ಹಲೋ ಸ್ನೇಹಿತರೇ, ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ(Sheep and Goat farming) ಹಾಗೂ ಕರ್ನಾಟಕ ಸರ್ಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಿಗಳೊಂದಿಗೆ ಸಂಯೋಜನೆಗೊಂಡಿರುವ ಸಂಘಗಳ ಸದಸ್ಯರಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ (20+1) ಕುರಿ ಮತ್ತು ಮೇಕೆ ಸಾಕಾಣಿಕೆಗಾಗಿ ಸಾಲ & ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.
ಕುರಿಗಾಹಿಗಳು ಫೆಬ್ರವರಿ 19, 2024 ಒಳಗಾಗಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಮೂಲಕ ನಿಗದಿತ ಅರ್ಜಿಯನ್ನು ದಾಖಲಾತಿಯೊಂದಿಗೆ ನಿಗಮದ ಕಛೇರಿಗೆ ಸಲ್ಲಿಸಬೇಕು. ಈ ಯೋಜನೆಯು ಸಂಘದ ಸದಸ್ಯರಿಗೆ ಮಾತ್ರ ಸೀಮಿತಗೊಂಡಿರಲಿದೆ ಎಂದು ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಿ ಅರ್ಜಿ ಸಲ್ಲಿಸಬೇಕು? ಅಧಿಕೃತ ಮಾರ್ಗಸೂಚಿ ಏನು, ಅರ್ಜಿ ನಮೂನೆ, ಅಗತ್ಯ ದಾಖಲಾತಿ ಇತ್ಯಾದಿ ಮಾಹಿತಿ ತಿಳಿಸಲಾಗಿದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿನ ಅರ್ಹ 20,000 ಕುರಿಗಾಹಿ ಸದಸ್ಯರಿಗೆ 20+1 ಕುರಿ / ಮೇಕೆ ಘಟಕಗಳನ್ನು ರೂ.1,75,000/- ಗಳ ವೆಚ್ಚದಲ್ಲಿ ನೀಡುವುದರ ಮೂಲಕ ಆರ್ಥಿಕವಾಗಿ ರಾಜ್ಯದಲ್ಲಿನ ಕುರಿಗಾಹಿಗಳನ್ನು ಸದೃಢಗೊಳಿಸಲಾಗುವುದು & ರಾಜ್ಯದಲ್ಲಿ ಸಮಗ್ರವಾಗಿ ಕುರಿ / ಮೇಕೆ ಅಭಿವೃದ್ಧಿ ಪಡಿಸುವ ಯೋಜನೆಯಾಗಿದೆ.
ಸದರಿ ಯೋಜನೆಯನ್ನು ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸಹಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ.
Contents
ಯೋಜನೆಯ ಉದ್ದೇಶ:
- ಕುರಿ ಮತ್ತು ಮೇಕೆ ಸಾಕಾಣಿಕೆಯಿಂದ ಕುರಿಗಾಹಿಗಳ ಆರ್ಥಿಕ ಅಭಿವೃದ್ಧಿ.
- ರಾಜ್ಯದಲ್ಲಿ ಕುರಿ & ಮೇಕೆಗಳ ಅಭಿವೃದ್ಧಿ.
- ಕುರಿಮತ್ತು ಮೇಕೆ ಮಾಂಸದ ಉತ್ಪಾದನೆ ಹೆಚ್ಚಾಗಿಸುವುದು.
ಇದನ್ನು ಓದಿ:ಯಾವೆಲ್ಲಾ ಇಲಾಖೆಯಿಂದ ಯಾವ್ಯಾವ ಸ್ಕಾಲರ್‌ಶಿಫ್.! ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಕಂಪ್ಲೀಟ್ ಮಾಹಿತಿ
ಯೋಜನೆಯ ವ್ಯಾಪ್ತಿ
- ರಾಜ್ಯದಲ್ಲಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿರುವ ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಲಾಗುತ್ತದೆ.
- ಈ ಯೋಜನೆಯಡಿ ಸಹಾಯಧನ ಪಡೆಯಲು ನೋಂದಾಯಿಸಲು ಅರ್ಹರು?
- ಸಂಘವು ಸಹಕಾರ ಸಂಘಗಳ ಕಾಯ್ದೆ 1959 ರ ಅನುಗುಣವಾಗಿ ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಲ್ಲಿ ನೋಂದಣಿ ಆಗಿರಬೇಕು.
- ಸಂಘವು, ತನ್ನ ಸಭೆಗಳನ್ನು ನಿರಂತರವಾಗಿ ನಡೆಸಿರಬೇಕು ಹಾಗೂ ವಾರ್ಷಿಕ ಸಾಮಾನ್ಯ ಸಭೆ (AGM) & ಚುನಾವಣಾ ಬೈಲಾ ಹಾಗೂ ಕಾಯ್ದೆಗೆ ಅನುಗುಣವಾಗಿ ನಡೆಸ ತಕ್ಕದ್ದು.
- ಸಂಘದ ಇತ್ತೀಚಿನ 3 ವರ್ಷಗಳ ಲೆಕ್ಕ ಪರಿಶೋಧನೆ ಆಗಿರಬೇಕು ಹಾಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸಹಕಾರ ಇಲಾಖೆ ದೃಢೀಕರಣ ಹೊಂದಿರಬೇಕಾಗುತ್ತದೆ.
- ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಸಂಯೋಜನೆಗೊಂಡಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ.
- ಕರ್ನಾಟಕ ಸಹಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳಗಳ ಜೊತೆಗೆ ಷೇರುದಾರರಾಗಿ ನೋಂದಾಯಿತರಾಗಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ
ಸಂಘದಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ. - ಸಂಘವು ತನ್ನ ಎಲ್ಲಾ ಸದಸ್ಯರ ಹಾಗೂ ಅವರು ಹೊಂದಿರುವ ಕುರಿ / ಮೇಕೆಗಳ ಕುರಿತಂತೆ ಎಲ್ಲಾ ವಿವರಗಳನ್ನು ಇಲಾಖೆ ಒದಗಿಸುವ ನಿಗದಿತ ನಮೂನೆಯಲ್ಲಿ ನೀಡ ತಕ್ಕದ್ದು.
- ಸದರಿ ಕಾರ್ಯಕ್ರಮಗಳಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ.33.3), ವಿಶೇಷ ಚೇತನರಿಗೆ (ಶೇ.3) ಆದ್ಯತೆ ನೀಡಲಾಗುತ್ತದೆ.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
- (ಪ್ರಮಾಣ ಪತ್ರದಲ್ಲಿ RD ನಂ: ಇರಬೇಕು) ಅರ್ಜಿದಾರರು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು.
- ಕುರಿ, ಮೇಕೆಗಳ ಮಾರಾಟ ವ್ಯವಸ್ಥೆ ಕಲ್ಪಿಸುವ NeML Marketing Platform (Online) ನಲ್ಲಿ ನೋಂದಣಿ ಮಾಡಬೇಕು.
- ಒಂದು ಕುಟುಂಬಕ್ಕೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಕುಟುಂಬದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ..
ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು:
- ನಿಗದಿತ ನಮೂನೆಯಲ್ಲಿ ಭಾವಚಿತ್ರ.
- ಸಂಘದ ಇತ್ತೀಚಿನ 3 ವರ್ಷಗಳ ಲೆಕ್ಕ ಪರಿಶೋಧನೆ ಆಗಿರಬೇಕು ಹಾಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಹಕಾರ ಇಲಾಖೆ ದೃಢೀಕರಣ ಹೊಂದಿರಬೇಕಾಗುತ್ತದೆ.
- ನೋಂದಾಯಿತ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರಾಗಿರುವ ಬಗ್ಗೆ ಸಂಬಂಧಿಸಿದ ಸಂಘದ ಕಾರ್ಯದರ್ಶಿಗಳಿಂದ ಪಡೆದ ಸದಸ್ಯತ್ವದ ದೃಢೀಕರಣ ಪತ್ರದ ಪ್ರತಿ.
- ಪರಿಶಿಷ್ಟಜಾತಿ ಮತ್ತು ಪರಿಶಿಷ್ಠಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
- ವಿಶೇಷ ಚೇತನರಾಗಿದ್ದಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಸಕ್ಷಮ ಪ್ರಾಧಿಕಾರ ನೀಡಿರುವ ದೃಢೀಕರಣ ಪ್ರಮಾಣ ಪತ್ರ.
ಫಲಾನುಭವಿಯ ಆಯ್ಕೆ ವಿಧಾನ:
- ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳು ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಲು ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಪತ್ರಿಕಾ ಪ್ರಕಟಣೆಯನ್ನು ನೀಡಿ ಜಿಲ್ಲೆಯ ಕುರಿ & ಉಣ್ಣೆ ಉತ್ಪಾದಕ ಸಹಕಾರ ಸಂಘದ ಮೂಲಕ ನಿಗದಿತ ನಮೂನೆಯಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಲಾಗುವುದು.
- ರಾಜ್ಯದಲ್ಲಿರುವ ಒಟ್ಟು ಕುರಿ & ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಪೈಕಿ ಪ್ರತಿ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾವಾರು ಗುರಿಯನ್ನು ನಿಗಧಿ ಮಾಡಲಾಗುವುದು.
- ಆಯಾ ಜಿಲ್ಲೆಯಲ್ಲಿರುವ ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತಗಳೊಂದಿಗೆ ಸಂಯೋಜನೆಗೊಂಡಿರುವ ಸಂಘಗಳು ಮತ್ತು ಕರ್ನಾಟಕ ಸಹಕಾರ ಕುರಿ & ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಂಡಳಗಳ ಮಹಾ ಜೊತೆಗೆ ಷೇರುದಾರರಾಗಿ ನೋಂದಾಣಿಯಾಗಿರುವ ಸಂಘಗಳು ಜಿಲ್ಲಾವಾರು ನಿಗದಿಪಡಿಸುವ ಗುರಿ ಅನ್ವಯ ಸದಸ್ಯರನ್ನು ಆಯ್ಕೆ ಮಾಡುವುದು ಮತ್ತು ಫಲಾನುಭವಿಗಳ ಪಟ್ಟಿಯನ್ನು ನಿಗಧಿತ ನಮೂನೆ & ಅಗತ್ಯ ದಾಖಲಾತಿಯೊಂದಿಗೆ ಸಂಬಂಧಪಟ್ಟ ಆಯಾ ಜಿಲ್ಲೆಯ ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಅನುಷ್ಟಾನಾಧಿಕಾರಿಗೆ ಸಲ್ಲಿಸುವುದು.
- ಜಿಲ್ಲಾವಾರು ಗುರಿಯನ್ನು ಆಯಾ ಜಿಲ್ಲೆಯ ಹೋಬಳಿವಾರು ಅಸ್ತಿತ್ವದಲ್ಲಿರುವ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಸಂಖ್ಯೆಗಳಿಗೆ ಅನುಗುಣವಾಗಿ ಸರ್ಕಾರದ ನಿಯಮಾವಳಿಗೆ ಅನ್ವಯ ವರ್ಗವಾರು ಗುರಿಯನ್ನು ಮರುನಿಗಧಿ ಪಡಿಸಲಾಗುವುದು.
- ಯೋಜನೆಯ ಅನುಷ್ಟಾನಕ್ಕಾಗಿ ಸಂಘದ ಸದಸ್ಯರಿಗೆ NCDC ಯಿಂದ ಪಡೆದ ಸಾಲ & ಬಡ್ಡಿ ವಸೂಲಾತಿಗೆ ಸಂಬಂಧಿಸಿದಂತೆ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಕಡ್ಡಾಯವಾಗಿ ಸಂಬಂಧ ಪಟ್ಟ ಜಿಲ್ಲಾ ಅನುಷ್ಟಾನಾಧಿಕಾರಿಗಳು ಕರ್ನಾಟಕ ಕುರಿ & ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಕರಾರು ಒಪ್ಪಂದವನ್ನು ಮಾಡಿಕೊಳ್ಳ ತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ:
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್: click here
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಸಂಪೂರ್ಣ ಮಾರ್ಗಸೂಚಿಗಾಗಿ PDF ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ: click here
ಇತರೆ ವಿಷಯಗಳು
ಕೇವಲ ಆಧಾರ್ ಕಾರ್ಡ್ ನಿಂದ ಸಿಗತ್ತೆ 10 ಲಕ್ಷ!! ಸರ್ಕಾರಿ ಸಾಲ ಯೋಜನೆ
ಗೃಹಲಕ್ಷ್ಮಿ ಯೋಜನೆ: 6ನೇ ಕಂತಿನ 2,000 ರೂ. ಜಮಾ ಆಗಿದೆ.! ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್
FAQ
1. ಯೋಜನೆಯಡಿ ಎಷ್ಟು ಕುರಿ ನೀಡಲಾಗುವುದು?
20+1 ಕುರಿಯನ್ನು ನೀಡಲಾಗುವುದು.
2. ಎಷ್ಟು ಸಾಲ ಮತ್ತು ಸಹಾಯಧನವನ್ನು ನೀಡಲಾಗುವುದು?
1.75 ಸಾಲ ಮತ್ತು ಸಹಾಯಧನವನ್ನು ನೀಡಲಾಗುತ್ತದೆ.