ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಮತ್ತೆ ಪಠ್ಯಪುಸ್ತಕ ಪರಿಷ್ಕರಣೆಯಾಗಿದೆ, 2024-25ರ ಶೈಕ್ಷಣಿಕ ಸಾಲಿನಿಂದ ಹೊಸ ಟೆಕ್ಸ್ಟ್ ಬುಕ್ ಬರಲಿದೆ. ಕೆಲವು ಪಾಠಗಳನ್ನು ತೆಗೆದುಹಾಕಲಾಗಿದೆ, ಹಲವು ಪಾಠಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಸದ್ದಿಲ್ಲದೇ ಪಠ್ಯ ಪರಿಷ್ಕರಣೆಯನ್ನು ಮಂಜುನಾಥ ಜಿ ಹೆಗಡೆ ಸಮಿತಿಯವರು ಮಾಡಿ ಮುಗಿಸಿದ್ದಾರೆ. ಆದರೆ, ಟಿಪ್ಪು ಸುಲ್ತಾನ್ ಸೇರಿ ಕೆಲವು ವಿವಾದಿತ ಪಾಠಗಳನ್ನು ಬದಲಾಯಿಸುವ ಗೋಜಿಗೆ ಸಮಿತಿ ಹೋಗಿಲ್ಲಾ. ವಿದ್ಯಾರ್ಥಿಗಳ ವಯಸ್ಸಿನ ಅನುಗುಣವಾಗಿ ಒಂದಿಷ್ಟು ಪಠ್ಯಗಳನ್ನು ಮುಂದಿನ ತರಗತಿಗೆ ಸ್ಥಳಾಂತರಿಸಲಾಗಿದೆ.
ಬೆಂಗಳೂರು : ಈ ಹಿಂದೆ ವಿವಾದವನ್ನು ಸೃಷ್ಟಿಸಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಪರಿಷ್ಕೃತವು ವರದಿಯ ಶಿಫಾರಸ್ಸನ್ನು ಆಧರಿಸಿ 2024-25ನೇ ಸಾಲಿನಿಂದ ಹೊಸ ಪಠ್ಯಪುಸ್ತಕವನ್ನು ಸರ್ಕಾರ ಮುದ್ರಿಸಿ ಶಾಲೆಗೆ ಹಂಚಿಕೆ ಮಾಡಲು ನಿರ್ಧರ ಮಾಡಿದೆ.
1 ರಿಂದ 10ನೇ ತರಗತಿ ಕನ್ನಡ ಪ್ರಥಮ & ದ್ವಿತೀಯ ಭಾಷೆ, 9-10ನೆ ತರಗತಿಯ ಕನ್ನಡ ತೃತೀಯ ಭಾಷೆಯು, 6-10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಯು ನಿವೃತ್ತ ಪ್ರಾಧ್ಯಾಪಕ ಡಾ ಮಂಜುನಾಥ ಜಿ ಹೆಗಡೆ ಅಧ್ಯಕ್ಷತೆಯು ರಚಿಸಿದ್ದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯನ್ನು ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆ, 2024-25ನೇ ಸಾಲಿನಿಂದ ಜಾರಿಗೆ ತರಲು ನಿರ್ಧರಿಸಿದೆ, ಪರಿಷ್ಕೃತ ಪಠ್ಯವನ್ನು ಮುದ್ರಣಕ್ಕೆ ಕಳುಹಿಸಲಾಗಿದೆ.
ಇದರಲ್ಲಿ’ಟಿಪ್ಪು ಸುಲ್ತಾನ್’ ಸುಲ್ತಾನ್ ಪಠ್ಯ ಸೇರಿದಂತೆ ವಿವಾದಿತ ಕೆಲವು ಪಾಠಗಳನ್ನು ಪರಿಷ್ಕರಿಸುವ ಗೋಜಿಗೆ ಸರ್ಕಾರ ಕೈ ಹಾಕಿಲ್ಲ. ಆದರೆ, ವಿದ್ಯಾರ್ಥಿಗಳ ವಯೋಮಿತಿಗೆ ಅನುಗುಣವಾಗಿ ಕೆಲವು ಪಠ್ಯಗಳನ್ನು ಮುಂದಿನ ತರಗತಿಗೆ ಸ್ಥಳಾಂತರಿಸಿದೆ. ಅಲ್ಲದೆ, ಕೆಲ ಪಠ್ಯವನ್ನು ತೆಗೆದು ಹಾಕಿ ಹೊಸ ಪಠ್ಯವನ್ನು ಸೇರಿಸಲಾಗಿದೆ.
ಸಾಹಿತಿ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಪಠ್ಯ ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಪಠ್ಯಪುಸ್ತಕ ವಿವಾದ ಸೃಷ್ಟಿಯಾಗಿದ್ದ ವೇಳೆ ಮಹಾದೇವ ಅವರೇ ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಪಠ್ಯವನ್ನು ತೆಗೆದು ಹಾಕಬೇಕೆಂದು ಎಂದುದರ ಬಗ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತೆಗೆದು ಹಾಕಲಾಗಿತ್ತು. ಇದೀಗ ಈ ಹೊಸ ಸಮಿತಿಯು ಅವರ ಪಠ್ಯವನ್ನು ಮತ್ತೆ ಸೇರ್ಪಡೆ ಮಾಡಿದೆ.
6-10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ 7 ಮಾಧ್ಯಮಗಳ 70 ಪರಿಷ್ಕೃತ ಪಠ್ಯಪುಸ್ತಕಗಳು ಮತ್ತು 1-10ನೇ ತರಗತಿ ಕನ್ನಡ ಭಾಷಾ ವಿಷಯದ 44 ಪರಿಷ್ಕೃತ ಪಠ್ಯಪುಸ್ತಕ ಸೇರಿದಂತೆ ಒಟ್ಟು 114 ಪಠ್ಯ ಪುಸ್ತಕ ಪರಿಷ್ಕೃಗೊಂಡಿದ್ದು, ಮಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಬಗ್ಗೆ ಸಮ್ಮತಿ ಸೂಚಿಸಲಾಗಿರುತ್ತದೆ.
ಸಮಾಜ ಮತ್ತು ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು, ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ & ಜಾತ್ಯತೀತ ಮೌಲ್ಯಗಳು, ವೈಜ್ಞಾನಿಕ ಮನೋಭಾವನೆ ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆಯು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿಕೊಡಲಾಗಿದೆ.
* ಪರಿಷ್ಕರಣೆ ಪಠ್ಯದ ಪ್ರಮುಖ ಅಂಶಗಳು
- 6ನೇ ತರಗತಿ ಸಮಾಜ ವಿಜ್ಞಾನ: ಪೌರ & ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ.
- 7ನೇ ತರಗತಿ ಸಮಾಜ ವಿಜ್ಞಾನ: ವಿಶ್ವಗುರು ಬಸವೇಶ್ವ ಅವರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಲಾಗಿದೆ.
- 8ನೇ ತರಗತಿ ಇತಿಹಾಸ: ಸನಾತನ ಧರ್ಮ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾಗಿ ನಿರೂಪಣೆಯನ್ನು ಮಾಡಲಾಗಿದೆ.
- 9ನೇ ತರಗತಿ ಇತಿಹಾಸ: ಭಕ್ತಿಪಂಥ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರು, ಸಂತ ಶಿಶುನಾಳ ಶರೀಫರ ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ
- 10ನೇ ತರಗತಿ ಇತಿಹಾಸ: ಸಾರ್ವಜನಿಕ ಆಡಳಿತ ಎಂಬುವ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
- 1-5ನೇ ತರಗತಿ ಕನ್ನಡ: ಕೆ.ವಿ.ತಿರುಮಲೇಶ್, ವಿ.ಜಿ.ಭಟ್ಟರ ಮಕ್ಕಳ ಕವನಗಳ ಸೇರ್ಪಡೆ ಮಾಡಲಾಗಿದೆ.
- ಕಾರ್ನಾಡ್- ‘ಅಧಿಕಾರ’, ಕಂಬಾರ-‘ಸೀಮೆ’, ದೇವಿದಾಸ- ‘ಚಕ್ರಗ್ರಹಣ’, ಮರಿಯಪ್ಪ ಭಟ್ಟ- ‘ನಮ್ಮ ಭಾಷೆ’, ಎ.ಎನ್.ಮೂರ್ತಿರಾವ್- ‘ವ್ಯಾಘ್ರ ಗೀತೆ’, ದೇವನೂರು ಮಹಾದೇವ- ‘ಎದೆಗೆ ಬಿದ್ದ ಅಕ್ಷರ’, ಅಕ್ಕಮಹಾದೇವಿ- ‘ವಚನಗಳು’ ಸೇರ್ಪಡೆ ಮಾಡಲಾಗಿದೆ.
- 9-10ನೇ ತರಗತಿ ಕನ್ನಡ: ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಇತರೆ ವಿಷಯಗಳು
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದೀರಾ? ಹಾಗಿದ್ದರೆ ಇಲ್ಲಿಂದಲೇ ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿ
ನಿರುದ್ಯೋಗಿಗಳಿಗೆ ಸಿಹಿ ಸುದ್ದಿ! ಈ ಪ್ರಮಾಣಪತ್ರವಿದ್ದರೆ ರೈಲ್ವೆ ಹುದ್ದೆಗೆ ನೇರ ನೇಮಕಾತಿ