rtgh
Headlines

ಎಸ್‌ಬಿಐ ಭರ್ಜರಿ ನೇಮಕಾತಿ: 12,000 ಹುದ್ದೆಗಳಲ್ಲಿ ಶೇ.85 ರಷ್ಟು ಪದವೀಧರರಿಗೆ ಜಾಬ್‌

SBI recruitment 2024
Share

ಹಲೋ ಸ್ನೇಹಿತರೇ, ನೀವು ಯಾವುದೇ ಇಂಜಿನಿಯರಿಂಗ್ ಪದವಿ ಪಡೆದಿದ್ದಲ್ಲಿ, ಈ ವರ್ಷ ಭರ್ಜರಿ ಉದ್ಯೋಗಾವಕಾಶ ನಿಮಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿದೆ. ಅದರಲ್ಲೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿದೆ. ನೀವು ಕೂಡ ಪದವಿದರರಾಗಿದ್ದರೆ ಅಪ್ಲೇ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ತಿಳಿಯಿರಿ.

SBI recruitment 2024

ಎಸ್‌ಬಿಐ ಈ ವರ್ಷ ನೇಮಕ ಮಾಡುವ ಹುದ್ದೆಗಳ ಪೈಕಿ ಶೇಕಡ.85 ಬಿಇ ಪದವೀಧರರನ್ನೇ ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ.

ಭಾರತದಲ್ಲಿ ಪ್ರತಿವರ್ಷ ಸುಮಾರು 15 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಸ್‌ ಆಗಿ ಹೊರಬರುತ್ತಾರೆ. ಆದರೆ ಅವರುಗಳಲ್ಲಿ ಪ್ರತಿವರ್ಷವು ಸಹ ಫ್ರೆಶರ್‌ಗಳಾಗಿ IT/ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುಬೇಗ ಜಾಬ್ ಪಡೆಯುವುದು 155000 ದಿಂದ 230000 ವರೆಗಿನ ವಿದ್ಯಾರ್ಥಿಗಳು ಮಾತ್ರವೇ. ಹಾಗಿದ್ರೆ ಇಂಜಿನಿಯರಿಂಗ್ ಪದವಿ ಪಡೆದ ನೀವೆಲ್ಲ ಉತ್ತಮ ಸಂಬಳ, ಕರಿಯರ್‌ಗಾಗಿ ಕೇವಲ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಹೋಗಬೇಕಾ? ಖಂಡಿತಾ ಇಲ್ಲ. ಪದವಿ ಅರ್ಹತೆಯ ಯಾವುದೇ ಸರ್ಕಾರಿ ಹುದ್ದೆಗೆ, ಬ್ಯಾಂಕ್‌ ಹುದ್ದೆಗಳಿಗೂ ಅರ್ಜಿ ಸಲ್ಲಿಸಿ ಬಹುಬೇಗ ಕರಿಯರ್ ಆರಂಭಿಸಬಹುದು.

ಸರ್ಕಾರಿ ಒಡೆತನದ ಭಾರತೀಯ ಸ್ಟೇಟ್‌ ಬ್ಯಾಂಕ್‌ 12,000 ಹುದ್ದೆಗಳನ್ನು 2024-25ನೇ ಸಾಲಿನಲ್ಲಿ ನೇಮಕ ಮಾಡಲು ಮುಂದಾಗಿರುವ ಬ್ಯಾಂಕ್‌, ಈ ಹುದ್ದೆಗಳ ಪೈಕಿ ಶೇಕಡ.85 ರಷ್ಟು ಹುದ್ದೆಗಳಿಗೆ ಬಿಇ ಪದವೀಧರರನ್ನೇ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆಯಂತೆ.

ಹೊಸ ಉದ್ಯೋಗಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಟ್ರೈನಿಂಗ್ ನೀಡಿದ ನಂತರ ಬ್ಯಾಂಕ್‌ನ ವಿವಿಧ ವಿಭಾಗಗಳಿಗೆ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ನೇಮಕವಾಗುವ ಇಂಜಿನಿಯರ್‌ಗಳಿಗೆ ನೀಡುವ ಹುದ್ದೆಗಳ ಶ್ರೇಣಿಯಲ್ಲಿ ಯಾವುದೇ ಪಕ್ಷಪಾತ ಅನುಸರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕಿಂಗ್ system ಕುರಿತು ಇಂಜಿನಿಯರ್‌ಗಳಿಗೆ ಪರಿಚಯಿಸುವ ಜೊತೆಗೆ ಅವರ ಸಾಮರ್ಥ್ಯದ ಆಧಾರದ ಮೇಲೆ ಬ್ಯಾಂಕ್‌ನ ವ್ಯವಹಾರ ಮತ್ತು ಮಾಹಿತಿ ತಂತ್ರಜ್ಞಾನದ ಕೆಲಸಕ್ಕೆ ನಿಯೋಜಿಸುತ್ತದೆ. ಇದು ಬ್ಯಾಂಕ್‌ನಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಬಲವರ್ಧನೆಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ಬಿಇ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಐಟಿ ವಲಯದಲ್ಲಿ ಹೊಸದಾಗಿ ನೇಮಕಾತಿ ನಡೆಯುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಈ ಬಿಇ ಡಿಗ್ರಿಯವರ ಪಾಲಿಗೆ ವರದಾನವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ತಂತ್ರಜ್ಞಾನ ಬಹುಮುಖ್ಯವಾಗಿದ್ದು, ಯಾರೋಬ್ಬರು ಇದನ್ನು ನಿರ್ಲಕ್ಷಿಸುವಂತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್‌ ಕೂಡ ನಿಯಮಿತವಾಗಿ ತಂತ್ರಜ್ಞಾನದ ಮಹತ್ವ ಕುರಿತು ನಿಯಮಿತವಾಗಿ ಬ್ಯಾಂಕ್‌ಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ಹೇಳಿದ್ದಾರೆ.

ಬಿಇ ಪಾಸಾದವರಿಗೆ ಬ್ಯಾಂಕ್‌ ಜಾಬ್‌ಗಳು

BE ಪಾಸಾದವರು ಪದವಿ ಅರ್ಹತೆಯ ಯಾವುದೇ ಬ್ಯಾಂಕ್‌ ಹುದ್ದೆಗೆ ಅಪ್ಲೇ ಮಾಡಲು ಅರ್ಹರು. BE ಓದಿದವರು ಇಂಗ್ಲಿಷ್‌ ಮತ್ತು ಗಣಿತದಲ್ಲಿ ಹೆಚ್ಚು ಅರಿವು ಹೊಂದಿರುವ ಕಾರಣ ಅವರು IBPS ನೇಮಕ ಪರೀಕ್ಷೆಗಳಲ್ಲಿ ಭಾಗವಹಿಸಿ, ಬಹುಬೇಗ ಬ್ಯಾಂಕ್‌ ಹುದ್ದೆ ಪಡೆದುಕೊಳ್ಳಬಹುದು. IBPS ಪ್ರತಿವರ್ಷವು ಸಹ ಬ್ಯಾಂಕ್‌ಗಳ ಪ್ರೊಬೇಷನರಿ ಆಫೀಸರ್‌ಗಳು, ಕ್ಲರ್ಕ್‌ ಹುದ್ದೆಗಳು, ಸ್ಪೆಷಲಿಸ್ಟ್‌ ಆಫೀಸರ್‌ಗಳು, ಪಿಒ & ಎಂಟಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸುತ್ತದೆ. ಈ ಪರೀಕ್ಷೆಗಳನ್ನು ತೆಗೆದುಕೊಂಡ BE ಪದವೀಧರರು ಹೆಚ್ಚಾಗಿ ಆಯ್ಕೆಯಾಗುವ ಅವಕಾಶವಿದೆ. ಕಾರಣ ಈ ಪರೀಕ್ಷೆಗಳಲ್ಲಿ ಗಣಿತ, ರೀಸನಿಂಗ್, ಕೋಡಿಂಗ್ – ಡಿಕೋಡಿಂಗ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ ಲೆಟರ್ & ಪ್ರಬಂಧ ಬರವಣಿಗೆ, ಸಾಮಾನ್ಯ ಜ್ಞಾನದ ಪ್ರಶ್ನೆಗಳಿರುತ್ತವೆ.

ಇತರೆ ವಿಷಯಗಳು

ರಾಜ್ಯದ ಈ 10 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ! ತಗ್ಗಿದ ತಾಪಮಾನ

ರೈತರಿಗೆ ಬಿಗ್ ನ್ಯೂಸ್..! ಬರೋಬ್ಬರಿ 2000  ಹೆಚ್ಚಿನ ಮೊತ್ತ ಖಾತೆಗೆ


Share

Leave a Reply

Your email address will not be published. Required fields are marked *