rtgh
Headlines

5,8 ಮತ್ತು 9ನೇ ಪಬ್ಲಿಕ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

Publc Exam Updates
Share

ಹಲೋ ಸ್ನೇಹಿತರೆ, ಫಲಿತಾಂಶದ ವಿಷಯವಾಗಿ ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಭಾರಿ ವಿವಾದಕ್ಕೆ ಕಾರಣವಾಗಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ. ಪರೀಕ್ಷೆ ನಡೆದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಇದರ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಈ ನಿರ್ಧಾರ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸರ್ಕಾರದ ಹೊಸ ಅಪ್ಡೇಟ್‌ ಏನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗು ಓದಿ.

Publc Exam Updates

ಈ 3 ತರಗತಿಯ ಮೌಲ್ಯಾಂಕವನ್ನು ವಿಶ್ಲೇಷಣೆ ಮಾಡಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ದಾಖಲಿಸುವಲ್ಲಿ ಶಿಕ್ಷಣ ಇಲಾಖೆ ಗೊಂದಲದಲ್ಲಿ ಇದೆ. ಈಗ ಇದರ ಸಲುವಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಈಗಾಗಲೇ ಶಾಲೆಗಳಲ್ಲಿ ಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಮುಂದಿನ ತರಗತಿಗಳಿಗೆ ದಾಖಲಿಸಲು ಇಲಾಖೆ ಮುಂದಾಗಿದೆ.

ಸರ್ವೋಚ್ಚ ನ್ಯಾಯಾಲಯವು 2024ರ ಏಪ್ರಿಲ್‌ 08 ರಂದು ಪಬ್ಲಿಕ್‌ ಪರೀಕ್ಷೆಗೆ ನೀಡಿದ ತಡೆಯಾಜ್ಞೆ, ಈಗ ಇದರ ಹಿನ್ನಲೆ ಪಬ್ಲಿಕ್‌ ಪರೀಕ್ಷೆಯ ಬಗ್ಗೆ ನಿರ್ಧಾರವಾಗಬೇಕಿದೆ. ಅಂದರೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನ ಕಾರ್ಯ ಮುಗಿದು, ರಾಜ್ಯದ ಎಲ್ಲ ಶಾಲೆಗಳಲ್ಲಿ 08-04-2024ರಂದು ಫಲಿತಾಂಶವನ್ನು ಪ್ರಕಟಿಸಲು ತಿಳಿಸಲಾಗಿತ್ತು. ನಂತರ ಮತ್ತೆ ಫಲಿತಾಂಶವನ್ನು ಪ್ರಕಟಿಸಲು ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿತ್ತು, ಹಾಗಾಗಿ ಅಂತಿಮ ತೀರ್ಪು ಬಾಕಿ ಇದೆ. ಮುಂದಿನ ತರಗತಿಯ ಪ್ರವೇಶಾತಿಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನು ಓದಿ: ಇಂದು ಮಧ್ಯಾಹ್ನ 3 ಗಂಟೆಗೆ ʻದ್ವಿತೀಯ ಪಿಯುಸಿ-2 ಪರೀಕ್ಷೆʼ ರಿಸಲ್ಟ್‌: ಈ ರೀತಿ ಚೆಕ್‌ ಮಾಡಿ

ಫಲಿತಾಂಶದ ಕುರಿತು ಈಗಿರುವ ಸಮಸ್ಯೆ ಏನು?

ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದೆ. ಆದರೆ, ಸುಪ್ರೀಂ ಕೋರ್ಟ್‌ನಿಂದ 5,8 ಹಾಗೂ 9 ತರಗತಿ ಪರೀಕ್ಷೆಯ ಬಗ್ಗೆ ಇನ್ನೂ ತೀರ್ಪು ಬಂದಿಲ್ಲ. ಹೀಗಾಗಿ ಈಗಾಗಲೇ ನಡೆಸಿದ ಪರೀಕ್ಷೆಯ ಮೌಲ್ಯಮಾಪನ ಫಲಿತಾಂಶವನ್ನು ಪ್ರಕಟ ಮಾಡಲು ಶಾಲೆಗಳಿಗೆ ಅವಕಾಶ ಇಲ್ಲ. ಆದರೆ, ಮೇ 29ರಿಂದ 2024- 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ. ಇನ್ನು ಫಲಿತಾಂಶವೇ ಬರದೆ ಇರುವ ಕಾರಣ ಮುಂದಿನ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಹೇಗೆ ಕಳುಹಿಸುವುದು ಎಂಬ ತೊಂದರೆಯಲ್ಲಿವೆ.

ವರ್ಗಾವಣೆಯಾದವರಿಗೂ ಭಾರಿ ಸಮಸ್ಯೆ!

5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದಿರುವುದರಿಂದ ಅವರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆಕಳುಹಿಸಲು, ಪ್ರವೇಶ ಶುಲ್ಕ ಪಾವತಿಸಲು ಹಾಗೂ ಕೆಲವು ವಿದ್ಯಾರ್ಥಿಗಳು ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿರುವ ಪ್ರಯುಕ್ತ ಮಕ್ಕಳ ವರ್ಗಾವಣೆ ಪ್ರಮಾಣಪತ್ರ, ಪ್ರಗತಿ ಪತ್ರ ಮತ್ತು ವ್ಯಾಸಂಗ ಪ್ರಮಾಣಪತ್ರಗಳನ್ನು ವಿತರಿಸಲು ಸಾಧ್ಯವಾಗದ ಕಾರಣ ಅಗತ್ಯ ಕ್ರಮ ವಹಿಸುವಂತೆ ಶಾಲೆಗಳು, ವಿದ್ಯಾರ್ಥಿಗಳು ಕೋರಿಕೆ ಇಟ್ಟಿದ್ದಾರೆ. ೀ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮೌಲ್ಯಾಂಕನದ ಆಧಾರದ ಮೇಲೆ ವಿದ್ಯಾರ್ಥಿಗಳು ಪಾಸ್‌

ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣ ಸಂಖ್ಯೆ: 8142/2024, 8136/2024 ಮತ್ತು 8127/2024ರ ಮಧ್ಯಂತರ ತೀರ್ಪಿನಂತೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನವನ್ನು ತಡೆಹಿಡಿದಿರುವ ಕಾರಣಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 ಮತ್ತು SA-1 ಗಳ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಇತರೆ ವಿಷಯಗಳು:

ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ! ಚೆಕ್‌ ಮಾಡುವ ನೇರ ಲಿಂಕ್‌ ಇಲ್ಲಿದೆ

ರೈತರೇ ನಿಮ್ಮ ಖಾತೆಗೆ ಬರ ಪರಿಹಾರ ಜಮೆ ಆಗಿಲ್ವಾ? ಹಾಗಿದ್ರೆ ಹಣ ಪಡೆಯಲು ಹೀಗೆ ಮಾಡಿ


Share

Leave a Reply

Your email address will not be published. Required fields are marked *