rtgh

ಯಾವೆಲ್ಲಾ ಇಲಾಖೆಯಿಂದ ಯಾವ್ಯಾವ ಸ್ಕಾಲರ್‌ಶಿಫ್‌.! ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಕಂಪ್ಲೀಟ್‌‌ ಮಾಹಿತಿ

government scholarships
Share

ಹಲೋ ಸ್ನೇಹಿತರೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಹೀಗೆ ಇನ್ನು 11 ಇಲಾಖೆಗಳು ಕರ್ನಾಟಕ ರಾಜ್ಯದಲ್ಲಿ ಪೋಸ್ಟ್‌ ಮೆಟ್ರಿಕ್ ವಿದ್ಯಾರ್ಥಿವೇತನ ವೇತನ ವಿತರಣೆ ಮಾಡುತ್ತವೆ. ಈ ಎಲ್ಲಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಯಾವಾಗ ಕೊನೆಯ ದಿನಾಂಕ ಮತ್ತು ಅದರ ಬಗ್ಗೆ ಇನ್ನು ಹಲವು ಮಾಹಿತಿಗಳಿಗಾಗಿ ಈ ಲೇಖನವನ್ನು ಓದಿ.

government scholarships

ಕರ್ನಾಟಕ ರಾಜ್ಯದಲ್ಲಿ ವಿವಿಧ 11 ಇಲಾಖೆಗಳು ಮೆಟ್ರಿಕ್‌ ನಂತರದ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತವೆ. ಅವುಗಳ ಪೈಕಿ ಪ್ರಸ್ತುತ ಯಾವೆಲ್ಲಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ, ಯಾವ ಇಲಾಖೆಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಿರಿ.

ವಿದ್ಯಾರ್ಥಿವೇತನ ನೀಡುವ ಇಲಾಖೆ ಮತ್ತು ಅರ್ಜಿಗೆ ಕೊನೆಯ ದಿನಾಂಕ ಮಾಹಿತಿ

  • ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-02-2024
  • ಆರ್ಯ ವೈಶ್ಯ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2024
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2024
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2024
  • ತಾಂತ್ರಿಕ ಶಿಕ್ಷಣ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-02-2024
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2024
  • ವೈದ್ಯಕೀಯ ಶಿಕ್ಷಣ ಇಲಾಖೆಯ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2024

ಈ ಮೇಲಿನ ಯಾವುದೇ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಮೊದಲಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಖಾತೆ ತೆರೆಯಬೇಕು. ಅಂದರೆ ಬೇಸಿಕ್ ಮಾಹಿತಿಗಳನ್ನು ನೀಡಿ ಖಾತೆ ತೆರೆಯಬೇಕು. ನಂತರ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನು ಓದಿ:ವಿದ್ಯಾರ್ಥಿಗಳಿಗೆ ₹35,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಸಲು 2 ದಿನ ಮಾತ್ರ ಬಾಕಿ

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಯಾರೆಲ್ಲ ಅರ್ಹರು?

ITI, ಡಿಪ್ಲೊಮ, ದ್ವಿತೀಯ ಪಿಯುಸಿ (12nd PUC), ಪದವಿ (ತಾಂತ್ರಿಕ ಹಾಗೂ ತಾಂತ್ರಿಕೇತರ), ಸ್ನಾತಕೋತ್ತರ ಪದವಿ (ತಾಂತ್ರಿಕ, ತಾಂತ್ರಿಕೇತರ), ವೃತ್ತಿಪರ ಕೋರ್ಸ್‌ಗಳನ್ನು ಓದಲು ಪ್ರವೇಶ ಪಡೆದಿರುವವರು.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಬೇಕಾದ ದಾಖಲೆಗಳು


-ವಿದ್ಯಾರ್ಥಿಗಳ ಎಸ್‌.ಎ.ಟಿ.ಎಸ್ ಗುರುತಿನ ಸಂಖ್ಯೆ ಮತ್ತು ಕಾಲೇಜು ನೋಂದಣಿ ಸಂಖ್ಯೆ.
– ವಿದ್ಯಾರ್ಥಿ & ಪೋಷಕರ ಆಧಾರ್ ಸಂಖ್ಯೆ.
– ವಿದ್ಯಾರ್ಥಿ ಮೊಬೈಲ್ ಸಂಖ್ಯೆ.
– ವಿದ್ಯಾರ್ಥಿಯ ಹೆಸರಿನಲ್ಲಿರುವ ಆರ್‌.ಡಿ ಇಂದ ಶುರುವಾಗುವ ಜಾತಿ / ಆದಾಯ / ಆರ್ಥಿಕವಾಗಿ ದುರ್ಬಲ ವಿಭಾಗದ (ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ) ಪ್ರಮಾಣ ಪತ್ರದ ಸಂಖ್ಯೆ.
– ಇ-ದೃಢೀಕರಿಸಿದ ದಾಖಲೆಯ ಸಂಖ್ಯೆಗಳು
– ದಿವ್ಯಾಂಗ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗವೈಕಲ್ಯದ ಕಾರ್ಡ್‌ ಸಂಖ್ಯೆ.
– ಇನ್ನಿತರೆ ಅಗತ್ಯ ಮಾಹಿತಿಗಳು

ಅಭ್ಯರ್ಥಿಗಳು ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ನೀಡಬೇಕಾಗುತ್ತದೆ. ಜನ್ಮ ದಿನಾಂಕ, ಬ್ಯಾಂಕ್ ಖಾತೆ ನಂಬರ್‌ಗಳನ್ನು ತಪ್ಪಿಲ್ಲದೇ ನೀಡಬೇಕು.

ಇತರೆ ವಿಷಯಗಳು

384 KAS ಹುದ್ದೆಗೆ ಅಧಿಸೂಚನೆ: ಅರ್ಹತೆ, ವೇತನ, ಪರೀಕ್ಷೆ ಮಾದರಿ ಸಂಪೂರ್ಣ ಮಾಹಿತಿ ಇಲ್ಲಿಂದ ಚೆಕ್‌ ಮಾಡಿ

ʼಕರ್ನಾಟಕ ಒನ್ʼ ಫ್ರಾಂಚೈಸಿಗೆ ಅರ್ಜಿ ಆಹ್ವಾನ! ನಿಮ್ಮ ಊರಲ್ಲೇ ಫ್ರಾಂಚೈಸಿ ತೆರೆಯಿರಿ

FAQ

1.ಒಟ್ಟು ಎಷ್ಟು ಇಲಾಖೆಗಳು ವಿದ್ಯಾರ್ಥಿವೇತನ ನೀಡುತ್ತಿವೆ?

11 ಇಲಾಖೆಗಳು ನೀಡುತ್ತಿವೆ.

2. 11 ಇಲಾಖೆಗಳು ಯಾವ ವಿದ್ಯಾರ್ಥಿವೇತನವನ್ನು ವಿತರಣೆ ಮಾಡುತ್ತಿವೆ?

ಪೋಸ್ಟ್‌ ಮೆಟ್ರಿಕ್ ವಿದ್ಯಾರ್ಥಿವೇತನವನ್ನು ವಿತರಣೆ ಮಾಡುತ್ತಿವೆ.


Share

Leave a Reply

Your email address will not be published. Required fields are marked *