rtgh

247 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ ನೇಮಕಾತಿ.! ಅಪ್ಲೇ ಮಾಡಿದ್ರೆ 70 ಸಾವಿರ ಸಂಬಳ

department of rural development and panchayat raj recruitment
Share

ಹಲೋ ಸ್ನೇಹಿತರೇ, ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆ ಖಾಲಿ ಇರುವ ಒಟ್ಟು 247 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆ ಭರ್ತಿ ಮಾಡಲು ಆಸಕ್ತರಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಲೇಖನದಲ್ಲಿದೆ ಸಂಪೂರ್ಣ ಅರ್ಜಿ ಸಲ್ಲಿಸುವ ವಿಧಾನ.

department of rural development and panchayat raj recruitment

247 ಹುದ್ದೆಗಳಲ್ಲಿ 150 ಉಳಿಕೆ ಮೂಲ ವೃಂದ ಹುದ್ದೆಗಳು ಮತ್ತು 97 ಹೈದರಾಬಾದ್-ರ‍್ನಾಟಕ ವೃಂದ ಹುದ್ದೆಗಳ ಭರ್ತಿ ಮಾಡಲು ಇಲಾಖೆಯು ಮುಂದಾಗಿದೆ. ಅಭ್ಯರ್ಥಿಗಳು 15-04-2024 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಪ್ಲೇ ಮಾಡಲು ಕೊನೆಯ ದಿನಾಂಕ 15-05-2024 ಆಗಿದೆ. 

ಅರ್ಜಿ ಶುಲ್ಕದ ವಿವರ:-

ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಮತ್ತು ವರ್ಗ 2A / 2B / 3A / 3B ಅಭ್ಯರ್ಥಿಗಳಿಗೆ 300 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಹಾಗೂ SE / ST ಹಾಗೂ ಪ್ರವರ್ಗ -1 & ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.

ವಯಸ್ಸಿನ ಮಿತಿ :-

ಹುದ್ದೆಗೆ ಅಪ್ಲೇ ಮಾಡಲು ಸಾಮಾನ್ಯ ಅಭ್ಯರ್ಥಿಯ ಕನಿಷ್ಟ ವಯಸ್ಸು 18 ರಿಂದ ಗರಿಷ್ಟ 35 ವರ್ಷ. ಸರ್ಕಾರದ ಮೀಸಲಾತಿಯ ನಿಯಮದಂತೆ ವಯಸ್ಸಿನ ಸಡಿಲಿಕೆ ಇರಲಿದೆ. 

ಮಾಸಿಕ ವೇತನವೂ 37,900 ರಿಂದ 70,850 ರೂ. ಆಗಿರುತ್ತದೆ.

ಅಭ್ಯರ್ಥಿಗಳ ವಿದ್ಯಾರ್ಹತೆ :- ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಹೊಂದಿರಬೇಕು.

ಅಭ್ಯರ್ಥಿಗಳ ಆಯ್ಕೆಯ ವಿಧಾನ :-

ಕರ್ನಾಟಕ ನಾಗರಿಕ ಸೇವೆಗಳ ರೂಲ್ಸ್‌ಗಳ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಸ್ಮರ್ಧಾತ್ಮಕ ಪರೀಕ್ಷೆಯು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, 100 ಅಂಕಗಳ 2 ಪತ್ರಿಕೆಗಳು ಇರಲಿದೆ. ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿ ಪತ್ರಿಕೆ ಇರುತ್ತದೆ. ಪರೀಕ್ಷೆ ಅವಧಿ 2 ಗಂಟೆಯಾಗಿರುತ್ತದೆ. ಒಂದು ತಪ್ಪು ಉತ್ತರಕ್ಕೆ ನಾಲ್ಲನೇ ಒಂದು ಋಣಾತ್ಮಕ ಅಂಕಗಳನ್ನು ತೆಗೆಯಲಾಗುತ್ತದೆ.

ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:- 

ಆಸಕ್ತ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ https://kpsc.kar.nic.in/ ತೆರಳಿ ನೇಮಕಾತಿ ಅಧಿಸೂಚನೆಯ ಗಮನಿಸಿ ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮತ್ತು ನಿಮ್ಮ ಗುರುತಿನ ಪುರಾವೆ ಮತ್ತು ವಿದ್ಯಾರ್ಹತೆ ವಿವರವನ್ನು ಸರಿಯಾಗಿ ಭರ್ತಿ ಮಾಡಿ. ನಂತರ ನಿಮಗೆ ನಿಗದಿ ಪಡಿಸಲಾದ ಶುಲ್ಕವನ್ನು ಪಾವತಿಸಿ ಅಪ್ಲೇ ಮಾಡಿ.  

ಹುದ್ದೆಗಳ ನೇಮಕಾತಿಗಾಗಿ ಅಪ್ಲೇ ಮಾಡಲು, ಏಪ್ರಿಲ್ 15, 2024 ರಂದು ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಲಿಂಕ್ ಸಕ್ರಿಯಗೊಳಿಸಲಾಗುತ್ತದೆ ಮತ್ತು ಇಲಾಖೆಯ ನಿಯಮದಂತೆ ಎಲ್ಲಾ ವಿವರಗಳು & ದಾಖಲೆಗಳನ್ನು ಸರಿಯಾಗಿ ಒದಗಿಸಿದ ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಆದ್ದರಿಂದ Online ಫಾರ್ಮ್ ಸಲ್ಲಿಸುವಾಗ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು, ನಿಗದಿತ ಸಮಯದೊಳಗೆ ನೀವು ಅಪ್ಲೇ ಮಾಡಬೇಕು ಹಾಗೂ ಅರ್ಜಿ ಸಲ್ಲಿಸಿದ ನಂತರ ನೀವು ಶುಲ್ಕ ಪಾವತಿ ಮಾಡದಿದ್ದಲ್ಲಿ ನಿಮ್ಮ ಅರ್ಜಿಯು ಮಾನ್ಯ ಆಗುವುದಿಲ್ಲ.

ಅಧಿಸೂಚನೆ PDF download ಮಾಡಲು ಇಲ್ಲಿ ಕ್ಲಿಕ್ ಮಾಡಿ(RPC)

ಅಧಿಸೂಚನೆ PDF download ಮಾಡಲು ಇಲ್ಲಿ ಕ್ಲಿಕ್ ಮಾಡಿ(HK)

ಇತರೆ ವಿಷಯಗಳು

ರೇಷನ್ ಕಾರ್ಡ್ ಇರುವ ಪ್ರತಿ ಕುಟುಂಬಗಳಿಗೆ ಅಗ್ಗದ ಬೆಲೆಯಲ್ಲಿ ಪಡಿತರ ಸಾಮಗ್ರಿ

ಇನ್ಮುಂದೆ ಗೃಹಲಕ್ಷ್ಮಿ ಸ್ಟೇಟಸ್ ಚೆಕ್‌ ಮಾಡಲು ಹೊಸ ಲಿಂಕ್‌! ಖಾತೆಗೆ ಹಣ ಬಂತಾ ಚೆಕ್‌ ಮಾಡಿ


Share

Leave a Reply

Your email address will not be published. Required fields are marked *