rtgh

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!

SSLC Exam
Share

ಬೆಂಗಳೂರು : ಕ.ರಾ.ರ.ಸಾ.ನಿಗಮವು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನಾಂಕದಂದು ಅಂದರೆ, ದಿನಾಂಕ 25.03.2024 ರಿಂದ 06.04,2024 ರವರೆಗೆ, ಪರೀಕ್ಷೆಗೆ ಹಾಜರಾಗುವ ಎಲ್ಲಾ SSLC ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ “SSLC ಪರೀಕ್ಷಾ ಪ್ರವೇಶ ಪತ್ರವನ್ನು” ತೋರಿಸಿ, ನಿಗಮದ ನಗರದಲ್ಲಿ, ಹೊರವಲಯದಲ್ಲಿ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

SSLC Exam

ಇದಕ್ಕೆ ಸಂಬಂಧಿಸಿದಂತೆ ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ SSLC ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅವಧಿಯಲ್ಲಿ ನಿಯೋಜಿತವಾದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಮತ್ತು ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಕ್ಕೆ ಅನುಮತಿಸಲು ಸೂಕ್ತ ತಿಳುವಳಿಕೆಯನ್ನು ನೀಡಲು ಸೂಚಿಸಲಾಗಿದೆ.

ಪ್ರವೇಶ ಪತ್ರದ ಆಧಾರದ ಮೇಲೆಯೇ ಬಸ್ಸುಗಳನ್ನು ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗದಲ್ಲಿ ಕೋರಿಕೆಯ ನಿಲುಗಡೆಯನ್ನು ನೀಡಲು ಕ್ರಮಕೈಗೊಳ್ಳುವುದು.

ಇದನ್ನೂ ಸಹ ಓದಿ; ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಕುತ್ತು ತರುತ್ತಾ ಲೋಕಸಭೆ ಚುನಾವಣೆ?

ಚಾಲನಾ ಸಿಬ್ಬಂದಿಗಳು ಮೇಲ್ಕಂಡ ಎಲ್ಲಾ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದು. ಈ ವಿಷಯಗಳನ್ನು ಎಲ್ಲಾ ಘಟಕ ಮತ್ತು ಬಸ್ ನಿಲ್ದಾಣದಲ್ಲಿ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಮೇಲ್ಕಂಡ ನಿರ್ದೇಶನಗಳನ್ನು ಜಾರಿಗೊಳಿಸುವ ಕ್ರಮಗಳನ್ನು ವಹಿಸುವಂತೆ KSRTC ಸುತ್ತೋಲೆಯನ್ನು ಹೊರಡಿಸಿದೆ.

ಇತರೆ ವಿಷಯಗಳು:

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ 2024! ಅರ್ಜಿ ಹಾಕಿ 1 ಲಕ್ಷದ ವರೆಗೆ ಸ್ಕಾಲರ್ಶಿಪ್ ಪಡೆಯಿರಿ

ಹಿರಿಯ ನಾಗರಿಕರಿಗೆ ಇಲ್ಲಿದೆ ಶುಭ ಸುದ್ದಿ!! ಅಪ್ಲೇ ಮಾಡಿದವರಿಗೆ ಲಾಭ


Share

Leave a Reply

Your email address will not be published. Required fields are marked *