rtgh

2500 BMTC ಕಂಡಕ್ಟರ್ ಹುದ್ದೆಗೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ & ಅರ್ಜಿ ಸಲ್ಲಿಸುವ ಡೈರೆಕ್ಟ್‌ ಲಿಂಕ್

BMTC Conductor Recruitment
Share

ಹಲೋ ಸ್ನೇಹಿತರೇ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್ -KEA BMTC 2500 ಕಂಡಕ್ಟರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

BMTC Conductor Recruitment

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಗಳು ಖಾಲಿ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳಿವೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳಿಗು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆಯು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಯ ಹೆಸರು : ನಿರ್ವಾಹಕ (ಕಂಡಕ್ಟರ್ )
ಹುದ್ದೆಗಳ ಒಟ್ಟು ಸಂಖ್ಯೆ : 2500.

ಶೈಕ್ಷಣಿಕ ವಿದ್ಯಾರ್ಹತೆ

12nd PUC ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ 12ನೇ ತರಗತಿ ಪಾಸ್. ಅಥವಾ 3 ವರ್ಷ ಡಿಪ್ಲೊಮ ಪಾಸ್‌.
ಮುಕ್ತ ಶಾಲೆ / ಮುಕ್ತ ವಿವಿಯಿಂದ PUC/ 12ನೇ ತರಗತಿಯನ್ನು ̤/ ಜೆಒಸಿ / ಜೆಎಲ್‌ಸಿ ಕೋರ್ಸ್‌ಗಳು ಮಾನ್ಯವಿಲ್ಲ. ಇವರು ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ.

ಇತರೆ ಅರ್ಹತೆ

ಮಾನ್ಯತೆ ಪಡೆದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ & ಬ್ಯಾಡ್ಜ್‌ ಅನ್ನು ಹೊಂದಿರತಕ್ಕದ್ದು.
ಪುರುಷರ ಎತ್ತರ 160 CM, ಮಹಿಳೆಯರ ಎತ್ತರ 150 CM ಇರಬೇಕಾಗುತ್ತದೆ.

ವಯಸ್ಸಿನ ಅರ್ಹತೆಗಳು

  • ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 10-04-2024 ಕನಿಷ್ಠ 18 ವರ್ಷ ಆಗಿರ್ಲೇಬೇಕು. ಗರಿಷ್ಠ ವಯಸ್ಸು ವರ್ಗಾವಾರು ಕೆಳಗಿನಂತೆ ನೀಡಿರುವಂತೆ ಮೀರಿರಬಾರದು.
  • ಸಾಮಾನ್ಯ ವರ್ಗ – 35 ವರ್ಷ.
  • 2A, 2B, 3A, 3B ಅಭ್ಯರ್ಥಿಗಳಿಗೆ 38 ವರ್ಷ.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ & ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
  • ಮಾಜಿ ಸೈನಿಕ /ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷ.

ಕಂಡಕ್ಟರ್ ಹುದ್ದೆಗಳಿಗೆ ವೇತನ ಶ್ರೇಣಿ : ರೂ.18660-25300.

ತರಬೇತಿ ಅವಧಿ ಭತ್ಯೆ & ವೇತನ ಶ್ರೇಣಿ

ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು1 ವರ್ಷ ಕಾಲ ವೃತ್ತಿ ತರಬೇತಿಯನ್ನು ನಿಯೋಜಿಸಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ ರೂ.9,100 ರೂ. ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ http://kea.kar.nic.in ನಲ್ಲಿ ಮಾರ್ಚ್‌ 10 ರಂದು ತೋರಿಸುವ ಲಿಂಕ್‌ ಅನ್ನು ಆಯ್ಕೆ ಮಾಡಿ, ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.

ಅಪ್ಲಿಕೇಶನ್‌ ಶುಲ್ಕದ ವಿವರ ಸಾಮಾನ್ಯ ಅರ್ಹತೆ & ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕವು ರೂ.750. ಇರುತ್ತದೆ.
ಪರಿಶಿಷ್ಟ ಜಾತಿ/ ಪ್ರವರ್ಗ-1, ಪರಿಶಿಷ್ಟ ಪಂಗಡ, ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೆ 500.ರೂ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅವಧಿ

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ: 10-03-2024
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 10-04-2024
ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 13-04-2024

BMTC ನಿರ್ವಾಹಕರ ನೇಮಕಾತಿ ವಿಧಾನ 

ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು 2 ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಿ, ನಂತರ ಇದರಲ್ಲಿನ ಶೇಕಡ.75 ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಯ ಶೇಕಡ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿಕೊಂಡು ಆಯ್ಕೆ ಮಾಡಲಾಗುವುದು.

ಉದ್ಯೋಗ ವಿವರ

ಹುದ್ದೆಯ ಹೆಸರುBMTC ನಿರ್ವಾಹಕರು
ವಿವರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಪ್ರಕಟಣೆ ದಿನಾಂಕ26-02-2024
ಕೊನೆ ದಿನಾಂಕ10-04-2024
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸರ್ಕಾರಿ ಉದ್ಯೋಗ
ವೇತನ ವಿವರ

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಕರ್ನಾಟಕ ಪರೀಕ್ಷಾ ಪ್ರಾಧಿಕಾರ
ವೆಬ್‌ಸೈಟ್‌ https://mybmtc.karnataka.gov.in/english

ಉದ್ಯೋಗ ಸ್ಥಳ

ಸ್ಥಳಬೆಂಗಳೂರು
ವಿಳಾಸಬೆಂಗಳೂರು
ಪ್ರದೇಶಕರ್ನಾಟಕ
ಅಂಚೆ ಸಂಖ್ಯೆ560001
ದೇಶIND

ಇತರೆ ವಿಷಯಗಳು

ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ಬೆಲೆ?

ಮೋದಿ ‌₹78,000 ಸಬ್ಸಿಡಿ ವಿದ್ಯುತ್.! ಅಪ್ಲೇ ಮಾಡಿ, ಫ್ರೀ ಕರೆಂಟ್‌ ಪಡೆದು KEB ಗೆ ಮಾರಾಟ ಮಾಡಿ


Share

Leave a Reply

Your email address will not be published. Required fields are marked *