rtgh
Headlines

ಏಪ್ರಿಲ್ 1 ರಿಂದಲೇ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭ! ಇಂತವರಿಗೆ ಮಾತ್ರ ಅವಕಾಶ

ration card online apply
Share

ಹಲೋ ಸ್ನೇಹಿತರೇ, ಪಡಿತರ ಚೀಟಿ ಎಷ್ಟು ಮಹತ್ವ ಪಡೆದುಕೊಂಡಿದೆ ಅನ್ನೋದು ನಿಮಗೆಲ್ಲರಿಗೂ ಗೊತ್ತು. ಅದರಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ಪಡಿತರ ಚೀಟಿಯ ಅಗತ್ಯತೆ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಸಿದೆ. ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಕಡು ಬಡವರಿಗೆ ಆಹಾರ ಧಾನ್ಯಗಳನ್ನ ಒದಗಿಸುವ ಸಲುವಾಗಿ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕಾರ್ಡ್ ನಿಂದ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಸಿಗಬಹುದು ಅಥವಾ ಸಾಲ ಸೌಲಭ್ಯಗಳು ಸಿಗಲಿದೆ.

ration card online apply

Contents

ಹೊಸ ಪಡಿತರ ಚೀಟಿಗಾಗಿ ಕಾಯ್ತಾ ಇರುವವರಿಗೆ ಗುಡ್ ನ್ಯೂಸ್!

ಪಡಿತರ ಚೀಟಿ ಮಹತ್ವ ಅಂತೂ ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಡಿ ಬಿ ಟಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ ಹೊಸ ಪಡಿತರ ಚೀಟಿಗಾಗಿ ನೀವು ಕಾಯ್ತಾ ಇದ್ದರೆ ಸರ್ಕಾರ ಗುಡ್ ನ್ಯೂಸ್ ನೀಡಿದೆ ಅದೇನು ಗೊತ್ತಾ? ಹೌದು, ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ನೀವು ಅರ್ಜಿ ಸಲ್ಲಿಸುವುದು ಇದ್ದರೆ ಏಪ್ರಿಲ್ 1 ರಿಂದ ಸರ್ಕಾರ ಅವಕಾಶ ಮಾಡಿಕೊಡಲಿದೆ.

ಈ ಬಿಪಿಎಲ್ ಕಾರ್ಡ್ ಒಂದು ನಿಮ್ಮ ಬಳಿ ಇದ್ದರೆ ಯಾವುದೇ ಸರ್ಕಾರಿ ಯೋಜನೆಗಳು ನಿಮ್ಮ ಕೈತಪ್ಪಿ ಹೋಗುವುದಿಲ್ಲ. ಹಾಗಾಗಿ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ ಹಾಗೂ ಮುಂದಿನ ವಾರವೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ, ತಪ್ಪದೆ ನ್ಯಾಯಬೆಲೆ ಅಂಗಡಿ ಅಥವಾ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಆನ್ಲೈನ್ ನಲ್ಲಿಯೂ ಕೂಡ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋದ್ರೆ ಅರ್ಜಿ ಸಲ್ಲಿಸುವ ಅವಕಾಶ ಇದೆ.

ಹೊಸ ಪಡಿತರ ಚೀಟಿಗೆ ಬೇಕಾಗಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ವಯಸ್ಸಿನ ಪ್ರಮಾಣ ಪತ್ರ
  • ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ವಿವರ
  • ಸ್ವಯಂಘೋಷಿತ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸನ್ಸ್
  • ಮೊಬೈಲ್ ಸಂಖ್ಯೆ
  • ಮನೆಯ ಎಲ್ಲಾ ಸದಸ್ಯರ ಫೋಟೋಗಳು
  • ವಿಳಾಸ ಪುರಾವೆ

ಇದನ್ನೂ ಸಹ ಓದಿ : ಗೃಹಜ್ಯೋತಿ ವಿದ್ಯುತ್ ನಲ್ಲಿ ಹೊಸ ಬದಲಾವಣೆ!! ವಿದ್ಯುತ್‌ ಸಲುವಾಗಿ ದೊಡ್ಡ ಶಾಕ್‌ ನೀಡ್ತಿದೆ ಸರ್ಕಾರ

ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ಏಪ್ರಿಲ್ 1 2024ಕ್ಕೆ ಆರಂಭವಾಗುವ, ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೀವು ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಬಹುದು.

ಬೇಕಾಗುವ ಅರ್ಹತೆಗಳೇನು?

* ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ ಕೆಳಗಿನವರು ಆಗಿರಬೇಕು.

* ಕರ್ನಾಟಕದ ಕಾಯಂ ನಿವಾಸಿಗಳೇ ಆಗಿರಬೇಕು.

* ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ಇಲ್ಲ.

* ಹೊಸದಾಗಿ ಮದುವೆಯಾದ ನವ ವಿವಾಹಿತ ಜೋಡಿ ಇತರ ಮನೆ ಸದಸ್ಯರಿಂದ ದೂರವಾಗಿ ಜೀವನ ನಡೆಸುವುದಾದರೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.

* ಇನ್ನು ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಬಿಪಿಎಲ್ ಹಾಗೂ ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಈ ಎಲ್ಲ ಮುಖ್ಯವಾಗಿರುವಂತ ವಿಚಾರಗಳನ್ನ ನೀವು ನೆನಪಿಟ್ಟುಕೊಂಡು ಹೊಸ ಪಡಿತರ ಚೀಟಿ ನಿಮಗೆ ಅಗತ್ಯ ಇದ್ದರೆ ಅರ್ಜಿ ಸಲ್ಲಿಸಲು ಸಿದ್ಧರಾಗಿ.

ಇತರೆ ವಿಷಯಗಳು:

ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ!

ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳ.! ಎಷ್ಟು ಏರಿಕೆಯಾಗಿದೆ ಗೊತ್ತಾ?

2024-25 ಶೈಕ್ಷಣಿಕ ವರ್ಷಕ್ಕೆ 10, 12 ನೇ ತರಗತಿ ಹೊಸ ಪಠ್ಯಕ್ರಮ ಬಿಡುಗಡೆ: ಇಲ್ಲಿ ಡೌನ್‌ಲೋಡ್ ಮಾಡಿ


Share

Leave a Reply

Your email address will not be published. Required fields are marked *