rtgh
Headlines

ಕೇಂದ್ರ ಸರ್ಕಾರದ ಯೋಜನೆ; 50% ಸಬ್ಸಿಡಿ ದರದಲ್ಲಿ ಪ್ರತಿ ರೈತರಿಗೆ ಟ್ರ್ಯಾಕ್ಟರ್

tractor 50% subsidy
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ. ಈ ಯೋಜನೆಯ ಬಗ್ಗೆ ಸರ್ಕಾರ ಏನು ಹೇಳಿದೆ ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.

tractor 50% subsidy

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚಾಗಿದೆ. ಸುಳ್ಳು ಸುದ್ದಿಗೆ ಜನರು ಬೇಗ ಮರುಳಾಗುತ್ತಾರೆ. ಸ್ವಲ್ಪ ದಿನಗಳಿಂದ ಕೇಂದ್ರ ಸರ್ಕಾರವು ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ ಎಂದು ಒಂದು ವೆಬ್ಸೈಟ್ ನಲ್ಲಿ ಸುದ್ದಿ ಬಿತ್ತರವಾಗಿದ್ದು. ಇದನ್ನು ನಂಬಿದ ಜನರು ಇದನ್ನು ರೈತರಿಗೆ ತಿಳಿಸಿದ್ದಾರೆ ಆದರೆ ಈಗ ಇದರ ಸತ್ಯಾಂಶ ಬಯಲಾಗಿ ಹೋಗಿದೆ.

ವೆಬ್ಸೈಟ್ ನಲ್ಲಿ ಹಬ್ಬಿಸಲಾಗಿರುವ ಸುಳ್ಳು ಸುದ್ದಿ ಏನು?

ಕೇಂದ್ರ ಸರ್ಕಾರವು ಈಗಾಗಲೇ ಪಿಎಂ ಕಿಸಾನ್ ಯೋಜನೆ ರೈತರಿಗೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಅದರಂತೆಯೇ ಪಿಎಂ ಟ್ರ್ಯಾಕ್ಟರ್ ಯೋಜನೆಯು ಕೇಂದ್ರ ಸರ್ಕಾರವು ಪ್ರಾರಂಭ ಮಾಡಿದೆ. ಇದರಲ್ಲಿ ಎಲ್ಲಾ ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ ಎಂದು ಸುದ್ದಿ ಬಂದಿದ್ದು. ಇದು ಬಡ ರೈತರಿಗೆ ಉತ್ತಮ ಯೋಜನೆಯಾಗಿದೆ. ನೇರವಾಗಿ ಸಬ್ಸಿಡಿ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದೆಲ್ಲ ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರವು ಸ್ಪಷ್ಟನೆಯನ್ನು ನೀಡಿದೆ.

ಕೇಂದ್ರ ಸರ್ಕಾರ ನೀಡಿದ ಸ್ಪಷ್ಟ ಉತ್ತರವೇನು?

ಇದು ಪೂರ್ತಿ ಸುಳ್ಳು ಸುದ್ದಿಯಾಗಿದೆ. ಜನರನ್ನು ದಾರಿ ತಪ್ಪಿಸುವ ದೃಷ್ಠಿಯಿಂದ ಈ ಸುದ್ದಿಯನ್ನು ಹರಡಿಸಲಾಗಿದೆ. ಪಿಎಂ ಟ್ರ್ಯಾಕ್ಟರ್ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳು ಕೂಡ ಸುಳ್ಳು. ಕೇಂದ್ರ ಸರ್ಕಾರದಿಂದ ಈ ರೀತಿಯ ಯೋಜನೆಗಳು ಜಾರಿಗೆ ಬಂದೇ ಇಲ್ಲ. ನಿಮಗೆ ಈ ರೀತಿಯ ಮೆಸೇಜ್ / ಯಾವುದೇ ವೆಬ್ಸೈಟ್ ಲಿಂಕ್ ಬಂದರೆ ದಯವಿಟ್ಟು ಅದನ್ನು ಓಪನ್ ಮಾಡದಿರಿ. ಅದು ಸಂಪೂರ್ಣ ನಕಲಿ ಆಗಿರುತ್ತದೆ. ಸ್ಕ್ಯಾಮ್ ಮಾಡುವ ಜನರಿಂದ ನಡೆಸುವ ಕೃತ್ಯ ಇದಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯ & ಕೇಂದ್ರ ಸರ್ಕಾರವು ರೈತರಿಗೆ ಕೆಲವು ಮಶಿನರಿ ವಸ್ತುಗಳ ಮೇಲೆ ಸಬ್ಸಿಡಿ ನೀಡುವುದು ನಿಜ ಆದರೆ ಇದು ಸಂಪೂರ್ಣ ಸತ್ಯಕ್ಕೆ ವಿರುದ್ದವಾದ ಸುದ್ದಿ.

ಯಾವುದೇ ವೆಬ್ಸೈಟ್ ನಲ್ಲಿ ಸುದ್ದಿ ಬಂದರೆ ಅನುಸರಿಸುವ ಮುನ್ನೆಚ್ಚರಿಕೆ ಕ್ರಮಗಳು:-

  • ಸರ್ಕಾರದ ವೆಬ್ಸೈಟ್ ಹೊರತು ಪಡಿಸಿ. ಯಾವುದೇ ವೆಬ್ಸೈಟ್ ನಲ್ಲಿ ಸುದ್ದಿಗಳು ಬಂದರೆ ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್‌ಗಳಲ್ಲಿ ಮಾಹಿತಿಯನ್ನು ಪರಿಶೀಲನೆ ಮಾಡಬೇಕು. ಸರ್ಕಾರದ ವೆಬ್ಸೈಟ್ ನಲ್ಲಿ ಯಾವುದೇ ಮಾಹಿತಿ ಇಲ್ಲದೆ ಇದ್ದರೆ ಸುಳ್ಳು ಸುದ್ದಿ ಎಂದಾಗುತ್ತದೆ.
  • ವೆಬ್ಸೈಟ್ ಬಗ್ಗೆ ಪೂರ್ಣ ಮಾಹಿತಿಯನ್ನು ಗೂಗಲ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ವೆಬ್ಸೈಟ್ ಅಧಿಕೃತವಾಗಿ ಇದೆಯೇ / ಇಲ್ಲವೇ ಎಂಬ ಮಾಹಿತಿ ಪಡೆದ ನಂತರವೇ ಲಿಂಕ್ ಓಪನ್ ಮಾಡಬೇಕಾಗುತ್ತದೆ.
  • ಸರ್ಕಾರದ / ಯಾವುದೇ ಸಾಮಾಜಿಕ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಬಂದರೆ ಸಂಬಂದಿಸಿದ ಇಲಾಖೆಗೆ ಹೋಗಿ ಮಾಹಿತಿಯನ್ನು ತಿಳಿಕೊಳ್ಳುವುದು ಅಗತ್ಯವಾಗಿದೆ.
  • ಯಾವುದೇ ಅನುಮಾನ ಕಂಡುಬಂದಲ್ಲಿ ಮೊದಲು ಪೊಲೀಸ್ ಇಲಾಖೆ / ಸೈಬರ್ ಕ್ರೈಮ್ ವಿಭಾಗಕ್ಕೆ ಕಂಪ್ಲೇಂಟ್ ಮಾಡಿ.
  • ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳು Aadhar number, ಫೋಟೋ, ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಯಾವುದೇ ಹೊಸ ವೆಬ್ಸೈಟ್ ಗೆ ನೀಡಲೇಬಾರದು.
  • ಯಾವುದೇ ಲಿಂಕ್ ಅಥವಾ ಅಪ್ಲಿಕೇಶನ್ ಓಪನ್ ಮಾಡಿದಾಗ ನಿಮ್ಮ ಮೊಬೈಲ್ ಮಾಹಿತಿಯ ಬಳಕೆಗೆ permission ಕೇಳಲಿದೆ. ನಿಖರವಾದ ವೆಬ್ಸೈಟ್/ ಅಪ್ಲಿಕೇಶನ್ ಗಳಿಗೆ ಮಾತ್ರ permission ನೀಡಬೇಕು. ನಿಮ್ಮ ಮೊಬೈಲ್ ಮಾಹಿತಿಗಳನ್ನು ಕದಿಯುವ ಜಾಲತಾಣಗಳ ಸಂಖ್ಯೆ ಇಂದು ಸಾಕಷ್ಟು ಹೆಚ್ಚಾಗಿದೆ.

ಇತರೆ ವಿಷಯಗಳು

ಉಚಿತ ಕಣ್ಣಿನ ತಪಾಸಣೆ ಜೊತೆ ಕನ್ನಡಕ ಫ್ರೀ ರಾಜ್ಯಾದ್ಯಂತ ಆಶಾಕಿರಣ ಯೋಜನೆ ಜಾರಿ

ಕೋಳಿ ಫಾರ್ಮ್ ತೆರೆಯಲು ಸರ್ಕಾರ ಕೊಡುತ್ತೆ ₹40 ಲಕ್ಷ ಸಬ್ಸಿಡಿ

1.ಟ್ರ್ಯಾಕ್ಟರ್ ಎಷ್ಟು ಸಬ್ಸಿಡಿ ನೀಡಲಾಗುವುದು?

50% ಸಬ್ಸಿಡಿ ನೀಡಲಾಗುವುದು.

2.ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ಯಾವ ಸರ್ಕಾರದ ಯೋಜನೆ?

ಕೇಂದ್ರ ಸರ್ಕಾರದ ಯೋಜನೆ.


Share

Leave a Reply

Your email address will not be published. Required fields are marked *