rtgh
Headlines

ರೈತರಿಗೆ ಸಿಹಿ ಸುದ್ದಿ: 23 ಲಕ್ಷ ಅನ್ನದಾತರ ಬಡ್ಡಿ ಮನ್ನಾ!

Waiver of Farmers Interest
Share

ಬೆಂಗಳೂರು: ರಾಜ್ಯದಲ್ಲಿ ಭೀಕರವಾದ ಬರಗಾಲದ ನಡುವೆಯು ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಚಟುವಟಿಕೆಗಳ ನಿರ್ವಹಣೆಗೆ ರೈತರಿಗೆ ಸಾಲವು ಅನಿವಾರ್ಯವಾಗಿದ್ದು, ಸರ್ಕಾರವು ಈಗಾಗಲೇ ಶೂನ್ಯ ಬಡ್ಡಿಯ ದರದಲ್ಲಿ ಬ್ಯಾಂಕುಗಳ ಮೂಲಕ ಕೃಷಿಯ ಚಟುವಟಿಕೆಗಳಿಗೆ ಸಾಲವನ್ನು ನೀಡುತ್ತಿದೆ.

Waiver of Farmers Interest

2023 -24ನೇ ಸಾಲಿನಲ್ಲಿ 23 ಲಕ್ಷ ರೈತರು 19,000 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 989 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ.

ಡಿಸಿಸಿ ಬ್ಯಾಂಕ್, ಲ್ಯಾಂಪ್ಸ್ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ, ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಸಾಲದ ಸೌಲಭ್ಯವನ್ನು ನೀಡುತ್ತಿದ್ದು, ಕೃಷಿಯ ಸಾಲದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.

ಇದನ್ನೂ ಸಹ ಓದಿ; ಅನ್ನದಾತರಿಗೆ ಕೇಂದ್ರದಿಂದ ಬಂಪರ್ ಸುದ್ದಿ.! ಈ ಯೋಜನೆಯಿಂದ ಸಿಗಲಿದೆ 90% ವರೆಗೂ ಸಬ್ಸಿಡಿ

ರೈತರು ದೀರ್ಘಾವಧಿಯ ಸಾಲಕ್ಕಿಂತಲು ಮಧ್ಯಮಾವಧಿ, ಅಲ್ಪಾವಧಿ ಸಾಲದ ಮೊರೆಯನ್ನು ಹೋಗುತ್ತಿದ್ದಾರೆ. ದೀರ್ಘಾವಧಿಯ ಮತ್ತು ಮಧ್ಯಮಾವಧಿಯ ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯು ಮನ್ನಾವಾಗಲಿದೆ, ಇದನ್ನು ಮಾಡುವ ಮೂಲಕ ಸರ್ಕಾರವು ನೆರವು ನೀಡುತ್ತಿವೆ.

ರೈತರು ಸಾಲವನ್ನು ಪಡೆಯುವ ಪ್ರಮಾಣವು ಹೆಚ್ಚಾಗಿದೆ. ಬೆಳೆಯ ಸಾಲದ ಜೊತೆಗೆ ರೈತರಿಗೆ ವಿವಿಧ ಉದ್ದೇಶಗಳಿಗಾಗಿ ಸಾಲವನ್ನು ಪಡೆಯಲು ಅವಕಾಶವಿದ್ದು, ಕೃಷಿ ಜಮೀನು ಇಲ್ಲವೇ ಬೆಳೆಯನ್ನು ಆಧಾರವಾಗಿಟ್ಟುಕೊಂಡು ಸಾಲವನ್ನು ನೀಡಲಾಗುತ್ತಿದೆ. ಅಲ್ಪಾವಧಿ ಸಾಲವು ಒಂದು ವರ್ಷ, ಮಧ್ಯಮಾವಧಿಯ ಸಾಲವು ಐದು ವರ್ಷ, ದೀರ್ಘಾವಧಿಯ ಸಾಲವನ್ನು 10 ವರ್ಷಗಳವರೆಗೆ ಅವಧಿವರೆಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ನಿಮ್ಮ ಮನೆ ಮೇಲೆ ಸೋಲಾರ್‌ ಸ್ಥಾಪಿಸಲು ಸಾಲ!! ಈ ಬ್ಯಾಂಕ್‌ ಗಳಲ್ಲಿ ಮಾತ್ರ ಲಭ್ಯ

968 ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅರ್ಜಿ ಹಾಕಿದ್ರೆ ತಿಂಗಳಿ ರೂ.1,12,400 ವೇತನ


Share

Leave a Reply

Your email address will not be published. Required fields are marked *