ಹಲೋ ಸ್ನೇಹಿತರೇ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ 100ಕ್ಕೂ ಹೆಚ್ಚು ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ, ಜುಲೈ ತಿಂಗಳೇ ಅರ್ಜಿ ಸಲ್ಲಿಸಲು ಕೊನೆಯ ತಿಂಗಳಾಗಿದೆ, ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಉತ್ಕೃಷ್ಟ ಸಹಕಾರಿ ಸೌಧ, ಕೋಡಿಯಾಲ್ ಬೈಲ್ ಮಂಗಳೂರು, ಈ ಬ್ಯಾಂಕ್ ಕೆಲವು ತಿಂಗಳು ಹಿಂದೆಯೇ ಈ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಕಾರಣಗಳಿಂದಾಗಿ ಹಳೆ ನೇಮಕಾತಿಯ ಹೊರತಾಗಿ ಇದೀಗ ಮತ್ತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಕಳೆದ ಬಾರಿ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆಗೆ ಆಯ್ಕೆಯಾದವರಿಗೆ ಕೂಡ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Contents
ನೇಮಕಾತಿ ಪ್ರಮುಖ ದಿನಾಂಕಗಳು:
• ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ದಿನಾಂಕ : 01 ಜುಲೈ 2024
• ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18 ಜುಲೈ 2024
ನೇಮಕಾತಿ ವಿವರ :
• ನೇಮಕಾತಿ ಬ್ಯಾಂಕ್ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್
• ಒಟ್ಟು ಹುದ್ದೆಗಳ ಸಂಖ್ಯೆ : 123 ಹುದ್ದೆಗಳು
• ಅರ್ಜಿ ಸಲ್ಲಿಕೆ : ಆನ್ಲೈನ್
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡ 50 ರಷ್ಟು ಅಂಕಗಳೊಂದಿಗೆ ಪದವಿ ಶಿಕ್ಷಣ ಮುಗಿಸಿರಬೇಕು.
ವಯೋಮಿತಿ
ಈ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷದ ಒಳಗೆ ಇರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಸಂಬಳ-
ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹24,910/- ರಿಂದ ₹55,655/- ರವರೆಗೆ ಮಾಸಿಕ ವೇತನ ಶ್ರೇಣಿ ಇರಲಿದೆ.
ಅರ್ಜಿ ಶುಲ್ಕ :
• SC / ST ವರ್ಗದವರಿಗೆ – ₹590/-
• ಉಳಿದ ವರ್ಗದ ಅಭ್ಯರ್ಥಿಗಳಿಗೆ – ₹1,180/-
• ಅರ್ಜಿ ಸಲ್ಲಿಕೆ ಲಿಂಕ್ – Click here
• ಅಧಿಸೂಚನೆ : ಡೌನ್ಲೋಡ್
ಇತರೆ ವಿಷಯಗಳು
ಇದೇ ತಿಂಗಳಲ್ಲಿ ಜೂನ್-ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ!
ಅಂಗನವಾಡಿಗಳಲ್ಲಿ LKG, UKG! ಜು. 22 ರಿಂದ ಅದ್ದೂರಿ ಆರಂಭಕ್ಕೆ ಚಾಲನೆ