ಇನ್ಮುಂದೆ ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಲಭ್ಯ!
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲು 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದಿಂದಲೇ ಯೋಜನೆಯ ಅನುಷ್ಠಾನವಾಗಲಿದ್ದು, ವಿದ್ಯಾರ್ಥಿಗಳಿಗೆ ಖಾಸಗಿಯ ಶಾಲೆಗಳ ರೀತಿಯಲ್ಲಿಯೇ ಪ್ರೌಢಶಾಲೆಗಳಲ್ಲಿ ವಿಜ್ಞಾನವನ್ನು ಕಲಿಕೆಗೆ ಒತ್ತು ನೀಡಲಾಗುವುದು. ವಿಜ್ಞಾನದ ವಿವಿಧ ಪ್ರಾಯೋಗಿಕ ಪಾಠಗಳು ಆರಂಭವಾಗುವುದರಿಂದ ಅದನ್ನು ಅರ್ಥೈಸಲು ಪ್ರಯೋಗಾಲಯಗಳು ಅವಶ್ಯಕತೆ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿ ಸುಸಜ್ಜಿತವಾದ ಕೊಠಡಿಗಳಿಲ್ಲ. ಪ್ರಯೋಗಾಲಯಗಳೂ ಕೂಡ ಇಲ್ಲ. ಹೀಗಾಗಿ ರಾಜ್ಯ ಸರ್ಕಾರವು ಹೊಸದಾಗಿ ಪ್ರಯೋಗಾಲಯವನ್ನು ಕಲ್ಪಿಸಲು ಅನುದಾನವನ್ನು ನೀಡಿದೆ….