ಹಲೋ ಸ್ನೇಹಿತರೇ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಖಾಲಿ ಇರುವ ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಮಾಹಿತಿ ಹೊರಡಿಸಿ ಆನ್ಲೈನ್ ಮುಖಾಂತರ ಅರ್ಹ ಅಭ್ಯರ್ಥಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಪ್ಲೇ ಮಾಡುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಈ ನೇಮಕಾತಿಗೆ ಅಪ್ಲೇ ಮಾಡುವ ಅಭ್ಯರ್ಥಿಗಳಿಗೆ ಬೇಕಾಗಿರುವ ಅಧಿಕೃತ ನೋಟಿಫಿಕೇಶನ್ ನ ಅಗತ್ಯ ವಿವರವನ್ನು ಈ ಕೆಳಗಿನ ನೀಡಲಾಗಿದೆ. ನೀವು ಕೂಡ ಅರ್ಹ ಮತ್ತು ಆಸಕ್ತ ಅಭ್ಯಾರ್ಥಿಯಾಗಿದ್ದರೆ ಅಪ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
ಹುದ್ದೆಯ ವಿವರ
• ಇಲಾಖೆ ಹೆಸರು : ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
• ಒಟ್ಟು ಹುದ್ದೆಗಳ ಸಂಖ್ಯೆ : 08 ಹುದ್ದೆಗಳು
• ಹುದ್ದೆಗಳ ಹೆಸರು : ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್( Law Clerk Cum Research Assistant)
ಶೈಕ್ಷಣಿಕ ಅರ್ಹತೆ ವಿವರ
ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು Law Clerk Cum Research Assistant ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ಪದವಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕ ಪಡೆದು ಪಾಸಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ದಾಖಲೆಯಾಗಿರಬೇಕು.
ವಯೋಮಿತಿ ಅರ್ಹತೆ:
ಹುದ್ದೆಗಳಿಗೆ ಅಪ್ಲೇ ಮಾಡುವ ಅಭ್ಯರ್ಥಿಯ ವಯಸ್ಸು ಅಧಿಕೃತ ನೋಟಿಫಿಕೇಶನ್ ಪ್ರಕಾರ ಅಪ್ಲೇ ಮಾಡುವ ಕೊನೆಯ ದಿನಾಂಕಕ್ಕೆ ಗರಿಷ್ಟ 30 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಈ ನೇಮಕಾತಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲಾ ಆಸಕ್ತ ಅಭ್ಯರ್ಥಿಗಳು ಉಚಿತವಾಗಿ ಅಪ್ಲೇ ಮಾಡಬಹುದು.
ಕರ್ನಾಟಕ ಹೈಕೋರ್ಟ್ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಸಂದರ್ಶನ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲಾಗುವುದು.
ಆನ್ ಲೈನ್ ಅರ್ಜಿ ಸಲ್ಲಿಕೆಗೆ ದಿನಾಂಕಗಳು:
ಆರಂಭವಾದ ದಿನಾಂಕ : 28 ಮಾರ್ಚ್ 2024
ಕೊನೆಯ ದಿನಾಂಕ : 17 ಏಪ್ರಿಲ್ 2024
ಆನ್ಲೈನ್ ಅರ್ಜಿ ಪ್ರಕ್ರಿಯೆ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಬಳಸಿಕೊಂಡು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕ 17 ಏಪ್ರಿಲ್ 2024 ರೊಳಗೆ ಅರ್ಜಿ ಸಲ್ಲಿಸಿ.
ಅಪ್ಲೇ ಡೈರೆಕ್ಟ್ ಲಿಂಕ್ : Click here
ಇತರೆ ವಿಷಯಗಳು
ಇಂದಿನಿಂದ 4 ದಿನಗಳವರೆಗೆ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್!
ರಾಜ್ಯದ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್ ಮಾಡಿ