rtgh
Headlines

ರೈತರೇ ಗಮನಿಸಿ: ಇನ್ಮುಂದೆ ನಿಮ್ಮ RTC ಗೆ ಆಧಾರ್ ಲಿಂಕ್ ಕಡ್ಡಾಯ!

RTC
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, RTC ಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದೆ. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆಯ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ.

RTC

ಅಗತ್ಯ ದಾಖಲೆಗಳು :
ಸರ್ಕಾರದ ಸೌಲಭ್ಯವನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯವನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಮತ್ತು ಜಮೀನಿನ ಉತಾರಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ.

ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಗ್ರಾಮದ ಗ್ರಾಮ ಒನ್ ಅನ್ನು ಕೇಂದ್ರ, ಆನ್‌ಲೈನ್ ನಲ್ಲಿ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿಯನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಸಹ ಓದಿ: ರಾಜ್ಯದ ಮಹಿಳೆಯರಿಗೆ ಬಂಪರ್​ ಗಿಫ್ಟ್! ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ.

7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರವು RTC ಗೆ ಆಧಾರ್‌ ಕಾರ್ಡ್ ಅನ್ನು ಜೋಡಣೆ ಮಾಡುವಂತಹ ಕಾರ್ಯವನ್ನು ಆರಂಭ ಮಾಡಿತ್ತು. ಕೆಲವು ರೈತರು ಆಧಾರ್ ಲಿಂಕ್ ಮಾಡಿದ್ದರು. ಆದರೆ ಈಗ ಸರ್ಕಾರದ ಸೌಲಭ್ಯಗಳು ಬೇಕೆಂದರೆ ಆಧಾರ್‌ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಬೇಕು ಎಂದು ಸರ್ಕಾರವು ಹೇಳಿದ್ದು, ರೈತರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾಗುತ್ತಾರೆ. ಹೆಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ ಮಾಹಿತಿ ಸತ್ತರ ರೈತರ ಹೆಸರಿನಲ್ಲಿ ಇನ್ನೂ ಸಹ ಇವೆ.

ಸರ್ಕಾರದ ಯೋಜನೆಗಳ ಸಹಾಯ ಪಡೆಯಲು, ಶಾಶ್ವತವಾದ ಪರಿಹಾರದ ಅಂಗವಾಗಿ RTC, ಆಧಾರ್ ಜೋಡಣೆ ಮಾಡಲು ಸೂಚನೆಯನ್ನು ನೀಡಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಲೀಕರು, ರೈತರ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ RTC ಗಳನ್ನು ಆಧಾರ್ ಕಾರ್ಡ್‌ ಗೆ ಜೋಡಣೆ ಮಾಡುವ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು” ಎಂದು ಸಚಿವರು ಮನವಿಯನ್ನು ಮಾಡಿದ್ದಾರೆ.

ಹಳೆಯ ಆಧಾರ್ ಕಾರ್ಡ್ ಜೂನ್ 14 ನಂತರ ರದ್ದು.! UIDAI ಹೊಸ ಅಪ್ಡೇಟ್‌

ವಯಸ್ಕರಿಗೆ ಪ್ರತಿ ತಿಂಗಳು 5,000 ಖಾತೆಗೆ ಜಮಾ!


Share

Leave a Reply

Your email address will not be published. Required fields are marked *