ಹಲೋ ಸ್ನೇಹಿತರೇ, ಜುಲೈ 03 ರಿಂದ ಜುಲೈ 12, 2024 ರವರೆಗೂ ನಡೆಯುವ ವಾಯುಪಡೆಯ ಏರ್‌ಮೆನ್ ನೇಮಕಾತಿ ರ್ಯಾಲಿಗೆ ಅರ್ಹ & ಆಸಕ್ತ ಭಾರತೀಯ ಪ್ರಜೆಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ 2nd ಪಿಯುಸಿ ವಿದ್ಯಾರ್ಹತೆ ಪಾಸ್ ಮಾಡಿರಬೇಕು. ಈ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.
ನೀವು 2nd ಪಿಯುಸಿ ಪರೀಕ್ಷೆಯನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಮಾಡಿದ್ದೀರಾ? ಹಾಗಿದ್ರೆ ನಿಮಗಿದೋ ಭರ್ಜರಿ ಗುಡ್ ನ್ಯೂಸ್. ಭಾರತೀಯ ವಾಯುಪಡೆಯು ಗ್ರೂಪ್ Y ಏರ್‌ಮೆನ್ ಹುದ್ದೆ ಭರ್ತಿಗೆ ಅಧಿಸೂಚಿಸಿದೆ, ಕೇಂದ್ರ ಸರ್ಕಾರದ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಅರ್ಹರು.
ನೇಮಕಾತಿ ಪ್ರಾಧಿಕಾರ : ಭಾರತೀಯ ವಾಯುಪಡೆ
ಹುದ್ದೆಯ ಹೆಸರು : ಏರ್‌ಮನ್ ಗ್ರೂಪ್ ವೈ (ನಾನ್ ಟೆಕ್ನಿಕಲ್) ಮೆಡಿಕಲ್ ಅಸಿಸ್ಟಂಟ್ ಟ್ರೇಡ್ ಹುದ್ದೆಗಳು.
ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಆಯ್ಕೆ ವಿಧಾನ : ಫಿಸಿಕಲ್ ಫಿಟ್‌ನೆಸ್, ಲಿಖಿತ ಪರೀಕ್ಷೆ, ಅಡಾಪ್ಟೆಬಿಲಿಟಿ ಟೆಸ್ಟ್, ವೈದ್ಯಕೀಯ ಪರೀಕ್ಷೆ.
Contents
ಅರ್ಜಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ: 22-05-2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-06-2024 ರ ರಾತ್ರಿ 23-00 ಗಂಟೆವರೆಗೆ.
ಏರ್‌ಮೆನ್ ಹುದ್ದೆಗೆ ಅರ್ಹತೆಗಳು
- ಮೆಡಿಕಲ್ ಅಸಿಸ್ಟಂಟ್ ಟ್ರೇಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 2004 ರ ಜನವರಿ 2 ರಿಂದ 2008 ರ ಜನವರಿ 02 ರ ನಡುವೆ ಹುಟ್ಟಿರಬೇಕು.
- ವಿವಾಹಿತರಾಗಿರಬಾರದು. ಪಿಯುಸಿ ಅನ್ನು ಕಡ್ಡಾಯ ಫಿಸಿಕ್ಸ್, ಕೆಮಿಸ್ಟ್ರಿ, ಬಯೋಲಜಿ & ಇಂಗ್ಲಿಷ್ ನಲ್ಲಿ ಶೇಕಡ.50 ಅಂಕಗಳಿಸಿರಬೇಕು.
- ಮೆಡಿಕಲ್ ಅಸಿಸ್ಟಂಟ್ ಟ್ರೇಡ್ (ಡಿಪ್ಲೊಮ / BSC ಇನ್ ಫಾರ್ಮಸಿ) ಹುದ್ದೆಗಳಿಗೆ 2001 ರ ಜನವರಿ 02 ರಿಂದ 2004 ರ ಜನವರಿ 02 ರ ನಡುವೆ ಹುಟ್ಟಿರಬೇಕು.
- ಅವಿವಾಹಿತ ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
- ವಾಯುಪಡೆಯ ಅಧಿಕೃತ ವೆಬ್‌ಸೈಟ್ ವಿಳಾಸ http://www.airmenselection.cdac.in ಗೆ ಭೇಟಿ ಮಾಡಿ.
- ಮೇ 22 ರಂದು ‘Airmen’ ಹುದ್ದೆಗಳ ಅರ್ಜಿಗೆ ಆನ್‌ಲೈನ್ ಲಿಂಕ್ ಬಿಡುಗಡೆ ಮಾಡಲಾಗಿದೆ.
- ಸದರಿ ಲಿಂಕ್ ಕ್ಲಿಕ್ ಮಾಡಿಕೊಂಡು ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಿರಿ.
- ಕೇಳಲಾದ ದಾಖಲೆಗಳ ಸಾಫ್ಟ್ ಕಾಪಿ ಅಪ್‌ಲೋಡ್ ಮಾಡಿ ಅರ್ಜಿ ಹಾಕಿ.
ಭಾರತೀಯ ವಾಯುಪಡೆಯ ಏರ್‌ಮೆನ್ ಗ್ರೂಪ್ Y ಹುದ್ದೆಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ ರೂ.14,900 ಸ್ಟೈಫಂಡ್ ನೀಡಲಾಗುವುದು. ತರಬೇತಿ ಮುಗಿದ ನಂತರ ಮಿಲಿಟರಿ ಸೇವೆಗಳ ಬೇಸಿಕ್ ಪೇ ರೂ.26900 ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುವುದು.
ಇತರೆ ವಿಷಯಗಳು
ಗ್ಯಾಸ್ ಸಿಲಿಂಡರ್ ಮಾಲೀಕರಿಗೆ ಬಿಗ್ ರಿಲೀಫ್..! ಸಿಲಿಂಡರ್ ಬೆಲೆ ಕಡಿಮೆ
ವಿವಾಹಿತರಿಗೆ ಗುಡ್ ನ್ಯೂಸ್! ಮದುವೆ ಪ್ರಮಾಣಪತ್ರ ಮನೆಯಲ್ಲಿಯೇ ಪಡೆಯಿರಿ