ಹಲೋ ಸ್ನೇಹಿತರೇ, ಬ್ಯಾಂಕ್ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಬಹುದಿನಗಳ ಬೇಡಿಕೆಗಳು ಈಡೇರಲಿವೆ. ಇನ್ನು ಮುಂದೆ ಬ್ಯಾಂಕ್ ಉದ್ಯೋಗಿಗಳ ವೇತನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ, ವಾರಕ್ಕೆ 5 ದಿನಗಳ ಕೆಲಸದ ದಿನವೂ ಜಾರಿಗೆ ಬರಲಿದೆ ಹೇಗೆ ಮತ್ತು ಎಂದಿನಿಂದ ಎಂಬ ಎಲ್ಲಾ ವಿಷಯದ ಕುರಿತು ನಮ್ಮ ಲೇಖನದಲ್ಲಿ ತಿಳಿಯಿರಿ.
ಕೇಂದ್ರ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿದರೆ, ಬ್ಯಾಂಕ್ ನೌಕರರ ಬಹುದಿನಗಳ ಬೇಡಿಕೆಯಾದ ವಾರಕ್ಕೆ 5 ದಿನಗಳ ಕೆಲಸ ಜೂನ್‌ನಿಂದ ಆರಂಭವಾಗಬಹುದು. ಇದಲ್ಲದೆ, ಸಂಬಳವೂ ಏರಿಕೆಯಾಗುವ ಸಾಧ್ಯತೆಯಿದೆ.
ಬ್ಯಾಂಕ್ ನೌಕರರು ಸಂಬಳ ಹೆಚ್ಚಳಕ್ಕೆ & ವಾರದ 5 ದಿನಗಳ ಕೆಲಸಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ. ಬ್ಯಾಂಕ್ ಒಕ್ಕೂಟಗಳು ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದೆ. ಪ್ರಸ್ತುತ, ದೇಶದ ಎಲ್ಲಾ ಬ್ಯಾಂಕ್‌ಗಳಿಗೆ 4 ಭಾನುವಾರ & 2 & 4 ಶನಿವಾರದಂದು ರಜೆ ಇದೆ. 2015 ರ ಒಪ್ಪಂದದ ಪ್ರಕಾರವಾಗಿ, ಪ್ರತಿ ಭಾನುವಾರ & ಪ್ರತಿ ತಿಂಗಳ 2ನೇ & 4ನೇ ಶನಿವಾರಗಳು ಬ್ಯಾಂಕ್ ರಜಾ ದಿನಗಳಾಗಿವೆ.
ಕೇಂದ್ರ ಹಣಕಾಸು ಸಚಿವರು ವಾರಕ್ಕೆ 5 ದಿನ ಕೆಲಸದ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಮಾತ್ರವಲ್ಲದೆ ಅನುಕೂಲಕರ ನಿರ್ಧಾರವನ್ನು ತೆಗೆದುಕೊಂಡು & ಭಾರತೀಯ ಬ್ಯಾಂಕ್‌ಗಳ ಸಂಘಕ್ಕೆ ಸೂಚನೆಯನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. RBI & LIC ಯಲ್ಲಿ ಈಗಾಗಲೇ ವಾರಕ್ಕೆ 5 ಕೆಲಸದ ದಿನಗಳನ್ನು ಅಳವಡಿಕೆ ಮಾಡಲಾಗಿದೆ. 2015ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗ ಉಳಿದ 2 ಶನಿವಾರದ ರಜೆಯನ್ನೂ ಶೀಘ್ರವೇ ಪರಿಗಣಿಸಲಾಗುತ್ತದೆ ಎಂಬ ಭರವಸೆ ನೀಡಲಾಗಿದೆ. ಇದೀಗ ವಾರದ 5 ದಿನಗಳ ಕೆಲಸದ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಕೂಲಕರವಾದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳ ವೇತನದಲ್ಲಿ ಶೇಕಡಾ 17 ರಷ್ಟು ಹೆಚ್ಚಿಸಲು ಭಾರತೀಯ ಬ್ಯಾಂಕ್‌ಗಳ ಸಂಘವು ಕಳೆದ ವರ್ಷ ಬ್ಯಾಂಕ್ ಉದ್ಯೋಗಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. 17 ರಷ್ಟು ವೇತನವನ್ನು ಏರಿಸುವ ಮೂಲಕ ಹೆಚ್ಚುವರಿ 12,449 ಕೋಟಿಯನ್ನು ಖರ್ಚು ಮಾಡಲಾಗುವುದು. ವೇತನ ಏರಿಕೆ ನಿರ್ಧಾರ ಕೈಗೊಂಡರೆ 3.8 ಲಕ್ಷ ಅಧಿಕಾರಿಗಳಿಗೆ ಲಾಭವಾಗಲಿದೆ. 9 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ.
ಇತರೆ ವಿಷಯಗಳು
ಈ ಕಾರ್ಡ್ ಇದ್ದವರಿಗೆ ಉಚಿತ ಸೈಕಲ್!! MNREGA ಯೋಜನೆಯಡಿ ಈ ಲಾಭ ಪಡೆಯಿರಿ
ರೈಲ್ವೆ ರಕ್ಷಣಾ ಸಿಬ್ಬಂದಿ ನೇಮಕ: 4660 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೇ ಮಾಡಲು SSLC ಪಾಸಾಗಿದ್ರೆ ಸಾಕು