ಹಲೋ ಸ್ನೇಹಿತರೇ, ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಉಚಿತವಾಗಿ aadhar card update ಮಾಡಿಕೊಳ್ಳಬಹುದಾಗಿದೆ. ಹೇಗೆ ಮೊಬೈಲ್‌ನಲ್ಲಿ ಅಪ್ಡೇಟ್ ಮಾಡುವುದು ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
ಆಧಾರ್ ಕಾರ್ಡ ಅನ್ನು ಮಾಡಿಕೊಂಡು 10 ವರ್ಷ ಪೂರೈಸಿದರು ಇನ್ನು ಮುಂದೆ ಸರ್ಕಾರ ಯೋಜನೆಗಳ ಲಾಭ ಪಡೆದುಕೊಳ್ಳಲು ನಿಮ್ಮ ಆಧಾರ್ ಕಾರ್ಡ್ ನೈಜನೆಯನ್ನು ತಿಳಿಯಲು ಆಧಾರ್ update ಮಾಡಿಕೊಳ್ಳುವುದನ್ನು UIDAI- ಆಧಾರ್ ಕಾರ್ಡ್ ಪ್ರಾಧಿಕಾರದಿಂದ ಕಡ್ಡಾಯಗೊಳಿಸಿದೆ ಆಧಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿ 14 ಮಾರ್ಚ್ 2024ರ ಒಳಗಾಗಿ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್‌ನ್ನು Update ಮಾಡಿಕೊಳ್ಳಬಹುದಾಗಿದೆ.
Contents
ಆಧಾರ್ ಕಾರ್ಡ್ ಏಕೆ ನವೀಕರಣ ಮಾಡಿಕೊಳ್ಳಬೇಕು
ಆಧಾರ್ ಪಡೆದು 10 ವರ್ಷ ಆಗಿರುವವರು ನೀವು ನೋದಣಿ ಮಾಡಿಕೊಂಡಿರುವ ಸಮಯದಲ್ಲಿ ನಮೂದಿಸಿರುವ ವಿಳಾಸ & ತಮ್ಮ ಗುರುತಿನ ವಿವರವನ್ನು ಕಡ್ಡಾಯವಾಗಿ ನವೀಕರಿಸಲು ಯುಐಡಿಎಐ ಸೂಚನೆ ನೀಡಿದೆ, ಈ ಕೆಲಸ ಮಾಡದಿದ್ದಲ್ಲಿ ಮುಂದಿನ ದಿನದಲ್ಲಿ ಸರ್ಕಾರಿ ಯೋಜನೆಯಡಿ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಆದರಿಂದ ಇದನ್ನು ನಿರ್ಲಕ್ಷ ಮಾಡದಿರಲು ಸೂಚನೆ ಮಾಡಲಾಗಿದೆ.
11 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಹೊಂದಿದವರು ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್‌ನ್ನು ನವೀಕರಿಸದೇ ಇದ್ದವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಮತ್ತು ವಿಳಾಸ ದಾಖಲೆಯೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಆಧಾರ್ ಪ್ರಾಧಿಕಾರ UIDAI ರವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣದ ತಂತ್ರಾಂಶದಲ್ಲಿ ನವೀಕರಣ ಮಾಡಲು ಅವಕಾಶ ನೀಡುತ್ತಿದ್ದಾರೆ.
ಉಚಿತ ನವೀಕರಣಕ್ಕೆ ಕೊನೆಯ ದಿನಾಂಕ:
ಯುಐಡಿಎಐ(UIDAI)- ಆಧಾರ್ ಕಾರ್ಡ ಪ್ರಾಧಿಕಾರ ಅಧಿಕೃತ ವೆಬ್ಸೈಟ್ ನಲ್ಲಿ ನಮೂದಿಸಿರುವ ಮಾಹಿತಿಯನ್ವಯ ಉಚಿತವಾಗಿ ಸಾರ್ವಜನಿಕರು ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಲು 14 ಮಾರ್ಚ 2024 ಕೊನೆಯ ದಿನವಾಗಿದೆ.
ಆಧಾರ್ ಅಪ್ಡೇಟ್ ಮಾಡಲು ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?
1) ಪಡಿತರ ಚೀಟಿಗಳು / ಮತದಾರರ ಗುರುತಿನ ಚೀಟಿ.
2) ವಿಳಾಸದ ಪುರಾವೆಗಳು & ಭಾರತೀಯ ಪಾಸ್ಪೋರ್ಟ್ಗಳು ಗುರುತಿನ & ವಿಳಾಸ ಎರಡಕ್ಕೂ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ.
3) ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಕೆಂಡರಿ / ಸೀನಿಯರ್ ಸೆಕೆಂಡರಿ ಶಾಲಾ ಅಂಕಪಟ್ಟಿ ಶಾಲಾ ಬಿಡುವ ಪ್ರಮಾಣಪತ್ರ, – ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ.
ವಿದ್ಯುತ್, ನೀರು, ಗ್ಯಾಸ್ ಬಿಲ್ (ಕಳೆದ 3 ತಿಂಗಳು), ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್ಬುಕ್/ ಬಾಡಿಗೆ, ಗುತ್ತಿಗೆ, ರಜೆ & ಪರವಾನಗಿ ಒಪ್ಪಂದವು ವಿಳಾಸದ ಪುರಾವೆಯಾಗಿ ಮಾತ್ರ ಕಾರ್ಯವನ್ನು ನಿರ್ವಹಿಸುತ್ತದೆ.
ಈ ಮೇಲಿರುವುದರಲ್ಲಿ 2 ದಾಖಲೆಗಳನ್ನು ಮಾತ್ರ ಅನ್ಲೈನ್ ಮೂಲಕ ಅಪ್ಲೋಡ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ:
Step-1: Aadhar update link ಲಿಂಕ್ ಮೇಲೆ ಕ್ಲಿಕ್ ಮಾಡಿ UIDAI ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಂತರ ಅರ್ಜಿದಾರರ Aadhar card ನಂಬರ್ & ಕ್ಯಾಪ್ಚ ಕೋಡ್ ಅನ್ನು ನಮೂದಿಸಿ “Login With OTP” ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಇದಾದ ಬಳಿಕ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ಹಾಕಿ “Login” button ಮೇಲೆ ಕ್ಲಿಕ್ ಮಾಡಿ.
Step-2: ನಂತರ 2 ಬಾರಿ ಬರುವ “Next” button ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸದ ವಿವರ ತೋರಿಸುತ್ತದೆ ಈ ವಿವರವನ್ನು ಒಮ್ಮೆ ಸರಿಯಾಗಿದಿಯಾ? ಎಂದು ಚೆಕ್ ಮಾಡಿಕೊಳ್ಳಿ “I verify that the above details are correct” ಎಂದು ತೋರಿಸುತ್ತಿರುವ button ಮೇಲೆ ಕ್ಲಿಕ್ ಮಾಡಿ ಮತ್ತೆ “Next” ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಲಿ.
Step-3:ನಂತರ ಈ ಪೇಜ್ ನಲ್ಲಿ ನಿಮ್ಮ ಹೆಸರು & ವಿಳಾಸ ದೃಡೀಕರಣಕ್ಕೆ ಪಾನ್ ಕಾರ್ಡ & ಗುರುತಿನ ಚೀಟಿಯ PDF ಪೈಲ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Next” button ಮೇಲೆ ಕ್ಲಿಕ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ನವೀಕರಣವಾಗುತ್ತದೆ.
ಇತರೆ ವಿಷಯಗಳು
SSC 2049 ಸೆಲೆಕ್ಷನ್ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ.! 40,000 ವೇತನ ಈ ಕೂಡಲೇ ಅಪ್ಲೇ ಮಾಡಿ
ಕೃಷಿ ಇಲಾಖೆಯಿಂದ ಶೇಕಡಾ 90 ರಷ್ಟು ಸಬ್ಸಿಡಿ.! ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ