rtgh
Headlines

ಇನ್ಮುಂದೆ ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಲಭ್ಯ!

Government School Student
Share

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲು 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದಿಂದಲೇ ಯೋಜನೆಯ ಅನುಷ್ಠಾನವಾಗಲಿದ್ದು, ವಿದ್ಯಾರ್ಥಿಗಳಿಗೆ ಖಾಸಗಿಯ ಶಾಲೆಗಳ ರೀತಿಯಲ್ಲಿಯೇ ಪ್ರೌಢಶಾಲೆಗಳಲ್ಲಿ ವಿಜ್ಞಾನವನ್ನು ಕಲಿಕೆಗೆ ಒತ್ತು ನೀಡಲಾಗುವುದು.

Government School Student

ವಿಜ್ಞಾನದ ವಿವಿಧ ಪ್ರಾಯೋಗಿಕ ಪಾಠಗಳು ಆರಂಭವಾಗುವುದರಿಂದ ಅದನ್ನು ಅರ್ಥೈಸಲು ಪ್ರಯೋಗಾಲಯಗಳು ಅವಶ್ಯಕತೆ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿ ಸುಸಜ್ಜಿತವಾದ ಕೊಠಡಿಗಳಿಲ್ಲ. ಪ್ರಯೋಗಾಲಯಗಳೂ ಕೂಡ ಇಲ್ಲ. ಹೀಗಾಗಿ ರಾಜ್ಯ ಸರ್ಕಾರವು ಹೊಸದಾಗಿ ಪ್ರಯೋಗಾಲಯವನ್ನು ಕಲ್ಪಿಸಲು ಅನುದಾನವನ್ನು ನೀಡಿದೆ.

ಶಿಕ್ಷಣ ಇಲಾಖೆಯ ಅಗತ್ಯವಾದ ಶಾಲೆಗಳನ್ನು ಗುರುತಿಸಿ ಸೈನ್ಸ್ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯವನ್ನು 2 ವರ್ಷಗಳ ಪ್ಯಾಕೇಜ್ ನಲ್ಲಿ ನೀಡಲು ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯಬೇಕಿದೆ. ತಾಂತ್ರಿಕ ಸಲಹಾ ಸಮಿತಿಯ ಸೌಲಭ್ಯವನ್ನು ಒದಗಿಸಲು ಅಗತ್ಯವಾದ ಅನುಮೋದನೆ ನೀಡಲಿದೆ.

ಈ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಯನ್ನು ನಿಗದಿಪಡಿಸಿ ಭರಿಸಲಾದ ವೆಚ್ಚದ ವಿವರವನ್ನು ಪ್ರತಿ ತಿಂಗಳು ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಮ್ ತಂತ್ರಾಂಶದಲ್ಲಿ ಅಪ್ಡೇಟ್ ಅನ್ನು ಮಾಡಬೇಕಿದೆ.

ರಾಜ್ಯದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 8, 9ನೇ ತರಗತಿಯಲ್ಲಿ ಗಣಿತ, ವಿಜ್ಞಾನದ ವಿಷಯ ಕಲಿಕಾ ಸಾಧನೆಯು ಶೇಕಡ 50ಕ್ಕಿಂತ ಕಡಿಮೆ ಇದೆ ಎಂಬುದು ಕರ್ನಾಟಕದ ಶಾಲಾ ಗುಣಮಟ್ಟದ ಮೌಲ್ಯಾಂಕನ ಮತ್ತು ಅಂಗೀಕರಣದ ಪರಿಷತ್ 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.

Gold Silver Price: ಕಡಿಮೆಯಾಗದ ಚಿನ್ನದ ಬೆಲೆ! ಬಂಗಾರ ಬೆಳ್ಳಿ ದರ ಭಾರೀ ಏರಿಕೆ

ಮುಂದಿನ 5 ದಿನ ಭಾರೀ ಮಳೆಯ ಆರ್ಭಟ! ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್


Share

Leave a Reply

Your email address will not be published. Required fields are marked *