ಹಲೋ ಸ್ನೇಹಿತರೆ, ಈ ಬಾರಿ ಬರಗಾಲ ಹೆಚ್ಚಾಗಿ ಅವರಿಸಿದೆ. ಹಾಗಾಗಿ ರೈತರಿಗೆ ಈ ಬಾರಿಯ ಕೃಷಿ ಮಾಡುವುದು ಕಷ್ಟ ಎಂಬಂತಾಗಿದೆ. ಅಕ್ಕಿ , ರಾಗಿ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಮಳೆ ಇಲ್ಲದೆ ವಾತಾವರಣ ಸರಿಯಾಗಿ ಇಲ್ಲದೆ ತೀವ್ರ ಪ್ರಮಾಣದ ಬರಗಾಲ ದೊಡ್ಡ ಶಾಕ್ ನೀಡಿದೆ. ಅದೇ ರೀತಿ ರೈತರಿಗೆ ಬರಗಾಲದಿಂದ ಸರಿಯಾಗಿ ಬೆಳೆ ಬೆಳೆಯಲು ಕೂಡ ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಸರ್ಕಾರ 3ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
Contents
ಪರಿಹಾರ ಮೊತ್ತ
ಬರಗಾಲದಿಂದ ಕೃಷಿ ಚಟುವಟಿಕೆ ಮಾತ್ರವಲ್ಲದೆ ಪ್ರಾಣಿಗಳಿಗೆ ಮೇವಿಗೂ ಕೂಡ ಸಮಸ್ಯೆ ಕಂಡು ಬಂದಿದೆ. ಕೆಲವು ಹಸಿ ಹುಲ್ಲನ್ನು ನೀಡಿ ಉಚಿತವಾಗಿ ಮಾಡಿ ಹೈನುಗಾರರನ್ನು ಬೆಂಬಲಿಸಲಾಗುತ್ತಿದೆ. ಇದೀಗ ಕೃಷಿ ಚಟುವಟಿಕೆ ಜೊತೆ ಜೊತೆಗೆ ಆದಾಯ ಕೂಡ ಕ್ಷೀಣಿಸಿದ್ದು ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ರಾಜ್ಯ ಸರಕಾರ ಬರಗಾಲ ಪರಿಹಾರ ಮೊತ್ತ ನೀಡಲು ಮುಂದಾಗಿದ್ದು ಅದಕ್ಕೆ ಕೇಂದ್ರ ಸರಕಾರ ಕೂಡ ಬೆಂಬಲಿಸಿದೆ.
ಕೇಂದ್ರ ದಿಂದ ಸಹಕಾರ
ರಾಜ್ಯದಲ್ಲಿ ಹಲವು ಕಡೆ ಬರಗಾಲವಿದೆ ಹಾಗಾಗಿ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಪಾರ ಪ್ರಮಾಣದಲ್ಲಿ ನೆರವು ಕೋರಿ ರಾಜ್ಯದಿಂದ ಬರಗಾಲ ಪರಿಹಾರ ಮೊತ್ತಕ್ಕಾಗಿ ಕೇಂದ್ರದಲ್ಲಿ ಮನವಿ ಮಾಡಲಾಗಿದೆ. ಇತ್ತೀಚೆಗೆ ರಾಜ್ಯದ ಬೇಡಿಕೆ ಯಷ್ಟು ಹಣ ಬಿಡುಗಡೆ ಆಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮೊದಲೇ ರಾಜ್ಯ ಅನುದಾನ ಮಂಜೂರಾಗಿದೆ. ಹಾಗಾಗಿ ಅನೇಕ ರೈತರಿಗೆ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಆಗಿದ್ದು ಮೂರನೇ ಕಂತಿನ ಹಣ ಮಂಜೂರಾಗುವುದು ಬಾಕಿ ಇದೆ. ಹಾಗಾದರೆ ಆ ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ.
ಇದನ್ನು ಓದಿ: ಪ್ರತಿ ತಿಂಗಳಿಗೆ ₹95 ಸಾವಿರ ಸಂಬಳ.! ಈ ಕೆಲಸಕ್ಕೆ ಇಂದೇ ಅರ್ಜಿಯನ್ನು ಸಲ್ಲಿಸಿ
ರಾಜ್ಯ ಸರ್ಕಾರ ಬರ ಪರಿಹಾರ ಮೊತ್ತವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತಲಾ ಮೂರು ಸಾವಿರ ಪರಿಹಾರ ಮೊತ್ತ ನೀಡಲು ಈಗಾಗಲೇ ನಿರ್ಧರಿಸಿದೆ. ರಾಜ್ಯದಲ್ಲಿ ಒಟ್ಟು 224 ತಾಲೂಕು ಬರಗಾಲಕ್ಕೆ ತುತ್ತಾಗಿದ್ದು 16 ಲಕ್ಷಕ್ಕೂ ಅಧಿಕ ಕುಟುಂಬಗಳು ಬರದಿಂದ ಕಷ್ಟ ಪಡುತ್ತಿದ್ದಾರೆ. ಈ ಕುಟುಂಬಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಳ್ಳಲಾಗುತ್ತಿದ್ದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈಗಾಗಲೇ 32 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದ್ದು ಈ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣವಾಗಲು 20-30 ದಿನ ಬೇಕಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಯಾವಾಗ ಹಣ ಜಮಾ ಆಗಲಿದೆ?
ಬರ ಪರಿಹಾರ ಮೊತ್ತ ಜಮೆಗಾಗಿ ಅನೇಕರು ಕಾಯುತ್ತಲೇ ಇದ್ದಾರೆ. ಬರ ಪರಿಹಾರದ 3ನೇ ಕಂತಿನ ಹಣ ಮೇ 14 ರಿಂದ 30 ರೊಳಗೆ ಅರ್ಹರಿಗೆ ಬರ ಪರಿಹಾರ ಮೊತ್ತ ಅವರವರ ಖಾತೆಗೆ ಜಮೆ ಆಗುವ ಸಾಧ್ಯತೆ ಇದೆ. ಹಾಗಾಗಿ ಈ ವಿಚಾರ ಅನೇಕ ರೈತರಿಗೆ ಖುಷಿ ನೀಡಿದೆ. ಈ ಬಗ್ಗೆ ಗೊಂದಲ ಇದ್ದರೆ ರೈತರು ಸಂಪರ್ಕ ಕೇಂದ್ರಕ್ಕೆ, ತಾಲೂಕು ಕೃಷಿ ಅಧಿಕಾರಿ ಅಥವಾ ತಹಶೀಲ್ದಾರ್ ಅವರ ಕಚೇರಿಗೆ ಭೇಟಿ ನೀಡಿ ಸಹ ಮಾಹಿತಿ ಪಡೆಯಬಹುದು. ಇನ್ನೂ ಬರ ಪರಿಹಾರಕ್ಕೆ ಅರ್ಜಿ ಹಾಕಿಲ್ಲದವರು ಕೂಡಲೇ ಅರ್ಜಿ ಹಾಕಿ ಫಲಾನುಭವಿಗಳಾಗಿ.
ಇತರೆ ವಿಷಯಗಳು:
ಚಿನ್ನದ ಬೆಲೆ ಇಳಿಕೆ! ಬಂಗಾರ ಬೇಕಿದ್ರೆ ಇಂದೆ ಖರೀದಿಸಿಡಿ
ಗೃಹಲಕ್ಷ್ಮಿ10ನೇ ಕಂತಿನ ಹಣ ಖಾತೆಗೆ ಜಮೆ ! ಹಣ ಜಮಾ ಆಗದೇ ಇರುವವರು ಈ ರೀತಿ ಮಾಡಿ