rtgh
Headlines

ಬಾಕಿ ಉಳಿದ ಬೆಳೆ ಪರಿಹಾರ ರೈತರ ಖಾತೆಗೆ ಜಮಾ! ಈ ಐಡಿ ಇದ್ದವರಿಗೆ ಮಾತ್ರ

Bele parihara hana
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, 2023 ನೇ ಸಾಲಿನ ಮುಂಗಾರು ಹಂಗಾಮಿನ ಬರದ ಪರಿಸ್ಥಿತಿಯಿಂದ ಉಂಟಾದಂತಹ ಬೆಳೆಹಾನಿಗೆ SDRF ಅಥವಾ NDRF ಮಾರ್ಗಸೂಚಿಯಂತೆ ಅರ್ಹತೆಗೆ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2 ಸಾವಿರ ರೂ.ಗಳವರೆಗೆ ಪಾವತಿ ಮಾಡಿರುವ ಬೆಳೆಹಾನಿ ಪರಿಹಾರದ ಹಣವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನು ಉಳಿದ ಬಾಕಿ ಬೆಳೆಹಾನಿಯ ಪರಿಹಾರದ ಮೊತ್ತವನ್ನು ಪಾವತಿ ಮಾಡಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರವು ಆದೇಶ ಹೊರಡಿಸಿದೆ.

Bele parihara hana

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 10 ಹಂತಗಳಲ್ಲಿ ಒಟ್ಟು 1.06,707 ರೈತರಿಗೆ 108.12 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿಯು ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಮಾಹಿತಿ ತಿಳಿಸಿದ್ದಾರೆ.

ಬೆಳೆ ಸಮೀಕ್ಷೆಯ ದತ್ತಾಂಶದ ಮಾಹಿತಿ ಆಧಾರದ ಮೇಲೆ(FRUITS ID) ಪ್ರೂಟ್ಸ್ ಐಡಿಯನ್ನು ಹೊಂದಿರುವ ರೈತರಿಗೆ ಪರಿಹಾರದ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರವನ್ನು ವಿತರಣೆಯನ್ನು ಮಾಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಧನವನ್ನು ಜಮೆಯನ್ನು ಮಾಡಲಾಗಿದೆ. ಬಾಕಿ ಉಳಿದಿರುವ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರವನ್ನು ಪಾವತಿಸುವಂತಹ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ತುರ್ತಾಗಿ ಕ್ರಮವನ್ನು ಕೈಗೊಳ್ಳಲಾಗುವು ಎಂದು ತಿಳಿಸಿದ್ದಾರೆ.

ಇದನ್ನೂ ಸಹ ಓದಿ: ರಾಜ್ಯ ಸರ್ಕಾರದ 7 ಬೆಸ್ಟ್‌ ಯೋಜನೆಗಳು.! ಅಪ್ಲೇ ಮಾಡಿದ್ರೆ ಪ್ರತಿ ಯೋಜನೆಯಡಿ 1 ಲಕ್ಷ ನಗದು

ಈಗಾಗಲೇ ಅನುಮೊದನೆಯನ್ನು ನೀಡಿರುವಂತಹ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ಹಾಗೂ ರೈತರ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.

ಬೆಳೆ ಹಾನಿಯ ಪರಿಹಾರ ಪಡೆದುಕೊಳ್ಳಲು(FRUITS ID) ಪ್ರೂಟ್ಸ್ ಐಡಿಯು ಕಡ್ಡಾಯವಾಗಿರುವುದರಿಂದ ಇದುವರೆಗೂ ಪ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳದೇ ಇರುವ ರೈತರು ನಿಗದಿತವಾದ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರವನ್ನು ಹಾಗೂ ಪಹಣಿಯ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ(FRUITS ID) ಪ್ರೂಟ್ಸ್ ಐಡಿಯನ್ನು ಸೃಜಿಸಿಕೊಳ್ಳಬಹುದು. ಪ್ರೂಟ್ಸ್ ಐಡಿ ಇಲ್ಲದ ರೈತರು ಬೆಳೆ ಪರಿಹಾರದ ಹಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

APY ಗೆ ಟಫ್‌ ರೂಲ್ಸ್‌ ಅಪ್ಲೇ! ಪ್ರತಿ ತಿಂಗಳು ಹಣ ಪಡೆಯಲು ಎದುರಾಯ್ತು ಸಂಕಷ್ಟ

ಚಿನ್ನದ ಬೆಲೆ ಇಳಿಕೆ! ಬಂಗಾರ ಬೇಕಿದ್ರೆ ಇಂದೆ ಖರೀದಿಸಿಡಿ


Share

Leave a Reply

Your email address will not be published. Required fields are marked *