ಹಲೋ ಸ್ನೇಹಿತರೇ, ಕಳೆದ ಫೆಬ್ರುವರಿ ತಿಂಗಳಲ್ಲಿ ಅಧಿಸೂಚಿಸಿದ್ದ KAS ಹುದ್ದೆಗಳ ನೇಮಕಾತಿ ಸಂಬಂಧ, ಈ ಹುದ್ದೆಗಳ ಅರ್ಜಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಕರ್ನಾಟಕ ಸರ್ಕಾರದ ಉನ್ನತ ದರ್ಜೆಯ ಹುದ್ದೆಯನ್ನು ಪಡೆಯಬೇಕೆಂದರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕರ್ನಾಟಕ ಲೋಕಸೇವಾ ಆಯೋಗವು 384 KAS- ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ & ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕಳೆದ ಫೆಬ್ರುವರಿ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಪರಿಷ್ಕೃತ ವೇಳಾಪಟ್ಟಿ ಪ್ರಕಾರ KAS ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ 3 ದಿನಗಳಷ್ಟೆ ಬಾಕಿ.
Contents
KAS ಹುದ್ದೆಗಳ ನೇಮಕಾತಿಯ ಪರಿಷ್ಕೃತ ದಿನಾಂಕಗಳು
384 ಕೆಎಎಸ್ ಹುದ್ದೆಗೆ ಅಪ್ಲೇ ಮಾಡಲು ಕೊನೆ ದಿನಾಂಕ : 15-04-2024
384 KAS ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ದಿನಾಂಕ : 07-07-2024
KPSC KAS ಹುದ್ದೆಗೆ ಅರ್ಜಿ ಹಾಕುವ ವಿಧಾನ
– ಮೊದಲು ಈ ವೆಬ್‌ಸೈಟ್‌ಗೆ ‘http://www.kpsc.kar.nic.in/’ ಗೆ ಭೇಟಿ ನೀಡಿ.
– ‘Apply Online for Various Notifications’ ಎಂಬುವುದರ ಮೇಲೆ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪೇಜ್ ತೆರೆದುಕೊಳ್ಳುತ್ತದೆ. ಮೊದಲು ಯಾವ್ಯಾವ ಹುದ್ದೆಗೆ ಅರ್ಜಿ ಲಿಂಕ್ ಇವೆ ಎಂದು ಓದಿಕೊಳ್ಳಿ.
– KPSC ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್‌ಗಾಗಿ ‘Click Here For One Time Registration‘ ಲಿಂಕ್ ಕ್ಲಿಕ್ ಮಾಡಿ.
– ಅಗತ್ಯ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್ ಪೂರ್ಣಗೊಳಿಸಿ. ನಿಮ್ಮ ಪ್ರೊಫೈಲ್ ಕ್ರಿಯೇಟ್ ಆಗಲಿದೆ.
– ಈಗಾಗಲೇ KPSC ವೆಬ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಬೇಕು.
– ನಂತರ KAS ಹುದ್ದೆ ಅರ್ಜಿಗೆ ಕೇಳಲಾಗಿರುವ ವಿವರಗಳನ್ನು ನೀಡಿ ಅಪ್ಲೇ ಮಾಡಿ.
– ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್ ಪ್ರಿಂಟ್‌ನ್ನು ತೆಗೆದುಕೊಳ್ಳಿ.
ಅಗತ್ಯ ದಾಖಲೆಗಳು
- ಹೆಸರು
- SSLC ಅಂಕಪಟ್ಟಿ
- ವೈಯಕ್ತಿಕ ವಿವರ
- ಮೊಬೈಲ್ ಸಂಖ್ಯೆ
- ಶೈಕ್ಷಣಿಕ ವಿವರ ಮತ್ತು ಅಂಕಗಳು, ಅಂಕಪಟ್ಟಿಗಳು.
- ಸಹಿ ಸ್ಕ್ಯಾನ್ ಕಾಪಿ.
- ಭಾವಚಿತ್ರ ಸ್ಕ್ಯಾನ್ ಕಾಪಿ.
- ಜಾತಿ & ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್.
- ಮೀಸಲಾತಿ ಕೋರುವ ಪ್ರಮಾಣ ಪತ್ರ
- ಸರ್ಕಾರಿ ಉದ್ಯೋಗಿ ಆಗಿದ್ದಲ್ಲಿ, NOC
- ಇತರೆ ದಾಖಲೆಗಳು ಮತ್ತು ವಿವರಗಳು.
ಇತರೆ ವಿಷಯಗಳು
ರಾಜ್ಯದಲ್ಲಿ 3 ದಿನಗಳು ಬಿಸಿಲಿನ ಜೊತೆ ಮಳೆ! ಹವಾಮಾನ ಇಲಾಖೆ ವರದಿ
ಕಾನೂನು ವಲಯದಲ್ಲಿ ಉದ್ಯೋಗಾವಕಾಶ!! ಟೈಪಿಸ್ಟ್ ಖಾಲಿ ಹುದ್ದೆಗಳಿಗೆ ಇಂದೇ ಅಪ್ಲೇ ಮಾಡಿ