rtgh

36,789 ಮನೆಗಳನ್ನು ಹಂಚಿಕೆ ಮಾಡಿದ ಸಿ.ಎಂ.! ಪ್ರಧಾನ ಮಂತ್ರಿ ಆವಾಸ್ ಯೋಜನೆ

pradhan mantri awas scheme
Share

ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ ಕೆಲವು ಪ್ರದೇಶಗಳನ್ನು ಗುರುತಿಸಿ ಮನೆ ಇಲ್ಲದವರಿಗೆ ಮನೆ ನೀಡುವ ಕಾರ್ಯ ನಡೆಯುತ್ತಿದೆ. ಈ ಯೋಜನೆಯಡಿ ಈಗ 36,789 ಮನೆಗಳನ್ನು ಸಿಎಂ ಹಂಚಿಕೆ ಮಾಡಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

pradhan mantri awas scheme

ಅದರಲ್ಲಿ ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿಯವರು 1,80,230 ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಆ ಮನೆಗಳ ಪೈಕಿ 36,789 ಮನೆಗಳು ಪೂರ್ಣಗೊಂಡಿದ್ದು ಎಲ್ಲಾ ಮೂಲ ಸೌಲಭ್ಯಗಳು ಸಿಗುವಂತೆ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಸಿಎಂ ಆ ಮನೆಗಳನ್ನು ಉದ್ಘಾಟನೆ ಮಾಡಿ ಫಲಾನುಭವಿಗಳಿಗೆ ಮನೆಯ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ.

ರಾಜ್ಯ ಸರ್ಕಾರ & ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡುವ ಹಣ ಏಷ್ಟು?: 

ಬಡ ಕುಟುಂಬಗಳು ತಮ್ಮದೆ ಸ್ವಂತ ಮನೆ ಹೊಂದಬೇಕು ಎಂಬ ಆಶಯದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆ ಇದು, ಈ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಕುಟುಂಬದ ಮನೆ ನಿರ್ಮಾಣಕ್ಕೆ 1,50,000 ರೂ.ಗಳನ್ನು ನೀಡುತ್ತದೆ. ಉಳಿದ ಹಣವನ್ನು ಫಲಾನುಭವಿಗಳೇ ಭರಿಸಬೇಕು. ಆದರೆ ಇದು ಫಲಾನುಭವಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರವು 4,00,000 ರೂ.ಗಳನ್ನು ನೀಡುತ್ತಿದೆ.

ಪ್ರಧಾನ್ ಮಂತ್ರಿ ಆವಸ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  • ಈ ಮೊದಲು ಯಾವುದೇ ಸರ್ಕಾರಿ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆದಿರಬಾರದು.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರ್ಥಿಕವಾಗಿ ಮೂರು ವಿಭಾಗವನ್ನು ಮಾಡಲಾಗಿದೆ. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬ, ಕಡಿಮೆ ಆದಾಯ ಹೊಂದಿರುವ ಕುಟುಂಬ, ಮಧ್ಯಮ ಆದಾಯ ಹೊಂದಿರುವ ಕುಟುಂಬ A, ಮಧ್ಯಮ ಆದಾಯ ಹೊಂದಿರುವ ಕುಟುಂಬ B ಎಂದು ವರ್ಗಗಳಾಗಿ ಮಾಡಲಾಗಿದೆ. ಅರ್ಜಿ ಸಲ್ಲಿಸ ಕುಟುಂಬಗಳ ಆದಾಯ ಪ್ರತಿ ವಿಭಾಗಕ್ಕೂ ಬೇರೆ ಬೇರೆ ರೀತಿಯಾಗಿ ಇದೆ. ಆರ್ಥಿಕವಾಗಿ ದುರ್ಬಲ ಹೊಂದಿದ ಕುಟುಂಬಕ್ಕೆ 3 ಲಕ್ಷ , ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ 6 ಲಕ್ಷ, ಮಧ್ಯಮ ಆದಾಯ ಹೊಂದಿರುವ ಕುಟುಂಬ A ವರ್ಗಕ್ಕೆ 12 ಲಕ್ಷ ಹಾಗೂಮಧ್ಯಮ ಆದಾಯ ಹೊಂದಿರುವ ಕುಟುಂಬ B ವರ್ಗಕ್ಕೆ 18 ಲಕ್ಷ ರೂಪಾಯಿ ಗರಿಷ್ಠ ಮಿತಿಯನ್ನು ಇಲಾಖೆಯು ತಿಳಿಸಿದ್ದಾರೆ.
  • ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿ ಹೊಂದಿರಬಾರದು. ಹಾಗೂ ಬಾಡಿಗೆ ಮನೆಯಲ್ಲಿ ಇರುವ ಬಗ್ಗೆ ನಿಖರವಾದ ದಾಖಲೆಗಳನ್ನು ಸಲ್ಲಿಸಬೇಕು.
  • ಅರ್ಜಿ ದಾರರು ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಯೋಜನೆಗೆ ಅರ್ಜಿ ಸಲ್ಲಿಸುವ ದಾಖಲೆಗಳು:-

  • ಕುಟುಂಬದವರ ಆಧಾರ್ ಕಾರ್ಡ್(Aadhar card)
  • ಪಾನ್ ಕಾರ್ಡ್ (pan card)
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ(Aadhar linked mobile number)
  • ಮನೆ ಬಾಡಿಗೆ ಕಟ್ಟಿದ ಬಿಲ್.
  • ಆದಾಯ & ಜಾತಿ ಪ್ರಮಾಣಪತ್ರ.

ಕಳಪೆ ಗುಣಮಟ್ಟದ ಕಾಮಗಾರಿ ನಡೆದರೆ ಕಠಿಣ ಕ್ರಮ

ಮನೆ ನಿರ್ಮಾಣದ ಕಾರ್ಯದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಮನೆ ನಿರ್ಮಾಣ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತಿಳಿಸಿದ್ದಾರೆ. ಮನೆಯ ಹಸ್ತಾಂತರಿಸುವ ಸಮಯದಲ್ಲಿ ಅಥವಾ ಬಿಲ್ ಪಾವತಿ ವೇಳೆ ಗುತ್ತಿಗೆದಾರರು ತೊಂದರೆಗಳನ್ನು ನೀಡಿದ್ದರೆ ತಕ್ಷಣ ಉನ್ನತ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ತಿಳಿಸಿದರು

ಇತರೆ ವಿಷಯಗಳು

ಗ್ರಾಮ ಪಂಚಾಯತ್ ಸೇವೆಗಳು ಮೊಬೈಲ್‌ನಲ್ಲಿ ಲಭ್ಯ.! ಅರ್ಜಿ ಸಲ್ಲಿಸಲು ಪಂಚಮಿತ್ರ ವಾಟ್ಸಾಪ್ ಚಾಟ್ ಬಿಡುಗಡೆ

ಮಕ್ಕಳಿಗೆ ಮಾರ್ಚ್‌ ಧಮಾಕ.!‌ ಒಂದಲ್ಲಾ-ಎರಡಲ್ಲಾ ಎಷ್ಟು ಗೊತ್ತಾ ಈ ತಿಂಗಳ ರಜೆ??


Share

Leave a Reply

Your email address will not be published. Required fields are marked *