rtgh

Toll Fee: ವಾಹನ ಸವಾರರಿಗೆ ಗುಡ್‌ ನ್ಯೂಸ್‌!

Toll Fee
Share

ಹಲೋ ಸ್ನೇಹಿತರೆ, ದೇಶದಾದ್ಯಂತ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಕಳಪೆಯಾಗಿರುವ ಪ್ರದೇಶಗಳಲ್ಲಿ ಟೋಲ್ ಶುಲ್ಕ ವಿಧಿಸದಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಏಜೆನ್ಸಿಗಳಿಗೆ ಸೂಚಿಸಿದ್ದಾರೆ. ಯಾವ ಯಾವ ನಗರಗಳಿಗೆ ಇದು ಅನ್ವಯಿಸಲಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Toll Fee

ಉಪಗ್ರಹ ಆಧಾರಿತ ಟೋಲ್ ಸಂಗ್ರಹದ ವಿಧಾನದ ಕುರಿತು ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ನಿತಿನ್‌ ಗಡ್ಕರಿ, ನಿಮ್ಮ ಸೇವೆಗಳು ಉತ್ತಮವಾಗಿಲ್ಲದಿದ್ದಾಗ ವಾಹನ ಸವಾರರಿಗೆ ಟೋಲ್ ವಿಧಿಸಬೇಡಿ. ಎಂದು ಸೂಚಿಸಿದರು.

ಅಧಿಕಾರಿಗಳಿಂದ ಅಥವಾ ಸರ್ಕಾರದಿಂದ ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದಾಗ ಟೋಲ್ ವಿಧಿಸುವುದು ಸರಿಯಲ್ಲ. ಗುಂಡಿ ಬಿದ್ದ ಹಾಗೂ ಉತ್ತಮ ಕಾಮಗಾರಿ ಇಲ್ಲದ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಿದರೆ, ರಾಜಕಾರಣಿಗಳಾದ ನಾವು ಜನರ ಕೋಪವನ್ನು ಎದುರಿಸಬೇಕಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ಸವಾರರಿಗೆ ವಿಳಂಬವಾಗದಂತೆ ರಾಷ್ಟ್ರೀಯ ಹೆದ್ದಾರಿ ಕ್ಷೇತ್ರ ಅಧಿಕಾರಿಗಳು ಕಾಳಜಿ ವಹಿಸಬೇಕು” ಎಂದು ಅವರು ಹೇಳಿದರು.

ಇದನ್ನು ಓದಿ: ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್‌! ಗ್ಯಾಸ್‌ ಬುಕಿಂಗ್‌ ಈ ರೀತಿ ಮಾಡಿದ್ರೆ ಸಿಗತ್ತೆ ₹80 ಕ್ಯಾಶ್‌ ಬ್ಯಾಕ್

ಹೆಚ್ಚುವರಿ ಆದಾಯ 10,000 ಕೋಟಿ ರೂ.

ಉಪಗ್ರಹ ಆಧಾರಿತ ಟೋಲ್ ಶುಲ್ಕವನ್ನು ಸಂಗ್ರಹಿಸುವ ಹೊಸ ವ್ಯವಸ್ಥೆಯನ್ನು ಈ ಹಣಕಾಸು ವರ್ಷದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಗಡ್ಕರಿ ಅವರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ 5,000 ಕಿ.ಮೀ ರಸ್ತೆಗಳಲ್ಲಿ ಟೋಲ್ ವ್ಯವಸ್ಥೆ ಮತ್ತು ಮೊದಲ ವಾಣಿಜ್ಯ ವಾಹನಗಳಿಗೆ ಒಂದು ದಾರಿಯಲ್ಲಿ ಅವಕಾಶ ನೀಡಲಾಗುವುದು. ಟೋಲ್ ಸಂಗ್ರಹಕ್ಕೆ ನಿರ್ಣಾಯಕವಾದ ವೆಹಿಕಲ್ ಟ್ರ್ಯಾಕರ್ ಸಿಸ್ಟಮ್ ಘಟಕವನ್ನು ಪ್ರತೀ ವಾಹನಗಳಲ್ಲಿ ಸ್ಥಾಪಿಸಬೇಕಾಗಿದೆ. ಈ ವ್ಯವಸ್ಥೆ ಜಾರಿಯಾದರೆ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಲ್ಲಬೇಕಾದ ಸಂಗತಿ ಬರುವುದಿಲ್ಲ. ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಇದರಿಂದ ಸರ್ಕಾರಕ್ಕೆ 10,000 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಿಗಲಿದೆ.

ಇತರೆ ವಿಷಯಗಳು:

ನಂದಿನ ಹಾಲಿನ ದರ ₹2 ಏರಿಕೆ!! ಇಂದಿನಿಂದಲೇ ಜಾರಿ

ರಾಜ್ಯದ ಜನತೆಗೆ‌ ಮತ್ತೆ ಬೆಲೆ ಏರಿಕೆಯ ಬಿಸಿ; ಪ್ರತಿ ಲೀಟರ್ ಹಾಲಿನ ದರ 2 ರೂ. ಹೆಚ್ಚಳ


Share

Leave a Reply

Your email address will not be published. Required fields are marked *