾಹ್ನ 3 ಗಂಟೆಗೆ ʻದ್ವಿತೀಯ ಪಿಯುಸಿ-2 ಪರೀಕ್ಷೆʼ ರಿಸಲ್ಟ್‌: ಈ ರೀತಿ ಚೆಕ್‌ ಮಾಡಿ

2nd puc supplementary result
Share

ಹಲೋ ಸ್ನೇಹಿತರೇ, ಕರ್ನಾಟಕದ ದ್ವಿತೀಯ ಪಿಯುಸಿ 2024ರ ಪರೀಕ್ಷೆ-2ರ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. 29/4/2024 ರಿಂದ 16/5/2024ರ ತನಕ ರಾಜ್ಯದಲ್ಲಿ ಎರಡನೇ ಪಿಯುಸಿಯ ಪರೀಕ್ಷೆ-2 ನಡೆದಿತ್ತು. ಸೋಮವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷರಾದ ಎನ್. ಮಂಜುಶ್ರೀ ಸಾಮಾಜಿಕ ಜಾಲತಾಣದಲ್ಲಿ ಫಲಿತಾಂಶ ಮಂಗಳವಾರ ಪ್ರಕಟಿಸುವ ಕುರಿತು ಪೋಸ್ಟ್ ಹಾಕಿದ್ದಾರೆ. ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಬುಧವಾರ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.

2nd puc supplementary result

2024ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ದಿನಾಂಕ 29-04-2024 ರಿಂದ 16-05-2024 ರವರೆಗೆ ನಡೆಸಲಾಯಿತು. ಇದರ ಫಲಿತಾಂಶವನ್ನು ದಿನಾಂಕ 21-05-2024ರ ಮಧ್ಯಾಹ್ನ 3 ಗಂಟೆಗೆ https://karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೇ ಮಾರ್ಚ್ 2024ರ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಹ ಪರೀಕ್ಷೆ-2 ಬರೆದಿದ್ದರು. ಪರೀಕ್ಷೆ-1ಕ್ಕೆ ಹೆಸರು ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳು ಸಹ ಪರೀಕ್ಷೆ-2 ಬರೆಯಲು ಅವಕಾಶ ನೀಡಲಾಗಿತ್ತು.

ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ಹಾಜರಾಗುವ ಪುನಾರಾವರ್ತಿತ ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ರೂ. 140, ಎರಡು ವಿಷಯಕ್ಕೆ 270 ರೂ. ಮತ್ತು ಮೂರು ಅಥವ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ ಎಸ್‌ಸಿ/ ಎಸ್‌ಟಿ ಹಾಗೂ ಪ್ರವರ್ಗ-1 ವಿದ್ಯಾರ್ಥಿಗಳಿಗೆ ಶುಲ್ಕ ಇರಲಿಲ್ಲ.

ಏಪ್ರಿಲ್‌ನಲ್ಲಿ 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆ-1 1/3/2024 ರಿಂದ 22/3/2024ರ ತನಕ ರಾಜ್ಯದ 1124 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. 70 ಕೇಂದ್ರಗಳಲ್ಲಿ ಮೌಲ್ಯ ಮಾಪನವನ್ನು 25/3/2024 ರಿಂದ 30/4/2024ರ ತನಕ 27,650 ಮೌಲ್ಯ ಮಾಪಕರು ನಡೆಸಿದ್ದರು.

ಇದನ್ನೂ ಸಹ ಓದಿ : ರೈತ ವಿದ್ಯಾನಿಧಿ ಅಪ್ಲೇ ಮಾಡಿದ್ರೆ 11,000 ಗ್ಯಾರೆಂಟಿ.! ರೈತರ ಮಕ್ಕಳಿಗೆ ಆದ್ಯತೆ

ಪರೀಕ್ಷೆ-1 ಬರೆಯಲು ಅರ್ಹರಾಗಿದ್ದ ವಿದ್ಯಾರ್ಥಿಗಳು 6,98,378. ಎಲ್ಲಾ ವಿಷಯಗಳಿಗೆ 17,299 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 6,81,079. ಒಟ್ಟು ತೇರ್ಗಡೆಯಾದ ವಿದ್ಯಾರ್ಥಿಗಳು 5,52,690. 2024ರಲ್ಲಿ ಉತ್ತಿರ್ಣಗೊಂಡ ಶೇಕಡಾವಾರು ಪ್ರಮಾಣ 81.15 ಆಗಿತ್ತು. 2023ರಲ್ಲಿ ಪಿಯುಸಿ ಫಲಿತಾಂಶ 74.67ರಷ್ಟಿತ್ತು. ಏಪ್ರಿಲ್ 10 ರಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸಲಾಗಿತ್ತು.

ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಬಿಗಿ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ನಿಗಾದಲ್ಲಿ ಅಚ್ಚುಕಟ್ಟಾಗಿ ನಡೆಸಲಾಗಿತ್ತು. ಈಗ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೊಪವಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಉಪನ್ಯಾಸಕರನ್ನು ವಿಶೇಷ ಜಾಗೃತ ದಳದ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಕೊಠಡಿ ಮೇಲ್ವಿಚಾರಕರನ್ನು ಹೊರೆತುಪಡಿಸಿ ಬೇರೆಯವರ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲು ಅನುಮಾನಸ್ಪದ ಜನರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲಾಗಿತ್ತು.

ಫಲಿತಾಂಶ ಹೀಗೆ ನೋಡಿ

  • https://karresults.nic.in ವೆಬ್‌ಸೈಟ್‌ ಕ್ಲಿಕ್‌ ಮಾಡಿ
  • ದ್ವಿತೀಯ ಪಿಯುಸಿ ಫಲಿತಾಂಶ ಎನ್ನುವ ಲಿಂಕ್‌ ಕ್ಲಿಕ್‌ ಮಾಡಿ
  • ನಿಮ್ಮ ರೋಲ್‌ ನಂಬರ್‌ ಅನ್ನು ನಮೂದಿಸಿ
  • ನಿಮ್ಮ ವಿಷಯ ಯಾವುದು ಎನ್ನುವುದನ್ನು ತಿಳಿಸಿ
  • ಅಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಎನ್ನುವ ವಿಷಯ ಬರಲಿದೆ
  • ಅದರ ಮೇಲೆ ನಿಮ್ಮ ವಿಷಯ ಕ್ಲಿಕ್‌ ಮಾಡಿ
  • ನಿಮ್ಮ ಫಲಿತಾಂಶ ಸಿಗಲಿದೆ

ಇತರೆ ವಿಷಯಗಳು:

ಚಿನ್ನದ ಬೆಲೆ ಕೊಂಚ ಇಳಿಕೆ! ಇಂದೇ ಖರೀದಿಸಿ ಮತ್ತೆ ಭಾರೀ ಏರಿಕೆಯಾಗಲಿದೆ

ಮಾಂಸ ಪ್ರಿಯರಿಗೆ ಬಿಗ್ ಶಾಕ್: ಚಿಕನ್, ಮಟನ್‌, ಮೊಟ್ಟೆ ಬೆಲೆ ದಿಢೀರ್ ಏರಿಕೆ!

SSLC 2ನೇ ಪರೀಕ್ಷೆಯ ದಿನಾಂಕ ಮುಂದೂಡಿಕೆ!


Share

Leave a Reply

Your email address will not be published. Required fields are marked *