ಹಲೋ ಸ್ನೇಹಿತರೇ, ರಾಜ್ಯದಲ್ಲಿ ತೀರ್ವ ಮಳೆ ಕೊರತೆಯಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಕುಡಿಯಲು & ಕೃಷಿ ಚಟುವಟಿಕೆಗೆ ನೀರಿನ ಅಭಾವ ಹೆಚ್ಚಾಗಿ ಜನರು ಆಕಾಶದತ್ತ ತಿರುಗಿ ಮಳೆರಾಯನ ಬರವಿಕೆಯನ್ನು ಕಾಯುವಂತಾಗಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
Contents
ಬೆಳಿಗ್ಗೆ 8 ಗಂಟೆವರೆಗಿನ ರಾಜ್ಯದ ಹವಾಮಾನ ಮುನ್ಸೂಚನೆ
ಹವಾಮಾನ ಮುನ್ಸೂಚನೆ ನೀಡುವ ಪರಿಣಿತರ ಮಾಹಿತಿಯ ಪ್ರಕಾರದ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಹಲವೆಡೆ ಮೋಡದ ವಾತಾವರಣದ ಮುನ್ಸೂಚನೆಯಿದೆ. ವಾತಾವರಣದ ತೇವಾಂಶ ಕಡಿಮೆಯಾಗಿರುವುದರಿಂದ ಮಳೆಯ ಸಾಧ್ಯತೆ ಕಡಿಮೆ ಎಂದು ತಿಳಿಸಲಾಗಿದೆ.
ಹಾಸನ, ಕೊಡಗು ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆಯಿದೆ. ಚಿಕ್ಕಮಗಳೂರಿನ ಅಲ್ಲಲ್ಲಿ ಮೋಡ /ತುಂತುರು ತುಂತುರು ಮಳೆಯ ಮುನ್ಸೂಚನೆ ಇರುತ್ತದೆ. ಬೀದರ್, ಕಲಬುರ್ಗಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆಯಿದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆಯಿದೆ.
ಸಂಜೆಯ ವೇಳೆಗೆ ಪೂರ್ವ ಹಾಗೂ ಪಶ್ಚಿಮದ ಗಾಳಿಯೂ ಸಂಧಿಸುವ ಕಾರಣದಿಂದ ಒತ್ತಡ ಹೆಚ್ಚಾಗಿ ಮಳೆಯ ವಾತಾವರಣ ಸೃಷ್ಟಿಯಾಗಲಿದೆ. ಈ ಪ್ರಕ್ರಿಯೆಯೂ ಎಪ್ರಿಲ್ 14ರ ನಂತರ ಕಡಿಮೆಯಾಗಲಿದೆ, ಎಪ್ರಿಲ್ 17ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆಯಿದೆ.
ಎಪ್ರಿಲ್. 12ಮತ್ತು 13ರಂದು ಹಾಸನ, ಕೊಡಗು, ಚಿಕ್ಕಮಗಳೂರಿನ ಅಲ್ಲಲ್ಲಿ, ಕಾಸರಗೋಡು, ದಕ್ಷಿಣ ಕನ್ನಡ, ಭಾಗಗಳಲ್ಲಿ ಒಂದೆರಡು ಕಡೆ ಮತ್ತು ದಕ್ಷಿಣ & ಉತ್ತರ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆಯಿದೆ.
ಮುಂದಿನ 2 ವಾರದ ಸಂಚಿತ ಮಳೆ ಮುನ್ಸೂಚನೆ :
ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದವು ಮುಂದಿನ 2 ವಾರ ಸಂಚಿತ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ ದಿನಾಂಕ: 11-04-2024 – 18-04-2024 ರವರೆಗೂ ಬೀದರ್, ಬೆಳಗಾವಿ, ಕೊಡಗು, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯ ಅಲ್ಲಲ್ಲಿ (2.5-5m m) ಸಾಧಾರಣ ಮಳೆy ಮುನ್ಸೂಚನೆಯನ್ನು ನೀಡಲಾಗಿದೆ.
ದಿನಾಂಕ: 18-04-2024 – 26-04-2024 ರವರೆಗೆ ಚಿಕ್ಕಮಗಳೂರು, ಮೈಸೂರು, ಕೊಡಗು, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗದ ತಾಲ್ಲೂಕುಗಳಲ್ಲಿ ಮಧ್ಯಮ(25-40 ಮಿ ಮೀ) ಮಳೆಯ ಮುನ್ಸೂಚನೆ ನೀಡಲಾಗಿದೆ ಉಳಿದ ಜಿಲ್ಲೆಗಳಲ್ಲಿ (2.5-5 ಮಿ ಮೀ) ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇತರೆ ವಿಷಯಗಳು
HSRP ನಂಬರ್ ಪ್ಲೇಟ್ ಜೊತೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸುಲಭ ವಿಧಾನ
ಗೃಹಲಕ್ಷ್ಮೀ 8 ನೇ ಕಂತಿನ ಹಣ ಇಂದು ಖಾತೆಗೆ ಜಮಾ.! ಚೆಕ್ ಮಾಡಲು ಲಿಂಕ್ ಇಲ್ಲಿ ಡೌನ್‌ಲೋಡ್ ಮಾಡಿ