ಹಲೋ ಸ್ನೇಹಿತರೇ, ಜೂನ್ ತಿಂಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಆರಂಭ ಆಗಿದೆ. ಶಾಲೆಗೆ & ಕಾಲೇಜುಗಳಿಗೆ ಬಸ್ ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಬಸ್ ಪಾಸ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಿರಿ.
2024-25 ರ ಶೈಕ್ಷಣಿಕ ವರ್ಷದ ಪಾಸ್ ಗೆ ಅರ್ಜಿ ಸಲ್ಲಿಸಲು ಈಗಾಗಲೇ ಶುರುವಾಗಿದ್ದು.
Contents
ಜೂನ್ 1 ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ :-
ಜೂನ್ 1 ರಿಂದ ಆನ್‌ಲೈನ್ ಮೂಲಕ ಬೆಂಗಳೂರಿನಲ್ಲಿ ಓದುತ್ತಿರುವ ಎಲ್ಲಾ ತರಗತಿಯ ವಿದ್ಯಾರ್ಥಿಗಳಗೆ BMTC ವಿದ್ಯಾರ್ಥಿ ಪಾಸ್ ಅರ್ಜಿಯನ್ನು ಸ್ವೀಕರಿಸಲು ಆರಂಭ ಮಾಡಿದೆ. ವಿದ್ಯಾರ್ಥಿ ಬಸ್ ಪಾಸ್ ಪಡೆಯಲು BMTC ಸೂಚನೆಗಳನ್ನು ಅಧಿಸೂಚನೆ ಪಾಲನೆ ಮಾಡಿ ಅರ್ಜಿಗಳನ್ನು ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಶುಲ್ಕದ ವಿವರಗಳು & ಪಾಸ್ ಮಾನ್ಯತೆಯ ವಿವರ:-
- ಪ್ರಾಥಮಿಕ ವಿದ್ಯಾರ್ಥಿಗಳಿಗೆ 150 ರೂ. ಜೂನ್ 2024 ರಿಂದ ಮಾರ್ಚ್ 2025 ಮಾನ್ಯ ಆಗಿರುತ್ತದೆ.
- ಪ್ರೌಢಶಾಲಾ ಬಾಲಕಿಯರ ವಿದ್ಯಾರ್ಥಿಗಳಿಗೆ 550 ರೂ. ಈ ಪಾಸ್ ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆದಿದೆ.
- ಪ್ರೌಢಶಾಲಾ ಬಾಲಕರ ವಿದ್ಯಾರ್ಥಿಗಳಿಗೆ 750 ರೂ. ಈ ಪಾಸ್ ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆಯಿದೆ.
- ಪಿಯುಸಿ ವಿದ್ಯಾರ್ಥಿಗಳಿಗೆ 1050 ರೂ. ಇದು ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ಮಾನ್ಯತೆ ಪಡೆದಿದೆ.
- ಪದವಿ & ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 1300 ರೂ. ಈ ಲಾಸ್ ಜುಲೈ 2024 ರಿಂದ ಜೂನ್ 2025 ರ ವರೆಗೆ ಮಾನ್ಯತೆ ಪಡೆಯಿದೇ.
- ತಾಂತ್ರಿಕ & ವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳಿಗೆ 1830 ರೂ. ಈ ಪಾಸ್ ಆಗಸ್ಟ್ 2024 ರಿಂದ ಜುಲೈ 2025 ಈ ವರೆಗೆ ಮಾನ್ಯತೆ ಪಡೆದಿದೆ.
- ಸಂಜೆ ಕಾಲೇಜ್ ಮತ್ತು PHD ಓದುವ ವಿದ್ಯಾರ್ಥಿಗಳಿಗೆ 1630 ರೂ. ಈ Paas ಜುಲೈ 2024 ರಿಂದ ಜೂನ್ 2025 ರ ವರೆಗೆ ಮಾನ್ಯತೆ ಪಡೆದಿದೆ.
- ಎಲ್ಲಾ ತರಗತಿಗಳ SC ಅಥವಾ ST ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರ 150 ರೂ ಆಗಿರುತ್ತದೆ.
ದಾಖಲೆಗಳು :-
- ಶುಲ್ಕ ನೀಡಿದ ರಶೀದಿ.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಸೈಜ್ ಫೋಟೋ.
- ಜಾತಿ ಪ್ರಮಾಣಪತ್ರ.
- ಆಧಾರ್ ಕಾರ್ಡ್.
- ಕುಟುಂಬದ ಪಡಿತರ ಚೀಟಿ ಸಂಖ್ಯೆ.
- ಮೇಲ್ ಐಡಿ ಮತ್ತು ಫೋನ್ ನಂಬರ್.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:
ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ಆಧಾರ್ & ಕ್ಯಾಪ್ತ್ಟ ಕೋಡ್ ನಮೂದಿಸಿ. ನಂತರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ. ಮೇಲ್ ಐಡಿ & ಮೊಬೈಲ್ ಸಂಖ್ಯೆ ಹಾಕಿ ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ನಿಮ್ಮ ಖಾತೆ ರಚಿಸಿ. ನಂತರ ನೀವು ಆನ್ಲೈನ್ ನಲ್ಲಿ ಬಸ್ ಪಾಸ್ ಅರ್ಜಿಯನ್ನು ಭರ್ತಿ ಮಾಡಿ ನಂತರ ನೀವು ದಾಖಲೆಗಳನ್ನು ಸಲ್ಲಿಸಬೇಕು. ನಂತರ ನಿಮ್ಮ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು
ಇಂದು ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’! ಏರಿಕೆಯಾಗಲಿದೆಯಾ ಮೂಲ ವೇತನ?
ಇಳಿಕೆಯಾದ ಈರುಳ್ಳಿ ಬೆಲೆ! ಗ್ರಾಹಕರ ಮೊಗದಲ್ಲಿ ಸಂತಸ