rtgh

SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕ

karnataka legislative council recruitment
Share

ಹಲೋ ಸ್ನೇಹಿತರೇ, ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯದಲ್ಲಿ ಡ್ರೈವರ್ ಹಾಗೂ ಗ್ರೂಪ್‌ ಡಿ ಹುದ್ದೆಯ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

karnataka legislative council recruitment

ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದ ವಾಹನ ಚಾಲಕರು & ಡಿ ಗುಂಪು ಹುದ್ದೆಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದ್ದು. ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಹುದ್ದೆಗಳಾಗಿವೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

  • ವಾಹನ ಚಾಲಕರ ಹುದ್ದೆ : 03
  • ಗ್ರೂಪ್ D ಹುದ್ದೆಗಳು :(ದಲಾಯತ್, ಕಾವಲುಗಾರರು, ಸ್ವೀಪರ್ ಕಮ್ ಸ್ಕ್ಯಾವೆಂಜರ್, ಸೆಕ್ಯೂರಿಟಿ ಗಾರ್ಡ್‌) – 29

ವೇತನ ಶ್ರೇಣಿ ವಿವರ

  • ವಾಹನ ಚಾಲಕರ ವೇತನ : 21,400-42,000.
  • ಗ್ರೂಪ್ D ಹುದ್ದೆಗಳು :(ದಲಾಯತ್, ಕಾವಲುಗಾರರು, ಸ್ವೀಪರ್ ಕಮ್ ಸ್ಕ್ಯಾವೆಂಜರ್, ಸೆಕ್ಯೂರಿಟಿ ಗಾರ್ಡ್‌) : Rs.17,000-28,950.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2024

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅರ್ಜಿಯನ್ನು ಸಚಿವಾಲಯದ ವೆಬ್‌ಸೈಟ್‌ ನಲ್ಲಿ ನೀಡಲಾಗಿದ್ದು ನಮೂನೆ-1 ರ ದ್ವಿಪ್ರತಿಯಲ್ಲಿ ಅಗತ್ಯವುಳ್ಳ ದಾಖಲೆಯನ್ನು ಲಗತ್ತಿಸಿ, ಕೊನೆ ದಿನಾಂಕ 05-04-2024 ರಂದು ಸಂಜೆ 05-00 ಗಂಟೆಯ ಒಳಗಾಗಿ ಅಂಚೆಯ ಮೂಲಕ ವಿಳಾಸ – ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ – 5079, 1ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001 ರ ವಿಳಾಸಕ್ಕೆ / ಖುದ್ದಾಗಿ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 216 ಪತ್ರ ಸ್ವೀಕಾರ & ರವಾನೆ ಶಾಖೆಗೆ ತಲುಪಿಸಲಾಗುವುದು.

ಅಪ್ಲಿಕೇಶನ್‌ ಶುಲ್ಕ ವಿವರ

  • ಸಾಮಾನ್ಯ ಅಭ್ಯರ್ಥಿಗಳಿಗೆ ₹600
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹300.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50.
  • SE / ST / ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗುವುದು.

ಅರ್ಹತೆಗಳು

ವಾಹನ ಚಾಲಕರು ಹುದ್ದೆಗೆ – SSLC / ತತ್ಸಮಾನ ಪರೀಕ್ಷೆ ಪಾಸ್‌. ಜತೆಗೆ ಮೋಟಾರು ಕಾರು, ಭಾರಿ ವಾಹನಗಳ ಚಾಲನೆಯ ಅಧಿಕೃತ ಚಾಲನಾ ಪರವಾನಗಿ ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಮೋಟಾರು ಕಾರುಗಳ ಚಾಲನೆಯಲ್ಲಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಪ್ರಾಯೋಗಿಕ ಅನುಭವ ಹೊಂದಿರಬೇಕಾಗುತ್ತದೆ.
ಗ್ರೂಪ್ ಡಿ ಹುದ್ದೆಗಳಿಗೆ – SSLC / ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಕರ್ನಾಟಕ ವಿಧಾನ ಪರಿಷತ್ತಿನ ವೆಬ್‌ಸೈಟ್‌ ವಿಳಾಸ – https://www.kla.kar.nic.in/council/career.htm

ವಯಸ್ಸು: ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷಗಳು ಮೀರಿರಬಾರದು, ಇತರೆ ಹಿಂದುಳಿದ ವರ್ಗದವರಿಗೆ ಗರಿಷ್ಠ 38 ವರ್ಷ ಮೀರಬಾರದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಬಾರದು.

ಇತರೆ ವಿಷಯಗಳು

ಯುಪಿಎಸ್‌ಸಿ IAS, IPS, IFS, ಇತರೆ ಹುದ್ದೆಗಳ ಅರ್ಜಿಗೆ ಇಂದೇ ಕೊನೆ ದಿನ.! ಆಸಕ್ತರು ಬೇಗ ಅರ್ಜಿ ಹಾಕಿ

ಗೃಹಲಕ್ಷ್ಮಿಯರಿಗೆ ಬಂತು ನ್ಯೂ ರೂಲ್ಸ್.!!‌ ಯಾವುವು ಗೊತ್ತಾ ಆ ನಾಲ್ಕು ನಿಯಮಗಳು?


Share

Leave a Reply

Your email address will not be published. Required fields are marked *