rtgh
Headlines

ಅನ್ನದಾತರಿಗೆ ಕೇಂದ್ರದಿಂದ ಬಂಪರ್ ಸುದ್ದಿ.! ಈ ಯೋಜನೆಯಿಂದ ಸಿಗಲಿದೆ 90% ವರೆಗೂ ಸಬ್ಸಿಡಿ

Pradhan Mantri Krishi Sinchai Yojana
Share

ಹಲೋ ಸ್ನೇಹಿತರೇ, ಕೃಷಿ ಚಟುವಟಿಕೆಗೆ ಅಗತ್ಯವಾದ ವಸ್ತು ಖರೀದಿ ಹಾಗೂ ಹೊಲಗಳಲ್ಲಿ ಅಥವಾ ಗದ್ದೆಗಳಲ್ಲಿ ಅಗತ್ಯ ಇರುವ ಕೆಲವು ತಂತ್ರಜ್ಞಾನಗಳ ಅಳವಡಿಕೆಗೆ ರೈತರು ಸಾಮಾನ್ಯವಾಗಿ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ ಆದರೆ ಒಂದು ವೇಳೆ ಬೆಳೆ ಸರಿಯಾಗಿ ಬಾರದೆ ಇದ್ದರೆ ಈ ಸಾಲ ತೀರಿಸುವುದೇ ದೊಡ್ಡ ಸವಾಲಾಗಿರುತ್ತದೆ.

Pradhan Mantri Krishi Sinchai Yojana

ದೇಶದಲ್ಲಿ ವಾಸಿಸುವ ಸಾಕಷ್ಟು ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆ ಸರಿಯಾಗಿ ಬಾರದಿದ್ರೆ ಮಾಡಿಕೊಂಡ ಸಾಲ ತೀರಿಸಲು ಕೂಡ ಕಷ್ಟ ಪಡಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು ರೈತರಿಗೆ ಅವರ ಕೃಷಿಯನ್ನು ಮುಂದುವರಿಸಲು ಉತ್ತೇಜನವನ್ನು ನೀಡುವುದರ ಜೊತೆಗೆ ರೈತರಿಗೆ ಹಣಕಾಸಿನ ನೆರವನ್ನು ಸಹ ನೀಡುತ್ತವೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ವಿಶೇಷವಾಗಿ ರೈತರ ಕೃಷಿ ಚಟುವಟಿಕೆಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದೆ. ತೋಟದಲ್ಲಿ ಕೃಷಿ ಹೊಂಡ ನಿರ್ಮಾಣ, ಸ್ಪಿಂಕ್ಲರ್ ಗಳ ಅಳವಡಿಕೆ, ಪಂಪ್ಸೆಟ್ ವ್ಯವಸ್ಥೆ ನೀರಾವರಿ ವ್ಯವಸ್ಥೆ ಮೊದಲಾದವುಗಳಿಗೆ ಸಂಬಂಧಪಟ್ಟಹಾಗೆ ರೈತರು ಸಾಲ ತೆಗೆದುಕೊಂಡರೆ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದು.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆ!! ಮತ ಚಲಾಯಿಸಲು ಈ ಯಾವುದಾದರೂ ಒಂದು ದಾಖಲೆ ಕಡ್ಡಾಯ

ಸಬ್ಸಿಡಿ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು

  • ಕನಿಷ್ಠ ಎರಡು ಹೆಕ್ಟೇರ್ ಜಮೀನು ಹೊಂದಿರಬೇಕು.
  • 2023-24ನೇ ಸಾಲಿನಲ್ಲಿ ಸರ್ಕಾರದ ಬೇರೆ ಯಾವುದೇ ಯೋಜನೆಯ ಪ್ರಯೋಜನವನ್ನು ರೈತರು ಪಡೆದಿರಬಾರದು.
  • ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯೋಜನೆಗೆ ಅರ್ಹರು.
  • ಕೃಷಿ ಹೊಂಡನ ನಿರ್ಮಾಣ ಮತ್ತು ಸೂಕ್ಷ್ಮ ನೀರಾವರಿ ಘಟಕ ಸ್ಥಾಪನೆಗೆ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡ ರೈತರು ಸಬ್ಸಿಡಿ ಪಡೆಯಬಹುದು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಈಗಾಗಲೇ ಸಾಕಷ್ಟು ರೈತರು ಪ್ರಯೋಜನ ಪಡೆದುಕೊಂಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡ 90% ನಷ್ಟು ಮತ್ತು ಸಾಮಾನ್ಯ ರೈತರಿಗೆ ಶೇಕಡ 75% ನಷ್ಟು ಸಬ್ಸಿಡಿ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಫಲಾನುಭವಿ ರೈತರುಗಳ ಹತ್ತಿರದ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಅಥವಾ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು:

ರಾಜ್ಯಕ್ಕೆ ಆಗಮಿಸಲಿದ್ದಾನೆ ಮಳೆರಾಯ.! ಯಾವ ಭಾಗದಲ್ಲಿ ಎಷ್ಟು ಮಳೆಯಾಗಲಿದೆ??

ವಾಹನ ಸವಾರರಿಗೆ ಕೇಂದ್ರದ ಗಿಫ್ಟ್.‌!! ಅಂತೂ ಇಳಿಕೆ ಕಂಡ ಪೆಟ್ರೋಲ್‌-ಡೀಸೆಲ್‌ ಬೆಲೆ


Share

Leave a Reply

Your email address will not be published. Required fields are marked *