rtgh
Headlines

ಕಾರ್ಮಿಕರಿಗಾಗಿ ರಾಜ್ಯ ಸರ್ಕಾರದಿಂದ ಹೊಸ ಸ್ಕೀಮ್! ಇನ್ಮುಂದೆ ಸಿಗಲಿದೆ ಈ ಹೊಸ ಬೆನಿಫಿಟ್

gig workers insurance karnataka
Share

ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿ ಮಾಡಲಾಗಿದೆ. ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಈ ಸೌಲಭ್ಯ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

gig workers insurance karnataka

ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಈ ವಿಮಾ ಯೋಜನೆ ಜಾರಿಗೆ ತರಲಾಗಿದ್ದು, ಈ ಗಿಗ್ ಕಾರ್ಮಿಕ ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ / ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯವಾಗಲಿದ್ದು, ಈ ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯತೆ ಇರುವುದಿಲ್ಲ. ಎಲ್ಲಾ ಅರ್ಹ ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಈ ವಿಮಾ ಸೌಲಭ್ಯ ಮೂಲಕ, ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ 2.00 ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು ರೂ. 4.00 ಲಕ್ಷ ರೂ. ಸಿಗುತ್ತದೆ. ಒಂದು ವೇಳೆ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2.00 ಲಕ್ಷಗಳವರೆಗೆ ಸಿಗುತ್ತದೆ. ಜೊತೆಗೆ ಅಪಘಾತ ಪ್ರಕರಣಗಳಿಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ.1.00 ಲಕ್ಷಗಳವರೆಗೆ ಸಿಗುತ್ತದೆ.

ಇದನ್ನೂ ಸಹ ಓದಿ : BPL ಕಾರ್ಡ್‌ ರದ್ದುಗೊಳಿಸುವಂತೆ ಸಿಎಂ ಸೂಚನೆ..!

ಸದ್ಯ ಜೀವ ವಿಮಾ ನೋಂದಣಿಗೆ ಅರ್ಹ ಕಾರ್ಮಿಕರು ಯಾರೆಲ್ಲ?

ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್, ಬ್ಲಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೋ, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಈ ವಿಮಾ ಯೋಜನೆ ಸೌಲಭ್ಯ ದೊರೆಯುತ್ತದೆ.

ಈ ವಿಮಾ ಯೋಜನೆ ನೋಂದಣಿಗೆ 18 ರಿಂದ 60 ವಯೋಮಾನದವಾರಗಿದ್ದು, ಕಾರ್ಮಿಕ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಜೊತೆಗೆ ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು. ಮುಖ್ಯವಾಗಿ ಕರ್ನಾಟಕದಲ್ಲಿ ವೃತ್ತಿಯಲ್ಲಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ ಈ ವಿಮಾ ಸೌಲಭ್ಯ ಪಡೆಯಲು ಅವಕಾಶ ಇದೆ.

ಬೇಕಾಗುವ ಅವಶ್ಯಕ ದಾಖಲೆಗಳು:

  • ಆಧಾ‌ರ್ ಕಾರ್ಡ್
  • ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕಾರ್ಮಿಕ ಸಹಾಯವಾಣಿ 155214 (24×7), ಕಾರ್ಮಿಕ ಅಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರ ಕಛೇರಿಗಳು, ಕಾರ್ಮಿಕ ಇಲಾಖೆ.

ಇತರೆ ವಿಷಯಗಳು:

ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ 2 ಗಂಟೆ ವಿಶೇಷ ಕಾರ್ಯಕ್ರಮ! ಶಿಕ್ಷಣ ಇಲಾಖೆ ಆದೇಶ

12th ಪಾಸಾದವರಿಗೆ ಹೆಡ್ ಕಾನ್ಸ್ಟೇಬಲ್ ಹುದ್ದೆ.! ಆಯ್ಕೆಯಾದ್ರೆ 1 ಲಕ್ಷ ಸಂಬಳ

ಮೋದಿ ಸರ್ಕಾರದಿಂದ ಜನತೆಗೆ ಗುಡ್ ನ್ಯೂಸ್.! ಪ್ರತಿಯೊಬ್ಬರಿಗೂ ನೇರ 10 ಲಕ್ಷ


Share

Leave a Reply

Your email address will not be published. Required fields are marked *