rtgh
Headlines

ಪೇಟಿಎಂ ಬೃಹತ್ ಉದ್ಯೋಗಾವಕಾಶ: ‌ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ

paytm vacancy
Share

ಹಲೋ ಸ್ನೇಹಿತರೇ, ಪದವಿ ಹಾಗೂ ಇತರೆ ಉನ್ನತ ಶಿಕ್ಷಣ ಪಡೆದು ಜಾಬ್‌ ಹುಡುಕುತ್ತಿದ್ದರೆ ಈಗಲೇ ಈ ಜಾಬ್‌ ಮಾಹಿತಿ ತಿಳಿದುಕೊಳ್ಳಿ. ಯಾವುದೇ ಪರೀಕ್ಷೆ ಇಲ್ಲದೆ, ಜಸ್ಟ್‌ ನೇರ ಸಂದರ್ಶನಕ್ಕೆ ಹಾಜರಾಗಿ ಜಾಬ್‌ ಪಡೆಯಿರಿ. ಈ ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

paytm vacancy

ಡಿಜಿಟಲ್‌ ಪೇಮೆಂಟ್‌ & ಹಣಕಾಸು ಸೇವೆಗಳಿಗೆ ಹೆಸರುವಾಸಿಯಾದ ಭಾರತದ ಬಹುರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ಕಂಪನಿ ಪೇಟಿಎಂ ಈಗ ಬೆಂಗಳೂರಿನಲ್ಲಿ ಅಗತ್ಯ ಹುದ್ದೆಗಳ ಭರ್ತಿ ಮಾಡಲು ನೇರ ಸಂದರ್ಶನ ನಡೆಸುತ್ತಿದೆ. ಈ ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ ಪದವೀಧರರು, ಇತರೆ ಹೆಚ್ಚಿನ ವಿದ್ಯಾರ್ಹತೆ ಪಡೆದವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ನೇಮಕಾತಿ ಕಂಪನಿಪೇಟಿಎಂ (ಡಿಜಿಟಲ್ ಪೇಮೆಂಟ್, ಹಣಕಾಸು ಸೇವೆಗಳ ಕಂಪನಿ)
ಹುದ್ದೆ ಹೆಸರುಪ್ರಾದೇಶಿಕ ಸೇಲ್ಸ್‌ ಮ್ಯಾನೇಜರ್
ಹುದ್ದೆಯ ಸ್ಥಳಬೆಂಗಳೂರು
ಅರ್ಹತೆಗಳುಪದವಿ & ಇತರೆ ಉನ್ನತ ಶಿಕ್ಷಣ.
ಕಾರ್ಯಾನುಭವ5 ಕ್ಕೂ ಹೆಚ್ಚಿನ ವರ್ಷಗಳು.

ಕಾರ್ಯಾನುಭವವನ್ನು NBFC, ಫಿನ್‌ಟೆಕ್‌, ಬ್ಯಾಂಕಿಂಗ್, ಟೆಲಿಕಾಂ, ಇನ್ಸುರೆನ್ಸ್‌, ಕಸ್ಟಮರ್ ಡೂರೇಬಲ್ಸ್‌ & FMCG ಕ್ಷೇತ್ರಗಳಲ್ಲಿ ಹೊಂದಿರುವವರಿಗೆ ಆದ್ಯತೆ ಇರುತ್ತದೆ.

ನೇರ ಸಂದರ್ಶನ ದಿನಾಂಕ : ಜುಲೈ 26, 27, 28, 2024 ರಂದು ಬೆಳಿಗ್ಗೆ 10-00 am to 6 pm.
ನೇರ ಸಂದರ್ಶನ ಸ್ಥಳ : ದಿ ಹಬ್ ಯುನಿಟ್-1, ಸರ್ಜಾಪುರ – ಮಾರಥ್‌ಹಳ್ಳಿ ರಸ್ತೆ, ಬೆಳ್ಳಂದೂರು, ಬೆಂಗಳೂರು.

ನೇರ ಸಂದರ್ಶನಕ್ಕೆ ಹಾಜರಾಗುವವರು ತಮ್ಮ ಲೇಟೆಸ್ಟ್‌ ಬಯೋಡಾಟಾದೊಂದಿಗೆ, ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವದ ದಾಖಲೆಗಳನ್ನು ತೆಗೆದುಕೊಂಡು ಸಂದರ್ಶನಕ್ಕೆ ಹಾಜರಾಗಬೇಕು. ಉದ್ಯೋಗ ಸ್ಥಳ ಬೆಂಗಳೂರು. ಅರ್ಹರಿಗೆ ಆಕರ್ಷಕ ವೇತನ ನೀಡಿ ನೇಮಕ ಮಾಡಿಕೊಳ್ಳಲಾಗುವುದು.

ಪೇಟಿಎಂ ಪ್ರಾದೇಶಿಕ ಸೇಲ್ಸ್‌ ಮ್ಯಾನೇಜರ್ ಹುದ್ದೆಗೆ ಸಂಭಾವ್ಯ ವೇತನ ವಿವರ

7 – 11 ವರ್ಷ ಕಾರ್ಯಾನುಭವ ಇರುವ ಪೇಟಿಎಂ ಪ್ರಾದೇಶಿಕ ಸೇಲ್ಸ್‌ ಮ್ಯಾನೇಜರ್ ಗಳಿಗೆ ವಾರ್ಷಿಕ ವೇತನ ಪ್ಯಾಕೇಜ್ ಕನಿಷ್ಠ 6.6 ಲಕ್ಷ ರೂ ಇರುತ್ತದೆ. ಸರಾಸರಿ ವಾರ್ಷಿಕ ವೇತನ ಈ ಹುದ್ದೆಯಲ್ಲಿ ಇರುವವರಿಗೆ 5.5 ಲಕ್ಷದಿಂದ 8.5 ಲಕ್ಷದವರೆಗೆ ಇರಲಿದೆ ಎಂದು ಮೂಲಗಳು ಹೇಳಿದೆ.

ಹೆಚ್ಚಿನ ಮಾಹಿತಿಗಾಗಿ
ಶ್ರೀಮನ್ – 7829354622, [email protected]

ಪೇಟಿಎಂ ಪ್ರಾದೇಶಿಕ ಸೇಲ್ಸ್‌ ಮ್ಯಾನೇಜರ್ ಹುದ್ದೆಯ ಕರ್ತವ್ಯಗಳು

  • ಮಾರಾಟ & ವಿತರಣೆಯ ಕಾರ್ಯಗಳು.
  • ವ್ಯಾಪಾರಿಗಳು & ಪ್ರಮುಖ ಖಾತೆಗಳ ನಿರ್ವಹಣೆ.
  • ಪ್ರತಿದಿನದ ಚಟುವಟಿಕೆಗಳು, ಸೇವೆಗಳ ಜವಾಬ್ದಾರಿ.
  • 15 ನೇರ ವರದಿಗಾರರ ಟೀಮ್‌ ಅನ್ನು ಮುನ್ನಡೆಸುವುದು.

ಇತರೆ ವಿಷಯಗಳು

ನಂದಿನ ಹಾಲಿನ ದರ ₹2 ಏರಿಕೆ!! ಇಂದಿನಿಂದಲೇ ಜಾರಿ

ರೈಲು ಪ್ರಯಾಣಿಕರಿಗೆ ದೊಡ್ಡ ಸುದ್ದಿ.! ಹಿರಿಯ ನಾಗರಿಕರಿಗೆ ಮತ್ತೆ ಸಿಗಲಿದೆ ಈ ಸೌಲಭ್ಯ


Share

Leave a Reply

Your email address will not be published. Required fields are marked *