rtgh
Headlines

ಡಿಗ್ರಿ ಓದೋರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ 50,000 ಹಣ ಸಿಗುತ್ತೆ

sbif scholarship
Share

ಹಲೋ ಸ್ನೇಹಿತರೇ, ಪದವಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ನಿಮ್ಮ ಶಿಕ್ಷಣದ ಅನುಕೂಲಕ್ಕೆ ಆರ್ಥಿಕ ನೆರವು ಬೇಕಾಗಿದ್ರೆ ಈಗಲೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಫೌಂಡೇಷನ್‌ ನೀಡುವ ಆಶಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಹಾಕಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ. ವಾರ್ಷಿಕ ರೂ.50,000ದ ವರೆಗೆ ಸ್ಕಾಲರ್‌ಶಿಪ್‌ ಸೌಲಭ್ಯವನ್ನು ನೀಡಲಾಗುವುದು. ಈ ಹಣ ಪಡೆಯಲು ಏನೆಲ್ಲಾ ದಾಖಲೆಗಳು ಬೇಕು ಎಂದು ತಿಳಿಯಲು ಲೇಖನವನ್ನು ಓದಿ.

sbif scholarship

ಭಾರತೀಯ ಸ್ಟೇಟ್‌ ಬ್ಯಾಂಕ್ ಎಲ್ಲ ಹಂತದ ವಿದ್ಯಾರ್ಥಿಗಳ ಶಿಕ್ಷಣದ ಗುರಿಗೆ, ಅದರಲ್ಲೂ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅನುಕೂಲಕ್ಕಾಗಿ ಆರ್ಥಿಕ ನೆರವು ನೀಡಲು ತನ್ನ ಫೌಂಡೇಷನ್‌ ಮೂಲಕ ಅತಿದೊಡ್ಡ ಯೋಜನೆಯನ್ನು ಹೊಂದಿದೆ. ಇನ್ನು ಪದವಿ, ಸ್ನಾತಕೋತ್ತರ ಪದವಿ, ಇತರೆ ಉನ್ನತ ಶಿಕ್ಷಣವನ್ನು ಓದುತ್ತಿರುವ ವಿದ್ಯಾರ್ಥಿಗಳಿಗೂ ಸ್ಕಾಲರ್‌ಶಿಪ್‌ ಇದೆ, ದೇಶದ ಟಾಪ್‌ 100 NIRF ವಿವಿಗಳು, ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಗುತ್ತಿದೆ.

ಅಂದಹಾಗೆ ಈಗ 2024ನೇ ಸಾಲಿನ ಅಂಡರ್‌ಗ್ರಾಜುಯೇಟ್‌ ಕೆಟಗರಿಯ ಎಸ್‌ಬಿಐಎಫ್‌ SBIF ಆಶಾ ಸ್ಕಾಲರ್‌ಶಿಪ್‌ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅಪ್ಲೇ ಮಾಡಿ.

ವಿದ್ಯಾರ್ಥಿವೇತನ ಹೆಸರು : SBIF ಆಶಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್ ಫಾರ್ ಅಂಡರ್‌ಗ್ರಾಜುಯೇಟ್‌ ಸ್ಟೂಡೆಂಟ್ಸ್‌
ಅರ್ಜಿ ಸಲ್ಲಿಸಬಹುದಾದ ವಿದ್ಯಾರ್ಥಿಗಳು: ಡಿಗ್ರಿಯ ಯಾವುದೇ ವರ್ಷದಲ್ಲಿ ಓದುತ್ತಿರುವವರು.
ವಿದ್ಯಾರ್ಥಿವೇತನ ಆರ್ಥಿಕ ನೆರವು: ವರ್ಷಕ್ಕೆ 50,000 .
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-10-2024

ಅರ್ಹತೆಗಳು

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪದವಿಯ ಯಾವುದೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರಬಹುದು.
  • ವಿದ್ಯಾರ್ಥಿಗಳು ತಮ್ಮ ಹಿಂದಿನ ಶಿಕ್ಷಣದಲ್ಲಿ ಶೇಕಡ.75 ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರಬೇಕು.
  • ಅರ್ಜಿ ಹಾಕುವ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು ರೂ.6,00,000 ಮೀರಿರಬಾರದು.
  • ಭಾರತದ ಯಾವುದೇ ರಾಜ್ಯದ ಪ್ರಜೆಗಳು ಅರ್ಜಿ ಹಾಕಬಹುದು.
  • ಶೇಕಡ.50 ರಷ್ಟು ವಿದ್ಯಾರ್ಥಿವೇತನ ಸಂಖ್ಯೆಯು ವಿದ್ಯಾರ್ಥಿನಿಯರಿಗೆ ಮೀಸಲಿವೆ.

ಅರ್ಜಿ ಸಲ್ಲಿಸುವ ವಿಧಾನ

  • SBI ಫೌಂಡೇಷನ್‌ನ ಸ್ಕಾಲರ್‌ಶಿಪ್‌ ಸೌಲಭ್ಯದ ಅಧಿಕೃತ ಪೋರ್ಟಲ್ https://www.sbifoundation.in/ ಗೆ ಭೇಟಿ ನೀಡಿ.
  • ತೆರೆದ ಮುಖಪುಟದಲ್ಲಿ ”Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಯಾವ ವಿಭಾಗದಲ್ಲಿ ಅರ್ಜಿ ಎಂಬುದನ್ನು ಆಯ್ಕೆ ಮಾಡಬೇಕು.
  • ಆದ್ದರಿಂದ ಈ ಹಂತದಲ್ಲಿ ನೀವು ‘SBIF Asha Scholarship Program for Undergraduate Students’ ಎಂದಿರುವ ಲಿಂಕ್ ಆಯ್ಕೆ ಮಾಡಿ.
  • ಅರ್ಹತೆ, ಸೌಲಭ್ಯದ ಕುರಿತು ಮಾಹಿತಿ ಪ್ರದರ್ಶಿತವಾಗುತ್ತದೆ. ಓದಿಕೊಳ್ಳಿ.
  • ನಂತರ ಮತ್ತೆ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
  • ಇಲ್ಲಿಯೂ ಸಹ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಜಿಮೇಲ್‌, ಮೊಬೈಲ್‌ ನಂಬರ್ ಮೂಲಕ ಲಾಗಿನ್‌ ಆಗಿ ಅಪ್ಲಿಕೇಶನ್ ಸಲ್ಲಿಸಿ.
  • ಕೇಳಲಾದ ಮಾಹಿತಿ / ದಾಖಲೆಗಳನ್ನು ನೀಡಿ ಅರ್ಜಿ ಹಾಕಿ.

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್‌
  • ಪ್ರಸ್ತುತ ತರಗತಿಯ ಪ್ರವೇಶಾತಿ ದಾಖಲೆ / ಶುಲ್ಕ ಪಾವತಿ ರಶೀದಿ
  • ಹಿಂದಿನ ತರಗತಿಯ ಅಂಕಪಟ್ಟಿ
  • ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌ ಪ್ರತಿ.
  • ಜಾತಿ & ಆದಾಯ ಪ್ರಮಾಣ ಪತ್ರ.
  • ವಿದ್ಯಾರ್ಥಿಯ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.
  • ಸಹಿ ಸ್ಕ್ಯಾನ್‌ ಪ್ರತಿ.
  • ಜಿಮೇಲ್‌ ವಿಳಾಸ.
  • ಮೊಬೈಲ್ ಸಂಖ್ಯೆ.
  • ಇತರೆ ವೈಯಕ್ತಿಕ ವಿವರಗಳು.

ಇತರೆ ವಿಷಯಗಳು

ಆಧಾರ್‌ ಕಾರ್ಡ್‌ ಹೊಂದಿರುವವರಿಗೆ 2 ದಿನ ಮಾತ್ರ ಬಾಕಿ..! ಕಟ್ಟಬೇಕು ಭಾರೀ ದಂಡ

ಕುಟುಂಬದಲ್ಲಿ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಪಡೆಯಬಹುದು? ನಿಯಮ ಬದಲಿಸಿದ ಸರ್ಕಾರ


Share

Leave a Reply

Your email address will not be published. Required fields are marked *