ಹಲೋ ಸ್ನೇಹಿತರೇ, ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯದಲ್ಲಿ ಡ್ರೈವರ್ ಹಾಗೂ ಗ್ರೂಪ್ ಡಿ ಹುದ್ದೆಯ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದ ವಾಹನ ಚಾಲಕರು & ಡಿ ಗುಂಪು ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದ್ದು. ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಹುದ್ದೆಗಳಾಗಿವೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Contents
ಹುದ್ದೆಗಳ ವಿವರ
- ವಾಹನ ಚಾಲಕರ ಹುದ್ದೆ : 03
- ಗ್ರೂಪ್ D ಹುದ್ದೆಗಳು :(ದಲಾಯತ್, ಕಾವಲುಗಾರರು, ಸ್ವೀಪರ್ ಕಮ್ ಸ್ಕ್ಯಾವೆಂಜರ್, ಸೆಕ್ಯೂರಿಟಿ ಗಾರ್ಡ್) – 29
ವೇತನ ಶ್ರೇಣಿ ವಿವರ
- ವಾಹನ ಚಾಲಕರ ವೇತನ : 21,400-42,000.
- ಗ್ರೂಪ್ D ಹುದ್ದೆಗಳು :(ದಲಾಯತ್, ಕಾವಲುಗಾರರು, ಸ್ವೀಪರ್ ಕಮ್ ಸ್ಕ್ಯಾವೆಂಜರ್, ಸೆಕ್ಯೂರಿಟಿ ಗಾರ್ಡ್) : Rs.17,000-28,950.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2024
ಅರ್ಜಿ ಸಲ್ಲಿಸಬೇಕಾದ ವಿಳಾಸ
ಅರ್ಜಿಯನ್ನು ಸಚಿವಾಲಯದ ವೆಬ್ಸೈಟ್ ನಲ್ಲಿ ನೀಡಲಾಗಿದ್ದು ನಮೂನೆ-1 ರ ದ್ವಿಪ್ರತಿಯಲ್ಲಿ ಅಗತ್ಯವುಳ್ಳ ದಾಖಲೆಯನ್ನು ಲಗತ್ತಿಸಿ, ಕೊನೆ ದಿನಾಂಕ 05-04-2024 ರಂದು ಸಂಜೆ 05-00 ಗಂಟೆಯ ಒಳಗಾಗಿ ಅಂಚೆಯ ಮೂಲಕ ವಿಳಾಸ – ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ – 5079, 1ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001 ರ ವಿಳಾಸಕ್ಕೆ / ಖುದ್ದಾಗಿ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 216 ಪತ್ರ ಸ್ವೀಕಾರ & ರವಾನೆ ಶಾಖೆಗೆ ತಲುಪಿಸಲಾಗುವುದು.
ಅಪ್ಲಿಕೇಶನ್ ಶುಲ್ಕ ವಿವರ
- ಸಾಮಾನ್ಯ ಅಭ್ಯರ್ಥಿಗಳಿಗೆ ₹600
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹300.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50.
- SE / ST / ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗುವುದು.
ಅರ್ಹತೆಗಳು
ವಾಹನ ಚಾಲಕರು ಹುದ್ದೆಗೆ – SSLC / ತತ್ಸಮಾನ ಪರೀಕ್ಷೆ ಪಾಸ್. ಜತೆಗೆ ಮೋಟಾರು ಕಾರು, ಭಾರಿ ವಾಹನಗಳ ಚಾಲನೆಯ ಅಧಿಕೃತ ಚಾಲನಾ ಪರವಾನಗಿ ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಮೋಟಾರು ಕಾರುಗಳ ಚಾಲನೆಯಲ್ಲಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ಪ್ರಾಯೋಗಿಕ ಅನುಭವ ಹೊಂದಿರಬೇಕಾಗುತ್ತದೆ.
ಗ್ರೂಪ್ ಡಿ ಹುದ್ದೆಗಳಿಗೆ – SSLC / ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಕರ್ನಾಟಕ ವಿಧಾನ ಪರಿಷತ್ತಿನ ವೆಬ್ಸೈಟ್ ವಿಳಾಸ – https://www.kla.kar.nic.in/council/career.htm
ವಯಸ್ಸು: ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷಗಳು ಮೀರಿರಬಾರದು, ಇತರೆ ಹಿಂದುಳಿದ ವರ್ಗದವರಿಗೆ ಗರಿಷ್ಠ 38 ವರ್ಷ ಮೀರಬಾರದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಬಾರದು.
ಇತರೆ ವಿಷಯಗಳು
ಯುಪಿಎಸ್ಸಿ IAS, IPS, IFS, ಇತರೆ ಹುದ್ದೆಗಳ ಅರ್ಜಿಗೆ ಇಂದೇ ಕೊನೆ ದಿನ.! ಆಸಕ್ತರು ಬೇಗ ಅರ್ಜಿ ಹಾಕಿ
ಗೃಹಲಕ್ಷ್ಮಿಯರಿಗೆ ಬಂತು ನ್ಯೂ ರೂಲ್ಸ್.!! ಯಾವುವು ಗೊತ್ತಾ ಆ ನಾಲ್ಕು ನಿಯಮಗಳು?