ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶಾಲೆಗಳಲ್ಲಿ ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಆರಂಭ
ಹಲೋ ಸ್ನೇಹಿತರೆ, ರಾಜ್ಯದ ಸರ್ಕಾರಿ ಶಾಲೆಗಳಳ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯವನ್ನು ಆರಂಭಿಸಲು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ವರ್ಷದಿಂದಲೇ ಈ ಯೋಜನೆ ಅನುಷ್ಠಾನವಾಗಲಿದ್ದು, ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ರೀತಿಯಲ್ಲಿಯೇ ಪ್ರೌಢಶಾಲೆಗಳಲ್ಲಿಯೂ ವಿಜ್ಞಾನ ಕಲಿಕೆಗೆ ಒತ್ತು ನೀಡಲಾಗುವುದು. ವಿಜ್ಞಾನದಲ್ಲಿ ವಿವಿಧ ಪ್ರಾಯೋಗಿಕ ಪಾಠಗಳು ಆರಂಭವಾಗುವುದರಿಂದ ಅದನ್ನು ಅರ್ಥೈಸಲು ಪ್ರಯೋಗಾಲಯ ಅವಶ್ಯಕತೆ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿಗಳ ವ್ಯವಸ್ಥೆ ಹಾಗೂ ಪ್ರಯೋಗಾಲಯಗಳೂ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ಪ್ರಯೋಗಾಲಯ…