ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಬಡವರ ಕಷ್ಟಕ್ಕೆ ನೆರವಾಗುವಂತಹ ಸರ್ಕಾರ ಆಗಿದೆ. ರೈತರಿಗೆ ಹೆಚ್ಚು ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರ ಮೂಲಕ ರೈತರ ಕೃಷಿ ಕೆಲಸಕ್ಕೆ ಸಾಕಷ್ಟು ಸಹಾಯ ಮಾಡುತ್ತಲೇ ಬಂದಿದೆ. ಇಂದಿನ ಈ ಲೇಖನದಲ್ಲಿ ತಿಳಿಸುವ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಕೊನೆವರೆಗೂ ಓದಿ.
ಕೃಷಿ ಕೆಲಸ ಎಂದರೆ ಅಲ್ಲಿ ಪ್ರಮುಖವಾಗಿ ನೀರಾವರಿ ವ್ಯವಸ್ಥೆ ಇರಬೇಕು. ಒಂದು ವೇಳೆ ನಿಮ್ಮ ಕೃಷಿ ನೆಲದಲ್ಲಿ ನೀರಾವರಿ ವ್ಯವಸ್ಥೆ ಸರಿಯಾಗಿ ಇಲ್ಲ ಎಂದರೆ, ನಿಮಗಾಗಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
Contents
ಗಂಗಾ ಕಲ್ಯಾಣ ಯೋಜನೆ
ರೈತರ ನೀರಾವರಿ ಸಮಸ್ಯೆಯನ್ನು ಸರಿ ಮಾಡುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರಿಗೆ ಬೋರ್ವೆಲ್ ಕೊರೆಸಲು ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಈ ಮೂಲಕ ರೈತರು ಕೃಷಿ ಕೆಲಸಕ್ಕೆ ಬೇಕಾಗುವ ನೀರನ್ನು ಬೋರ್ವೆಲ್ ಮೂಲಕ ಪಡೆಯಬಹುದು.
ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಮೂಲಕ ಜಮೀನಿನಲ್ಲಿ ತೆರೆದ ಬಾವಿ, ಕೊಳವೆ ಬಾವಿ ಅಥವಾ ಬೋರ್ವೆಲ್ ತೆರೆಯಲು 1.5 ಲಕ್ಷದವರೆಗೂ ಉಚಿತ ಸಾಲ ಸೌಲಭ್ಯ ನೀಡಲಾಗುತ್ತದೆ. ರಾಮನಗರ, ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಇದುವರೆಗೆ 3.5 ಲಕ್ಷದವರೆಗು ರೈತರಿಗೆ ಸಹಾಯಧನ ನೀಡಲಾಗುತ್ತಿದೆ.
ಇದನ್ನು ಓದಿ: 1500 ಪೊಲೀಸ್ ಹುದ್ದೆಗಳಿಗೆ ನೇರ ನೇಮಕಾತಿ! ತಕ್ಷಣ ಅರ್ಜಿ ಸಲ್ಲಿಸಿ
ಗಂಗಾ ಕಲ್ಯಾಣ ಯೋಜನೆಗೆ ಮಾನದಂಡ:
- ಅರ್ಜಿ ಹಾಕುವವರು ಹಳ್ಳಿಯಲ್ಲಿ ವಾಸಿಸುತ್ತಿದ್ದರೆ ಅವರ ವಾರ್ಷಿಕ ಆದಾಯ 90 ಸಾವಿರದ ಒಳಗಿರಬೇಕು, ನಗರ ವಾಸಿಯಾಗಿದ್ದರೆ ಅವರ ವಾರ್ಷಿಕ ಆದಾಯ 1.03 ಲಕ್ಷದ ಒಳಗಿರಬೇಕು.
- 18 ರಿಂದ 55 ವರ್ಷಗಳ ಒಳಗನ ವಯಸ್ಸು ಇರುವವರು ಅರ್ಜಿ ಸಲ್ಲಿಸಬಹುದು
- ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ಮಾತ್ರ ಅರ್ಜಿಗೆ ಅರ್ಹರು
- ಅರ್ಜಿ ಹಾಕುವವರು ಸಣ್ಣ ಕೃಷಿಕನಾದರೂ ಆಗಿರಬೇಕು.
ಅಗತ್ಯವಿರುವ ದಾಖಲೆಗಳು
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕೃಷಿ ನೆಲದ ಕೂಡಿವಿಕೆ ರಸ್ತೆ ಕಡತದ ಕಾಪಿ
- ಭೂ ಕಂದಾಯ ರಶೀದಿ
- ಸ್ವಯಂ ಘೋಷಣೆ ಪತ್ರ
- ಸುರಕ್ಷಿತ ಸ್ವಯಂ ಘೋಷಣೆ ಪತ್ರ.
- ಬಿಪಿಎಲ್ ಕಾರ್ಡ್
- ಬ್ಯಾಂಕ್ ಪಾಸ್ ಪುಸ್ತಕ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸುವವರು ಮೊದಲು ಈ https://kmdc.karnataka.gov.in/31/ganga-kalyana-schmeme/en ವೆಬ್ ಸೈಟ್ ಲಿಂಕ್ ಗೆ ಭೇಟಿ ನೀಡಿ
- ಯೋಜನೆಯ ಹೆಸರು ಬರುವ ಆಯ್ಕೆ ಸೆಲೆಕ್ಟ್ ಮಾಡಿ
- ಬಳಿಕ ಅಪ್ಲಿಕೇಶನ್ ಇರುವ ಪೇಜ್ ಬರುತ್ತದೆ, ಅದನ್ನು ಸೆಲೆಕ್ಟ್ ಮಾಡಿ
- ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳಿಗೆ ಸರಿಯಾಗಿ ಉತ್ತರಿಸಿ
- ಅವಶ್ಯಕತೆ ಇರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಬಳಿಕ Submit ಎನ್ನುವ ಆಯ್ಕೆ ಸೆಲೆಕ್ಟ್ ಮಾಡಿ
- ಇಷ್ಟು ಕೆಲಸಗಳನ್ನು ಮಾಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.
ಇತರೆ ವಿಷಯಗಳು:
ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ.!
ಟೊಮೆಟೊ ಪ್ರಿಯರಿಗೆ ಶಾಕಿಂಗ್ ಸುದ್ದಿ: ದಿಢೀರನೆ ಕೆಜಿಗೆ ₹80 ಏರಿಕೆ!!