ಹಲೋ ಸ್ನೇಹಿತರೇ, ಕಳೆದ ವರ್ಷದಲ್ಲಿ ಮಳೆಯಾಗದೇ ನೀರಿಲ್ಲದೇ ಪರದಾಡ್ತಿದ್ದ ಸಂಕಷ್ಟಕ್ಕೆ ಈ ವರ್ಷದ ಮುಂಗಾರು ಇತೀಶ್ರಿ ಹಾಡುವ ಸುದ್ದಿಯೊಂದನ್ನ ಹವಾಮಾನ ಇಲಾಖೆ ನೀಡಿದೆ. ಮುಂಗಾರು ಋತುವಿನ ಮಳೆಯ ಭವಿಷ್ಯವನ್ನು ವಿವರಿಸಿದ ಹವಾಮಾನ ಇಲಾಖೆ ಈ ವರ್ಷ ವಾಡಿಕೆಗೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.
ರಾಜ್ಯವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶೇ.106ಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಸಹ ಓದಿ : ಗ್ಯಾಸ್ ಸಬ್ಸಿಡಿ ಡಬಲ್! ಹಣ ಖಾತೆಗೆ ಜಮಾ ಆಗಲು ಈ ಕೆಲಸ ಕಡ್ಡಾಯ
ಉಷ್ಣ ಮಾರುತದ ಅಬ್ಬರಕ್ಕೆ ಕಾರಣವಾಗಿರುವ ಎಲ್ ನಿನೋ ಪ್ರಭಾವ ಜೂನ್ ಹೊತ್ತಿಗೆ ತಗ್ಗಲಿದೆ. ಮುಂಗಾರಿಗೆ ಪೂರಕವಾದ ಲಾ ನಿನಾ ಪ್ರಭಾವ ಆಗಸ್ಟ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಹೆಚ್ಚಿರಲಿದೆ. ಈ ಬಾರಿ ಸಾಧಾರಣಕ್ಕಿಂತ ಅಧಿಕ ಮಳೆ ಆಗಲಿದೆ. ಎಂದು ಮೃತ್ಯುಂಜಯ ಮಹಾಪಾತ್ರ ವಿವರಿಸಿದ್ದಾರೆ.
ಕರ್ನಾಟಕದ ಬಹುತೇಕ ಕಡೆ ಏ. 16 ಮತ್ತು 17ರಂದು ಒಣ ಹವೆ ಇರಲಿದ್ದು, ಏ.18ರ ನಂತರ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು:
ರಾಜ್ಯ ಸರ್ಕಾರದ ಧೀಡಿರ್ ನಿರ್ಧಾರ! ರೇಷನ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ
ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ
ಕರ್ನಾಟಕದ 6 ನಗರಗಳಲ್ಲಿ ́ನಮ್ಮ ಯಾತ್ರಿʼ ಸೇವೆ ಆರಂಭ.! ಬುಕ್ ಮಾಡುವುದು ಹೇಗೆ?